ವಿಳಂಬಕ್ಕೆ ಬಾಲ್ ಬಾಯ್‌ಗೆ ಒದ್ದ ಆಟಗಾರ

ಸ್ವಾನ್ಸಿ: ಫುಟ್ಬಾಲ್ ಪಂದ್ಯಾವಳಿಯಲ್ಲಿ ಆಗಾಗ ಪುಂಡಾಟಿಕೆಗಳು ಮರುಕಳಿಸುತ್ತಿದ್ದು, ಮತ್ತೊಮ್ಮೆ ಈ ಘಟನೆ ಸಂಭವಿಸಿದೆ. ಇಲ್ಲಿ ನಡೆಯುತ್ತಿರುವ ಚೇಲ್ಸಿ ಲೀಗ್ ಕಪ್‌ನ ಸೆಮಿಫೈನಲ್ ಪಂದ್ಯದಲ್ಲಿ ಬಾಲ್‌ಬಾಯ್ ಮೇಲೆ ಫುಟ್ಬಾಲ್ ಆಟಗಾರನೊಬ್ಬ ಹಲ್ಲೆ ಮಾಡಿದ ಘಟನೆ ನಡೆದಿದೆ.
17ರ ಹರೆಯದ ಬಾಲ್‌ಬಾಯ್ ಚಾರ್ಲೆ ಮಾರ್ಗನ್ ಅಂಗಳದಿಂದ ಹೊರ ಬಂದ ಚೆಂಡನ್ನು ಹಿಂತಿರುಗಿಸಲು ವಿಳಂಭ ಮಾಡಿದ ಹಿನ್ನಲೆಯಲ್ಲಿ ಕೋಪಗೊಂಡ ಚೇಲ್ಸಿ ತಂಡದ ಆಟಗಾರ ಈಡನ್ ಹಜರ್ಡ್, ಆತನನ್ನು ಕಾಲಿಂದ ಒದ್ದು ತನ್ನ ಕೋಪ ತೀರಿಸಿಕೊಂಡನು.
ಈ ಘಟನೆಯಿಂದ ಫುಟ್ಬಾಲ್ ಕ್ರೀಡೆಗೆ ಮತ್ತೊಮ್ಮೆ ಕಪ್ಪು ಚುಕ್ಕೆ ಅಂಟಿಕೊಂಡಂತಾಗಿದೆ. ಬಾಲ್‌ಬಾಯ್ ಚಾರ್ಲೆ ಮಾರ್ಗನ್ ಸ್ವಾನ್ಸಿಯ ನಿರ್ದೇಶಕ ಮಾರ್ಟೀನ್ ಮಾರ್ಗನ್ ಅವರ ಮಗನಾಗಿದ್ದು, ಈ ಘಟನೆಯನ್ನು ಇತರೆ ಆಟಗಾರರು ತೀವ್ರವಾಗಿ ಖಂಡಿಸಿದ್ದಾರೆ.
ಪಂದ್ಯದ 80ನೇ ನಿಮಿಷದಲ್ಲಿ ನಡೆದ ಈ ಘಟನೆಗಾಗಿ ಅಂಪೈರ್‌ಗಳು ಹಜರ್ಡ್‌ಗೆ ರೆಡ್ ಕಾರ್ಡ್ ನೀಡಿದರು. ನಂತರ ಈ ಪಂದ್ಯ 0-0 ಗೋಲುಗಳಲ್ಲಿ ಅಂತ್ಯಗೊಂಡಿತು.
ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಸೌತ್‌ವೇಲ್ಸ್ ಪೊಲೀಸರು ಈ ಘಟನೆ ಕುರಿತು ತನಿಖೆ ಆರಂಭಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


