'ಯಾವುದೇ ಗ್ರಾನ್ ಸ್ಲ್ಯಾಮ್ ಗೆಲ್ಲಬಲ್ಲೆ'

ಮೆಲ್ಬರ್ನ್: ಸತತ ಎರಡನೇ ಬಾರಿಗೆ ಆಸ್ಟ್ರೇಲಿಯಾ ಓಪನ್ ಟೆನಿಸ್ ಚಾಂಪಿಯನ್‌ಷಿಪ್ ಗೆದ್ದ ಬೆಲಾರಷ್ಯಾದ ವಿಕ್ಟೋರಿಯಾ ಅಜರೆಂಕಾ ಅವರಿಗೆ ಅತೀವ ಆತ್ಮವಿಶ್ವಾಸದಿಂದ ಬೀಗುತ್ತಿದ್ದಾರಂತೆ. ಈಗ ಯಾವುದೇ ಗ್ರಾನ್ ಸ್ಲ್ಯಾಮ್ ಗೆಲ್ಲಬಲ್ಲೇ ಎಂಬ ವಿಶ್ವಾಸ ಮೂಡಿದೆಯಂತೆ. ಹಾಗಂತಾ ಅವರೇ ಹೇಳಿಕೊಂಡಿದ್ದಾರೆ. ಶನಿವಾರ ನಡೆದ ಆಸ್ಟ್ರೇಲಿಯಾ ಓಪನ್ ಫೈನಲ್ ಪಂದ್ಯದಲ್ಲಿ ಚೀನಾದ ಲೀ ನಾ ವಿರುದ್ಧ ಗೆದ್ದ ನಂತರ ಸಂಭ್ರಮ ಆಚರಿವುದರೊಂದಿಗೆ ಮಾಧ್ಯಮದೊಂದಿಗೆ ಅಜರೆಂಕಾ ತಮ್ಮ ಅನಿಸಿಕೆ ಹಂಚಿಕೊಂಡರು.
'ಈ ಪಂದ್ಯಾವಳಿಯ ನಂತರ ಇಂತಹದ್ದೇ ಗ್ರಾನ್ ಸ್ಲ್ಯಾಮ್ ಗೆಲ್ಲಬೇಕು ಎಂದು ತೀಮಾರ್ನಿಸಿಲ್ಲ. ಗೆಲ್ಲುವುದು ಮಾತ್ರ ನನ್ನ ಗುರಿ. ಅಲ್ಲದೆ ಹಿಂದಿನ ಅಂಕಿ ಸಂಖ್ಯೆಗಳನ್ನು ನೋಡಬಯಸುವುದಿಲ್ಲ. ಯಾವುದೇ ಪ್ರಮುಖ ಪಂದ್ಯಾವಳಿಯಲ್ಲಿ ಗೆಲ್ಲುವ ಆಶಯವನ್ನು ನಾನು ಹೊಂದಿದ್ದೇನೆ' ಎಂದು ಅಜರೆಂಕಾ ಹೇಳಿದರು.
ಆದರೆ, ಅಜರೆಂಕಾ ಆಸ್ಟ್ರೇಲಿಯಾ ಓಪನ್ ಸೆಮಿಫೈನಲ್ ಪಂದ್ಯದ ಮಹತ್ವದ ಸಮಯದಲ್ಲಿ ವೈದ್ಯಕೀಯ ಸೇವೆ ಪಡೆಯುವ ಮೂಲಕ ತೀವ್ರ ಟೀಕೆಗೆ ಗುರಿಯಾಗಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


