ಕ್ರೀಡೆ

ಮುಂಬೈ ದಾಳಿಗೆ ಕುಸಿದ ಸೌರಾಷ್ಟ್ರ

ಮುಂಬೈ ದಾಳಿಗೆ ಕುಸಿದ ಸೌರಾಷ್ಟ್ರ
Published On :

ಮುಂಬೈ: ಮಧ್ಯಮ ವೇಗಿ ಧವಳ್ ಕುಲಕರ್ಣಿ ಅವರ ಉತ್ತಮ ಪ್ರದರ್ಶನದಿಂದಾಗಿ ಶನಿವಾರ ಆರಂಭಗೊಂಡ ಮುಂಬೈ ತಂಡದ ವಿರುದ್ಧದ ರಣಜಿ ಫೈನಲ್ ಪಂದ್ಯದಲ್ಲಿ ಸೌರಾಷ್ಟ್ರ ತನ್ನ ಪ್ರಥಮ ಇನಿಂಗ್ಸ್‌ನಲ್ಲಿ 148 ರನ್‌ಗಳ ಅಲ್ಪ ಮೊತ್ತಕ್ಕೆ ಆಲೌಟ್ ಆಗಿದೆ.
ಟಾಸ್ ಗೆದ್ದ ಮುಂಬೈ ತಂಡದ ನಾಯಕ ಅಗರ್ಕರ್, ಸೌರಾಷ್ಟ್ರ ತಂಡವನ್ನು ಮೊದಲು ಬ್ಯಾಟಿಂಗ್‌ಗೆ ಇಳಿಸಿದರು. ಇನಿಂಗ್ಸ್‌ನ ಮೊತ್ತ ಕೇವಲ 2 ರನ್ ಆಗಿದ್ದಾಗ ಜೋಗಿಯಾನಿ ಅವರ ವಿಕೆಟ್ ಕೆಡವಿದ ಕುಲಕರ್ಣಿ, ಆನಂತರ ಡೇವ್, ಜಾಕ್ಸನ್ ಅವರ ವಿಕೆಟ್‌ಗಳನ್ನೂ ಕಬಳಿಸಿ ಮುಂಬೈಗೆ ಪೆಟ್ಟು ಕೊಟ್ಟರು.
ಕುಲಕರ್ಣಿಯವರ ಈ ದಾಳಿಗೆ ಕೈ ಜೋಡಿಸಿದ ನಾಯರ್ ಅವರು, ವಾಸವದಾ, ಮಾಕ್ವಾನಾ ಅವರ ವಿಕೆಟ್ ಉರುಳಿಸಿದರು. ವಾಸವದಾ (55) ಬಿಟ್ಟರೆ ಬೇರ್ಯಾವ ಬ್ಯಾಟ್ಸ್‌ಮನ್‌ಗಳೂ ಮುಂಬೈ ಬೌಲಿಂಗ್ ದಾಳಿಯನ್ನು ಮೆಟ್ಟಿ ನಿಲ್ಲುವ ಸಾಹಸ ಮಾಡಲಿಲ್ಲ. ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಮಾಕ್ವಾನಾ (26) ಹಾಗೂ ಅಂತಿಮ ಹಂತದ  ಬ್ಯಾಟ್ಸ್‌ಮನ್ ಉನಾದ್ಕತ್ (22) ಇನಿಂಗ್ಸ್ ಮೇಲೆತ್ತಲು ಪ್ರಯತ್ನಿಸಿದರಾದರೂ ಅವರು ಸಫಲರಾಗಲಿಲ್ಲ. ಅಂತಿಮವಾಗಿ, ಮೊದಲ ಇನಿಂಗ್ಸ್‌ನಲ್ಲಿ 148 ರನ್ ಗಳಿಸುವಲ್ಲಿಗೆ ಸೌರಾಷ್ಟ್ರ ತನ್ನೆಲ್ಲಾ ವಿಕೆಟ್‌ಗಳನ್ನೂ ಕಳೆದುಕೊಂಡಿತು. ಕುಲಕರ್ಣಿ ಅವರು ತಾವು ಮಾಡಿದ ಒಟ್ಟು 21.3 ಓವರ್‌ಗಳಲ್ಲಿ 24 ರನ್ ನೀಡಿ 4 ವಿಕೆಟ್‌ಗಳನ್ನು ಕಬಳಿಸಿ, ಗಮನ ಸೆಳೆದರು.
ಸೌರಾಷ್ಟ್ರದ ಇನಿಂಗ್ಸ್ ನಂತರ, ಮುಂಬೈ ದಿನಾಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೇ 19 ರನ್ ಗಳಿಸಿತು. ಆರಂಭಿಕರಾದ ಜಾಫರ್, ಪವಾರ್ ಕ್ರಮವಾಗಿ 11 ಹಾಗೂ 4 ರನ್ ಗಳಿಸಿ, ಅಜೇಯರಾಗಿ ಉಳಿದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.