ಕ್ರೀಡೆ

ಅಂತಿಮ ಪಂದ್ಯಕ್ಕೆ ಸಂತಸದ ತಯಾರಿ

Published On :

ಧರ್ಮಶಾಲಾ: ಮೊಹಾಲಿಯಲ್ಲಿ ಇಂಗ್ಲೆಂಡ್ ವಿರುದ್ಧ ನಾಲ್ಕನೇ ಏಕದಿನ ಪಂದ್ಯವನ್ನು ಗೆಲ್ಲುವ ಮೂಲಕ ಸರಣಿ ಗೆದ್ದ ಭಾರತ ಕ್ರಿಕೆಟ್ ತಂಡ ಈಗ ನಿರುಮ್ಮಳವಾಗಿದೆ. ತಲೆ ಮೇಲಿದ್ದ ದೊಡ್ಡ ಚಿಂತೆಯ ಗಂಟು ಇಳಿಸಿಕೊಂಡಿರುವ ಧೋನಿ ಹಾಗೂ ಅವರ ಬಳಗ ಈಗ ಖುಷಿಯಲ್ಲಿ ತಯಾರಿ ನಡೆಸಿದೆ.
ಶನಿವಾರ ನಡೆಯಲಿದ್ದ ಆಂಗ್ಲರ ವಿರುದ್ಧದ ಐದನೇ ಏಕದಿನ ಪಂದ್ಯಕ್ಕೂ ಮುನ್ನಾದಿನವಾದ ಶುಕ್ರವಾರ ಅಭ್ಯಾಸ ನಡೆಸಿದ ಟೀಂ ಇಂಡಿಯಾದ ಆಟಗಾರರ ಮೊಗದಲ್ಲಿ ಎಂದಿನ ಒತ್ತಡ ಭಾವವಿರಲಿಲ್ಲ. ಸರಣಿ ಗೆದ್ದಿರುವ ಸಂತೃಪ್ತಿ ಅವರ ಹಾವ-ಭಾವಗಳಲ್ಲಿ ಎದ್ದುಕಾಣುತ್ತಿತ್ತು. ಅದರಲ್ಲೂ ಧೋನಿ ಅವರು ಹೆಚ್ಚು ಸಂತೋಷವಾಗಿದ್ದರು.
ಧೋನಿ ಆಡ್ತಾರೆ: ಮೊಹಾಲಿಯಲ್ಲಿ ನಡೆದ ನಾಲ್ಕನೇ ಏಕದಿನ ಪಂದ್ಯಕ್ಕೂ ಮುನ್ನ ಅಭ್ಯಾಸ ನಡೆಸುತ್ತಿದ್ದಾಗ ಹೆಬ್ಬೆರಳಿಗೆ ಗಾಯ ಮಾಡಿಕೊಂಡಿದ್ದ ಧೋನಿ, ಅವರು ಐದನೇ ಏಕದಿನದಲ್ಲಿ ಆಡುವುದು  ಬಹುತೇಕ ಖಚಿತವಾಗಿದೆ.
ಸಂಸತದ ಆಟ: ಇನ್ನು, ಶುಕ್ರವಾರದ ಅಭ್ಯಾಸಕ್ಕಾಗಿ ಆಡಲಾದ ಫುಟ್ಬಾಲ್ ಪಂದ್ಯದ ವೇಳೆ ಟೀಂ ಇಂಡಿಯಾದ ಆಟಗಾರರು ಹೆಚ್ಚು ಖುಷಿಯಲ್ಲಿದ್ದರು. ಇಂಥಾ ಖುಷಿಯನ್ನು ಅವರ ಮೊಗಗಳಲ್ಲಿ ನೋಡಿ ಕೆಲ ದಿನಗಳೇ ಕಳೆದಿದ್ದವು. ಪಂದ್ಯದಲ್ಲಿ ವಿರಾಟ್ ಕೊಹ್ಲಿಗೆ ಫುಟ್ಬಾಲ್ ಬಡಿದಿದ್ದರಿಂದ ಅವರು ಕೆಲ ನಿಮಿಷಗಳ ಕಾಲ ಪಂದ್ಯದಿಂದ ಹೊರಗುಳಿದರು. ಸ್ವಲ್ಪ ವಿಶ್ರಾಂತಿ ಪಡೆದ ಬಳಿಕ ಪುನಃ ಪಂದ್ಯಕ್ಕೆ ಸೇರ್ಪಡೆಗೊಂಡರು. ಅವರ ಉತ್ಸಾಹಕ್ಕೆ ಕ್ರೀಡಾಂಗಣದ ತುಂಬೆಲ್ಲಾ ಬೀಸುತ್ತಿದ್ದ ತಂಗಾಳಿ ತನ್ನ ಬೆಂಬಲ ಸೂಚಿಸಿತ್ತು.
ಆಂಗ್ಲರಿಗೆ ಒತ್ತಡ: ಭಾರತದ ವಿರುದ್ಧ ಟೆಸ್ಟ್ ಸರಣಿಯನ್ನು ಗೆದ್ದು ಬೀಗಿದ್ದ ಇಂಗ್ಲೆಂಡ್, ಏಕದಿನ ಪಂದ್ಯದಲ್ಲಿ ಸೋತಿರುವುದು ಆ ತಂಡದ ನಾಯಕ ಅಲೇಸ್ಟರ್ ಕುಕ್ಗೆ ಸಹಜವಾಗಿ ಬೇಸರ ತರಿಸಿದೆ.
ಇನ್ನು, ಕೊನೆಯ ಪಂದ್ಯದಲ್ಲಿ ಅವರ ತಂಡ ಗೆದ್ದರೂ, ಸೋತರೂ ಏನೂ ವ್ಯತ್ಯಾಸವಾಗೋದಿಲ್ಲ. ಆದರೆ, ಕೊನೆಯ ಪಂದ್ಯದಲ್ಲಾದರೂ ಗೆಲುವು ಸಾಧಿಸಿ, ಸರಣಿ ಸೋಲಿನ ಅಂತರವನ್ನು ಕಡಿಮೆ ಮಾಡಿಕೊಳ್ಳಲು ಅವರ ಪಡೆ ಪ್ರಯತ್ನಿಸಬೇಕಷ್ಟೇ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.