ವಿಜಾರ್ಡ್ಸ್ ವಿರುದ್ಧ ಮಿಂಚಿದ ರಾಂಚಿ
ರಾಂಚಿ: ನಿಕ್ ವಿಲ್ಸನ್ (67ನೇ ನಿಮಿಷ) ಮತ್ತು ಆ್ಯಶ್ಲೇ ಜಾಕ್ಸನ್ (69ನೇ ನಿಮಿಷ) ಪಂದ್ಯದ ಅಂತ್ಯದಲ್ಲಿ ಗಳಿಸಿದ ಗೋಲಿನ ನೆರವಿನಿಂದ ರಾಂಚಿ ರೋಹಿನ್ಸ್ ತಂಡ, ಗುರುವಾರ ನಡೆದ ಎಚ್‌ಐಎಲ್ ಪಂದ್ಯದಲ್ಲಿ ಉತ್ತರಪ್ರದೇಶ ವಿಜಾರ್ಡ್ಸ್ ವಿರುದ್ಧ 3-1 ಗೋಲುಗಳ ಅಂತರದಿಂದ ಜಯ ಸಾಧಿಸಿತು.
ಪಂದ್ಯದ 27ನೇ ನಿಮಿಷದಲ್ಲಿ ರಾಂಚಿ ತಂಡದ ಪರ ನಾಯಕ ಮೂರಿಜ್ ಫುರ್ಸಟ್ ಗೋಲು ದಾಖಲಿಸಿದರು. ಆದರೆ, ಅತಿಥೇಯ ತಂಡ ನಂತರ ಪಂದ್ಯದಲ್ಲಿ ತನಗೆ ದೊರಕಿದ 6 ಪೆನಾಲ್ಟಿ ಕಾರ್ನರ್ ಅವಕಾಶಗಳಲ್ಲಿ ಗೋಲು ದಾಖಲಿಸುವಲ್ಲಿ ವಿಫಲವಾಯಿತು.
ಪಂದ್ಯದ 53ನೇ ನಿಮಿಷದಲ್ಲಿ ಯುಪಿ ವಿಜಾರ್ಡ್ಸ್ ಪರ ಲ್ಯೂಕ್ ಡಾರ್ನರ್ ಪೆನಾಲ್ಟಿ ಕಾರ್ನರ್ ಮೂಲಕ ಗೋಲುದಾಖಸಿದರು. ಹೀಗಾಗಿ ಉಭಯ ತಂಡಗಳು 1-1 ಅಂತರದಿಂದ ಸಮಬಲ ಸಾಧಿಸಿದವು. ನಂತರ ಶೀಘ್ರ ಮುನ್ನಡೆ ಕಂಡುಕೊಳ್ಳುವಲ್ಲಿ ಎರಡೂ ತಂಡಗಳು ಒದ್ದಾಡಿದವು. ಆದರೆ, ಇನ್ನೇನು ಪಂದ್ಯ ಅಂತ್ಯಗೊಳ್ಳಲಿದೆ ಎನ್ನುವ ಹೊತ್ತಿಗೆ, ಅತಿಥೇಯ ತಂಡದ ಪರ ಗೋಲು ದಾಖಲಿಸಿದ ನಿಕ್ ವಿಲ್ಸನ್ ಮತ್ತು ಆ್ಯಶ್ಲಿ ಜಾಕ್ಸನ್ ಅವರು 3-1 ಅಂತರದಿಂದ ಮುನ್ನಡೆ ತಂದುಕೊಟ್ಟರು. ಇದರೊಂದಿಗೆ ಆಡಿರುವ ಐದು ಪಂದ್ಯಗಳಲ್ಲಿ 3ರಲ್ಲಿ ಜಯ ಮತ್ತು 2ರಲ್ಲಿ ಸೋಲು ಕಂಡ ರಾಂಚಿ ತಂಡ 17 ಪಾಯಿಂಟ್‌ಗಳೊಂದಿಗೆ ಅಂಕಪಟ್ಟಿಯಲ್ಲಿ 2ನೇ ಸ್ಥಾನ ಅಲಂಕರಿಸಿದೆ. ಪಂದ್ಯಾವಳಿಯಲ್ಲಿ ಮೊದಲ ಸೋಲಿನ ಕಹಿ ಉಂಡ ಯುಪಿ ವಿಜಾರ್ಡ್ಸ್ 15 ಅಂಕ ಗಳಿಸಿದೆ.
ಮುಂಬೈಗೆ 5ನೇ ಸೋಲು: ಹಾಕಿ ಇಂಡಿಯಾ ಲೀಗ್‌ನಲ್ಲಿ ಗುರುವಾರ ನಡೆದ 2ನೇ ಪಂದ್ಯದಲ್ಲಿ ಜಪೀ ಪಂಜಾಬ್ ವಾರಿಯರ್ಸ್ ತಂಡ ಮುಂಬೈ ಮೆಜಿಷಿಯನ್ ತಂಡವನ್ನು 4-3 ಗೋಲುಗಳ ಅಂತರದಿಂದ ಸೋಲಿಸಿತು. ಈ ಸೋಲಿನೊಂದಿಗೆ ಮುಂಬೈ ತಂಡ ಪಂದ್ಯಾವಳಿಯಲ್ಲಿ ಸತತ 5ನೇ ಸೋಲು ಕಂಡಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

