ಕ್ರೀಡೆ

ಕೈಚೆಲ್ಲಿದ ಭೂಪತಿ, ಸಾನಿಯಾ

Published On :

ಮೆಲ್ಬರ್ನ್: ಭಾರತದ ಪ್ರಶಸ್ತಿ ಆಸೆಯನ್ನು ಜೀವಂತವಾಗಿ ಉಳಿಸಿದ್ದ ಸಾನಿಯಾ ಮಿರ್ಜಾ ಮತ್ತು ಮಹೇಶ್ ಭೂಪತಿ, ಆಸ್ಟ್ರೇಲಿಯಾ ಓಪನ್ ಕ್ವಾರ್ಟರ್‌ಫೈನಲ್‌ನ ಮಿಶ್ರ ಡಬಲ್ಸ್ ವಿಭಾಗದಲ್ಲಿ ಸೋಲನುಭವಿಸಿದರು. ಇದರೊಂದಿಗೆ ಪಂದ್ಯಾವಳಿಯಲ್ಲಿ ಭಾರತದ ಸವಾಲು ಅಂತ್ಯಗೊಂಡಿದೆ.
ಮೂರನೇ ಶ್ರೇಯಾಂಕ ಪಡೆದಿದ್ದ ಭಾರತದ ಸಾನಿಯಾ ಮತ್ತು ಅಮೆರಿಕದ ಜತೆಯಾಟಗಾರ ಬಾಬ್ ಬ್ರಿಯಾನ್ ಜೋಡಿ, ಶ್ರೇಯಾಂಕ ರಹೀತ ಜಕ್ ಗಣರಾಜ್ಯದ ಲೂಸಿಯಾ ರಾಡೆಕಾ ಮತ್ತು ಫ್ರಂಟಿಸೆಕಾ ಸೆರ್ಮಾಕ್ ಜೋಡಿ ವಿರುದ್ಧ 5-7, 4-6 ನೇರ ಸೆಟ್‌ಗಳ ಅಂತರದಿಂದ ಪರಾಭವ ಹೊಂದಿತು. ಇನ್ನು 5ನೇ ಶ್ರೇಯಾಂಕ ಪಡೆದಿದ್ದ ಭಾರತದ ಮಹೇಶ್ ಭೂಪತಿ ಮತ್ತು ರಷ್ಯಾದ ನಾಡಿಯಾ ಪೆಟ್ರೋವಾ ಜೋಡಿ, ಆಸ್ಟ್ರೇಲಿಯಾದ ಜರ್ಮೈಲ್ ಗಜ್ಡೋಸೋವಾ ಮತ್ತು ಮ್ಯಾಥ್ಯೂ ಎಬ್ಡನ್ ಜೋಡಿ ವಿರುದ್ಧ 3-5, 6-3, 11-13 ಸೆಟ್‌ಗಳಿಂದ ಪರಾಭವ ಹೊಂದಿತು. ಭಾರತದ ಇತರ ಆಟಗಾರರಾದ ಲಿಯಾಂಡರ್ ಪೇಸ್ ಮತ್ತು ರೋಹನ್ ಬೋಪಣ್ಣ ಅವರು ಮಿಶ್ರ ಡಬಲ್ಸ್ ವಿಭಾಗದಲ್ಲಿ ಈಗಾಗಲೇ ಸೋಲನುಭವಿಸಿದ್ದಾರೆ. ಹೀಗಾಗಿ ಭಾರತದ ಸವಾಲು ಅಂತ್ಯಗೊಂಡಂತಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.