ಕ್ರೀಡೆ

ಮುಂಬೈ ತಂಡಕ್ಕೆ ಸೋಲು

Published On :

ನವದೆಹಲಿ: ಡ್ರಾಗ್ ಫ್ಲಿಕರ್ ಸಂದೀಪ್ ಸಿಂಗ್ ಅವರ ಹ್ಯಾಟ್ರಿಕ್ ಗೋಲುಗಳ ಹೊರತಾಗಿಯೂ ಮುಂಬೈ ಮ್ಯಾಜಿಷಿಯನ್ಸ್ ತಂಡ, ಶನಿವಾರ ನಡೆದ ಡೆಲ್ಲಿ ವೇವ್‌ರೈಡರ್ಸ್ ವಿರುದ್ಧದ ಹಾಕಿ ಇಂಡಿಯಾ ಲೀಗ್ ಪಂದ್ಯದಲ್ಲಿ 4-3 ಅಂತರದ ಸೋಲು ಕಂಡಿತು. ಪಂದ್ಯದ 6ನೇ ನಿಮಿಷದಲ್ಲಿ ಡೆಲ್ಲಿ ತಂಡದ ಇಮ್ರಾನ್ ಖಾನ್ ಅವರು ಗೋಲು ಗಳಿಸಿ, ತಮ್ಮ ತಂಡಕ್ಕೆ 1-0 ಅಂತರವನ್ನು ತಂದುಕೊಟ್ಟರು. ನಂತರ, ಪಂದ್ಯದ 12ನೇ ಹಾಗೂ 22ನೇ ನಿಮಿಷದಲ್ಲಿ ಡೆಲ್ಲಿ ತಂಡ ದಕ್ಷಿಣ ಆಫ್ರಿಕಾ ಆಟಗಾರ ಲಾಯ್ಡ್ ನೋರಿಸ್ ಜೋನ್ಸ್ ಅವರು ಗೋಲು ಗಳಿಸಿ ತಂಡಕ್ಕೆ 3-0ಯ ಮುನ್ನಡೆ ತಂದಿತ್ತರು. ಆದರೆ, ಈ ಹಂತದಲ್ಲಿ ಮುಂಬೈ ತಂಡ ತಿರುಗಿ ಬಿತ್ತು. ಪಂದ್ಯದ 28ನೇ ನಿಮಿಷದಲ್ಲಿ ಸಂದೀಪ್ ಸಿಂಗ್ ಅವರ ಸಹಾಯದಿಂದ ಮುಂಬೈ ತಂಡ ಮೊದಲ ಗೋಲು ಗಳಿಸಿತು. ಅತ್ತ, ಪಂದ್ಯದ 51ನೇ ನಿಮಿಷದಲ್ಲಿ ರೂಪಿಂದರ್ ಸಿಂಗ್, ಡೆಲ್ಲಿ ತಂಡದ ಪರ ನಾಲ್ಕನೇ ಗೋಲು ಗಳಿಸಿದರು. ಆದರೆ, ಮತ್ತೆ ಪುಟಿದೆದ್ದ ಸಂದೀಪ್ ಸಿಂಗ್ ಪಂದ್ಯದ 56ನೇ ನಿಮಿಷದಲ್ಲಿ ಹಾಗೂ 66ನೇ ನಿಮಿಷದಲ್ಲಿ ಮತ್ತೆರಡು ಗೋಲು ಗಳಿಸಿ ತಮ್ಮ ತಂಡಕ್ಕೆ ನೆರವಾದರು. ಆದರೆ, ಸಂದೀಪ್ ನೀಡಿದ ಸಹಾಯಕ್ಕೆ ಮತ್ತಷ್ಟು ಬೆಂಬಲ ನೀಡುವಲ್ಲಿ ಮುಂಬೈ ತಂಡದ ಯಾವ ಆಟಗಾರರು  ವಿಫಲರಾದರು. ಪಂದ್ಯ ಮುಗಿಯುವವರೆಗೂ ಆ ತಂಡದಿಂದ ಮತ್ಯಾವ ಗೋಲೂ ದಾಖಲಾಗಲಿಲ್ಲ. ಅಂತಿಮವಾಗಿ, ಡೆಲ್ಲಿ ತಂಡ 4-3 ಗೋಲುಗಳ ಅಂತರದಿಂದ ಪಂದ್ಯವನ್ನು ಗೆದ್ದುಕೊಂಡಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.