ವಾಸೀಂ ಜಾಫರ್ ಶತಕ; ಸುಸ್ಥಿತಿಯಲ್ಲಿ ಮುಂಬೈ
ಮುಂಬೈ: ವಾಸೀಂ ಜಾಫರ್ ಅವರ ದಾಖಲೆಯ ಶತಕದ ನೆರವಿನಿಂದಾಗಿ ಮುಂಬೈ ತಂಡ ಸೌರಾಷ್ಟ್ರದ ವಿರುದ್ಧ ನಡೆಯುತ್ತಿರುವ ರಣಜಿ ಫೈನಲ್ ಪಂದ್ಯದ ತನ್ನ ಮೊದಲನೇ ಇನಿಂಗ್ಸ್‌ನಲ್ಲಿ ಉತ್ತಮ ಮೊತ್ತ ಗಳಿಸುವತ್ತ ದಾಪುಗಾಲು ಇಟ್ಟಿದೆ. ಪಂದ್ಯದ ಮೊದಲನೇ ದಿನವಾದ ಶನಿವಾರ ಸೌರಾಷ್ಟ್ರದ ಮೊದಲ ಇನಿಂಗ್ಸ್ ಅನ್ನು 148 ರನ್‌ಗಳಿಗೆ ನಿಯಂತ್ರಿಸುವಲ್ಲಿ ಸಫಲವಾಗಿದ್ದ ಅಗರ್ಕರ್ ಪಡೆ, ನಂತರ ತನ್ನ ಇನಿಂಗ್ಸ್ ಆರಂಭಿಸಿ ದಿನಾಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೇ 19 ರನ್ ಗಳಿಸಿತ್ತು. ಪಂದ್ಯದ ಎರಡನೇ ದಿನ ತನ್ನ ಇನಿಂಗ್ಸ್ ಮುಂದುವರೆಸಿದ ಮುಂಬೈ, ದಿನಾಂತ್ಯಕ್ಕೆ 6 ವಿಕೆಟ್ ನಷ್ಟಕ್ಕೆ 287 ರನ್ ಗಳಿಸಿ ಸುಸ್ಥಿತಿಯಲ್ಲಿದೆ.
ಭಾನುವಾರ ದಿನದಾಟದಲ್ಲಿ ಮುಂಬೈನ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಗಟ್ಟಿಯಾಗಿ ನಿಂತು ರನ್ ಪೇರಿಸುವಲ್ಲಿ ವಿಫಲರಾದರು. ಜಾಫರ್ ಅವರೊಂದಿಗೆ ಇನಿಂಗ್ಸ್ ಆರಂಭಿಸಿದ್ದ ಕೌಸ್ತುಭ್ ಪವಾರ್ ಕೇವಲ 21 ರನ್ ಗಳಿಸಿ ಔಟಾದರು. ಅವರ ನಂತರ ಬಂದ ತಾರೆ ಕೇವಲ 3 ರನ್ ಗಳಿಸಿ ಪೆವಿಲಿಯನ್ ಸೇರಿದರೆ, ಸಚಿನ್ ತೆಂಡೂಲ್ಕರ್ 22 ರನ್ ಗಳಿಸಿ ರನೌಟ್ ಆದರು. ಮಧ್ಯಮ ಕ್ರಮಾಂಕದ ಅಭಿಷೇಕ್ ನಾಯರ್ (26), ಅಜಿತ್ ಅಗರ್ಕರ್ (2) ಸಹ ಬೇಗನೆ ವಿಕೆಟ್ ಒಪ್ಪಿಸಿದರು.
ಇಂಥಾ ಪರಿಸ್ಥಿತಿಯಲ್ಲಿ ಕ್ರೀಸ್‌ನಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್ ಮಾಡಿದ ಜಾಫರ್, 16 ಬೌಂಡರಿ ಹಾಗೂ 1 ಸಿಕ್ಸರ್ ಒಳಗೊಂಡಂತೆ 132 ರನ್ ಗಳಿಸುವ ಮೂಲಕ ತಮ್ಮ ತಂಡ ಉತ್ತಮ ಮೊತ್ತ ಪೇರಿಸಲು ಸಹಾಯ ಮಾಡಿದರು. ಇದು ಅವರ 32ನೇ ರಣಜಿ ಶತಕ.
ಮುಂಬೈ ತಂಡ 6 ವಿಕೆಟ್ ನಷ್ಟಕ್ಕೆ 287 ರನ್ ಗಳಿಸಿದ್ದು, ಒಟ್ಟು 139 ರನ್ ಮುನ್ನಡೆ ಪಡೆದಿದೆ. ಹಿಕೇನ್ ಶಾ (41) ಮತ್ತು ಕುಲಕರ್ಣಿ (18) ಕ್ರೀಸ್‌ನಲ್ಲಿದ್ದಾರೆ.
ಜಾಫರ್ ದಾಖಲೆ
ಇದುವರೆಗಿನ ರಣಜಿ ಪಂದ್ಯಾವಳಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಕೀರ್ತಿಗೆ ಜಾಫರ್ ಪಾತ್ರರಾಗಿದ್ದಾರೆ. ಭಾನುವಾರ ದಾಖಲಿಸಿದ ಶತಕ ಸೇರಿದಂತೆ ಅವರು ಈವರೆಗೆ ರಣಜಿಯಲ್ಲಿ 9155 ರನ್ ಗಳಿಸಿದ್ದಾರೆ. 1905 ರನ್ ಗಳಿಸಿರುವ ಅಮೋಲ್ ಮುಜುಂದಾರ್ ಹೆಸರಿನಲ್ಲಿ ಈ ದಾಖಲೆ ಇತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

