ಕ್ರಿಕೆಟ್ ಸಂಭ್ರಮದಲ್ಲಿ ಮುಳುಗಿದ ಧರ್ಮಶಾಲಾ

ಧರ್ಮಶಾಲಾ: ಇದೇ ಮೊದಲ ಬಾರಿ ಏಕದಿನ ಪಂದ್ಯಕ್ಕಾಗಿ ಸಜ್ಜಾಗುತ್ತಿರುವ ಗುಡ್ಡಗಾಡು ಪ್ರದೇಶದಲ್ಲಿ ಈಗ ಎಲ್ಲೆಲ್ಲೂ ಕ್ರಿಕೆಟ್ ಕಲರವ... ಕ್ರಿಕೆಟ್ ಸಂಭ್ರಮ. ಎಲ್ಲಿ ನೋಡಿದರಲ್ಲಿ ಕ್ರಿಕೆಟ್, ಕ್ರಿಕೆಟ್ ಮತ್ತು ಕ್ರಿಕೆಟ್.
ಪಂದ್ಯದ ಹಿಂದಿನ ದಿನವಾದ ಶುಕ್ರವಾರವಂತೂ ಎಲ್ಲೆಲ್ಲಿಯೂ ಹಬ್ಬದ ವಾತಾವರಣವಿತ್ತು. ಅಷ್ಟೇ ಅಲ್ಲ, ಇಡೀ ಊರಿಗೆ ಊರೇ ಅತಿಥಿಗಳಿಂದ ತುಂಬಿ ತುಳುಕುತ್ತಿತ್ತು. ಶಿಮ್ಲಾ ಹಾಗೂ ಚಂಡೀಗಢದಿಂದ 250 ಕಿ.ಮೀ. ದೂರವಿರುವ ಈ ಪುಟ್ಟ ಊರು ಈಗ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದು.
ಅಭಿಮಾನಿಗಳ ಆಗಮನ: ಐದು ಪಂದ್ಯಗಳ ಏಕದಿನ ಸರಣಿಯ ಕೊನೆಯ ಪಂದ್ಯ ಇದಾಗಿರುವುದರಿಂದ ಭಾರತದಲ್ಲಿರುವ ಹಲವಾರು ಇಂಗ್ಲೆಂಡ್ ಪ್ರಜೆಗಳು 2-3 ದಿನಗಳ ಮುಂಚಿನಿಂದಲೇ ಇಲ್ಲಿಗೆ ಆಗಮಿಸುತ್ತಿದ್ದಾರೆ.
ವಿಶೇಷ ವಿಮಾನಗಳಲ್ಲಿ, ವೈಭವೋಪೇತ ವಾಹನಗಳಲ್ಲಿ ಈ ಪುಟ್ಟ ಊರಿಗೆ ಆಗಮಿಸುತ್ತಿದ್ದಾರೆ. ಅವರಲ್ಲಿ ಹೆಚ್ಚಿನವರು ಈಶಾನ್ಯ ರಾಜ್ಯಗಳಲ್ಲಿ ಇಂಗ್ಲೆಂಡ್ನಿಂದ ಬಂದು ಪ್ರವಾಸ ಮಾಡುತ್ತಿರುವ ಯೂರೋಪಿಯನ್ನರು. ಇವರಲ್ಲದೇ, ನೆರೆಯ ರಾಜ್ಯಗಳಾದ ಪಂಜಾಬ್, ಹರ್ಯಾಣ ಹಾಗೂ ದೆಹಲಿಗಳಿಂದಲೂ ಪ್ರವಾಸಿಗರು ಪಂದ್ಯ ವೀಕ್ಷಿಸಲು ಬರುತ್ತಿದ್ದಾರೆ. ಇನ್ನು, ಇತ್ತಂಡಗಳ ಆಟಗಾರರ ಜೊತೆ ಬಿಸಿಸಿಐನ ಹಿರಿಯ ಅಧಿಕಾರಿಗಳು, ಮಾಜಿ ಕ್ರಿಕೆಟಿಗರೂ ಆಗಮಿಸಿದ್ದಾರೆ. ಸರಣಿಯ ಸಮಾರೋಪ ಸಮಾರಂಭವೂ ನಡೆಯಲಿರುವುದರಿಂದ ಬಿಸಿಸಿಐನ ಹಲವಾರು ಅಧಿಕಾರಿಗಳು ಆಗಮಿಸಿದ್ದಾರೆ.
ದಲೈಲಾಮ ಉಪಸ್ಥಿತಿ: ಈ ಪಂದ್ಯಕ್ಕೆ ಬೌದ್ಧ ಧರ್ಮಗುರು ದಲೈಲಾಮ ಹಾಗೂ ಮುಖ್ಯಮಂತ್ರಿ ವೀರಭದ್ರ ಸಿಂಗ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸುವ ನಿರೀಕ್ಷೆಯಿದೆ. ಇವರಲ್ಲದೇ, ಹಿಮಾಚಲ ಪ್ರದೇಶ ವಿಧಾನಸಭೆಯ ಒಟ್ಟು 67 ಶಾಸಕರು ಎಲ್ಲರೂ ಪಂದ್ಯ ವೀಕ್ಷಿಸಲು ಆಗಮಿಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


