ಗುಡ್ಡಗಾಡಿನಲ್ಲಿ ಗೆಲವು ಯಾರಿಗೆ?

ಧರ್ಮಶಾಲಾ: ಸರಣಿಯಲ್ಲಿ ವಿಜಯ ಸಾಧಿಸುವ ಮೂಲಕ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಭಾರತ ತಂಡ ಭಾನುವಾರ ನಡೆಯಲಿರುವ 5ನೇ ಮತ್ತು ಅಂತಿಮ ಪಂದ್ಯದಲ್ಲಿ ಗೆಲ್ಲಲು ಎದುರು ನೋಡುತ್ತಿದೆ.
5 ಪಂದ್ಯಗಳ ಸರಣಿಯಲ್ಲಿ 4-1 ಅಂತರದಿಂದ ಜಯ ಕಾಣುವ ಮೂಲಕ, ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಟೆಸ್ಟ್ ಸರಣಿಗೂ ಮುನ್ನ ಶಕ್ತಿ ಪ್ರದರ್ಶನಕ್ಕೆ ಎದುರು ನೋಡುತ್ತಿದೆ. ಫಾರ್ಮ್‌ನಲ್ಲಿರುವ ಭಾರತ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಸರಣಿ ಗೆದ್ದ ನಂತರ ನಿಟ್ಟುಸಿರು ಬಿಟ್ಟಿದ್ದು, ಅಂತಿಮ ಪಂದ್ಯದಲ್ಲಿ ಮತ್ತಷ್ಟು ಮೈಚಳಿ ಬಿಟ್ಟು ಆಡುವ ಸಾಧ್ಯತೆಗಳಿವೆ.
ಈಗಾಗಲೇ ಸರಣಿ ಗೆದ್ದಿದ್ದರೂ ಭಾರತ ಕೆಲ ವಿಭಾಗಗಳಲ್ಲಿ ವೈಫಲ್ಯ ಕಾಣುತ್ತಿದೆ. ಹೀಗಾಗಿ ಅಂತಿಮ ಪಂದ್ಯದಲ್ಲಿ ವೈಫಲ್ಯಗಳನ್ನು ಸರಿಪಡಿಸಿಕೊಳ್ಳಲು ತಂಡದ ಆಡಳಿತ ಮಂಡಳಿ ಮತ್ತು ರಾಷ್ಟ್ರೀಯ ಆಯ್ಕೆ ಸಮಿತಿ ಎದುರು ನೋಡುತ್ತಿವೆ
ಪ್ರತಿಭಾನ್ವಿತ ಯುವ ಬ್ಯಾಟ್ಸ್‌ಮನ್ ಚೇತೇಶ್ವರ ಪೂಜಾರ ಏಕದಿನ ಪಂದ್ಯಕ್ಕೆ ಪದಾರ್ಪಣೆ ಮಾಡಲು ಕಾಯುತ್ತಿದ್ದಾರೆ. ಈ ಪಂದ್ಯದಲ್ಲಿ ಪೂಜಾರ ಅವರಿಗೆ ಅವಕಾಶ ದೊರಕುವ ಸಾಧ್ಯತೆಗಳಿವೆ. ಈ ಕಾರಣಕ್ಕಾಗಿಯೇ ಮುಂಬೈ ಮತ್ತು ಸೌರಾಷ್ಟ್ರ ನಡುವೆ ಮುಂಬೈಯಲ್ಲಿ ನಡೆಯುತ್ತಿರುವ ರಣಜಿ ಫೈನಲ್ ಪಂದ್ಯಕ್ಕೆ ತೆರಳಲು ಪೂಜಾರ ಅವರಿಗೆ ಅವಕಾಶ ನೀಡಿಲ್ಲ.
ಮೊಹಾಲಿ ಪಂದ್ಯದಲ್ಲಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ರೋಹಿತ್ ಶರ್ಮಾರನ್ನು ಆರಂಭಿಕರನ್ನಾಗಿ ಅಂಗಣಕ್ಕಿಳಿಸಿದ್ದರು. ಇದು ಗೌತಮ್ ಗಂಭೀರ್ ಅವರಿಗೆ ಆತಂಕ ಉಂಟುಮಾಡಿದೆ. ಏಕೆಂದರೆ ಮುಂದಿನ ಪಂದ್ಯದಲ್ಲಿ ಗೌಂಭೀರ್‌ಗೆ ಕೊಕ್ ನೀಡಿದರೂ ಅಚ್ಚರಿ ಪಡಬೇಕಾಗಿಲ್ಲ. ಹೀಗಾಗಿ ಬ್ಯಾಟಿಂಗ್‌ನಲ್ಲಿ ಚೇತರಿಸಿಕೊಳ್ಳದಿದ್ದರೆ ಭವಿಷ್ಯದಲ್ಲಿ ಗಂಭೀರ್ ಅವರಿಗೆ ಅವಕಾಶ ಮುಚ್ಚಿಕೊಳ್ಳುವ ಸಾಧ್ಯತೆಗಳಿವೆ.
ಮೊದಲ ಮೂರು ಪಂದ್ಯಗಳಲ್ಲಿ ಸ್ಥಿರ ಪ್ರದರ್ಶನ ನೀಡಿದ ಅಜಿಂಕ್ಯ ರಹಾನೆ ಕೊನೆಯ ಪಂದ್ಯದಲ್ಲಿ ಬೆಂಚ್ ಕಾಯುವ ಸಾಧ್ಯತೆಗಳಿವೆ. ಆದರೆ, ಭವಿಷ್ಯದಲ್ಲಿ ಅವರಿಗೆ ಹೆಚ್ಚಿನ ಅವಕಾಶಗಳು ಒದಗಿ ಬರಬಹುದು.
ಸುರೇಶ್ ರೈನಾ ಸಹ ಫಾರ್ಮ್‌ಗೆ ಮರಳಿದ್ದು, ವಿರಾಟ್ ಕೊಹ್ಲಿ ಅವರು ರಾಂಚಿಯಲ್ಲಿ ನೀಡಿದ ಪ್ರದರ್ಶನವನ್ನು ಮರುಕಳಿಸುವ ಮೂಲಕ ಸರಣಿಗೆ ನಾಂದಿ ಹಾಡುವ ನಿರೀಕ್ಷೆಗಳಿವೆ.
ಬಿಸಿಲು ಪ್ರಖರವಾಗಿದ್ದು, ವಾತಾವರಣ ಬ್ಯಾಟ್ಸ್‌ಮನ್‌ಗಳಿಗೆ ಅನುಕೂಲಕರವಾಗಿರುವ ನಿರೀಕ್ಷೆಗಳಿವೆ. ಆದರೆ, ಮೊದಲ ಇನಿಂಗ್ಸ್‌ನ ಆರಂಭದಲ್ಲಿ ವೇಗದ ಬೌಲರ್‌ಗಳಿಗೆ ಪಿಚ್ ನೆರವಾಗುವ ಸಾಧ್ಯತೆಗಳೂ ಇವೆ.
ಭುವನೇಶ್ವರ ಕುಮಾರ್ ಚೆಂಡ್‌ನ್ನು ಸ್ವಿಂಗ್ ಮಾಡುವ ಮೂಲಕ ಈ ಪಿಚ್‌ನಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸುವ ಸಾಧ್ಯತೆಗಳಿವೆ. ಮೊಹಾಲಿಯಲ್ಲಿ ರನ್ ಸೋರಿಕೆ ಮಾಡಿದ್ದ ಇನ್ನೊಬ್ಬ ವೇಗಿ ಶಮಿ ಅಹ್ಮದ್ ಮೊನಾಚಾದ ಪ್ರದರ್ಶನ ನೀಡಲು ಮತ್ತೊಂದು ಅವಕಾಶ ದೊರಕಲಿದೆ. ನಿಧಾನವಾಗಿ ಚೇತರಿಸಿಕೊಳ್ಳುತ್ತಿರುವ ಇಶಾಂತ್ ಶರ್ಮಾ ಇನ್ನಷ್ಟು ಗಟ್ಟಿ ಪ್ರದರ್ಶನ ನೀಡುವ ಸಾಧ್ಯತೆಗಳಿವೆ.
ಇನ್ನೊಂದೆಡೆ ಇಂಗ್ಲೆಂಡ್ ಅಂತಿಮ ಪಂದ್ಯದಲ್ಲಿ ಗೆಲ್ಲುವ ಮೂಲಕ ಸರಣಿಯಲ್ಲಿ ಸೋಲಿನ ಅಂತರವನ್ನು ಕಡಿಮೆ ಮಾಡಿಕೊಳ್ಳಲು ಎದುರು ನೋಡುತ್ತಿದೆ. ಟೆಸ್ಟ್‌ನಲ್ಲಿ ಗೆದ್ದ ನಂತರ ಏಕದಿನ ಸರಣಿಯಲ್ಲಿ ತಂಡ ಯಾವ ಸಮಸ್ಯೆಯಿಂದ ಬಳಲುತ್ತಿದೆ ಎಂಬುದಕ್ಕೆ ಇಂಗ್ಲೆಂಡ್ ನಾಯಕ ಅಲಸ್ಟೇರ್ ಕುಕ್ ಪರಿಹಾರ ಕಂಡುಕೊಳ್ಳಬೇಕಿದೆ. ಕೆವಿನ್ ಪೀಟರ್ಸನ್ ಫಾರ್ಮ್‌ನಲ್ಲಿದ್ದು, ಅವರೊಂದಿಗೆ ಕುಕ್ ತಕ್ಕ ಸಾಥ್ ನೀಡಬೇಕಾದ ಅಗತ್ಯವಿದೆ.
ಇಂಗ್ಲೆಂಡ್ ಪ್ರಮುಖ ಸಮಸ್ಯೆ ಅದರ ಬೌಲಿಂಗ್ ವಿಭಾಗ. ವೇಗಿಗಳಾದ ಜಡೇ ಡರ್ನ್‌ಬ್ಯಾಚ್ ಮತ್ತು ಟಿಮ್ ಬ್ರೆಸ್ನಾನ್ ಅವರು ಹೆಚ್ಚಿನ ರನ್ ನಿಯಂತ್ರಿಸುವಲ್ಲಿ ಯಡುವುತ್ತಿರುವುದು ತಂಡಕ್ಕೆ ಸಮಸ್ಯೆಯಾಗಿದೆ. ವೇಗಿ ಸ್ಟಿವನ್ ಫಿನ್ ಮಾತ್ರ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


