ಕ್ರೀಡೆ

ಸೆಮಿಫೈನಲ್ ಸುತ್ತಿಗೆ ಅಜರೆಂಕಾ

ಸಿಂಗಲ್ಸ್ ವಿಭಾಗದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕುಸ್ನೇಟ್ಸೊವಾ ವಿರುದ್ಧ ಜಯ

Published On :

ಮೆಲ್ಬರ್ನ್: ಹಾಲಿ ಚಾಂಪಿಯನ್ ವಿಕ್ಟೋರಿಯಾ ಅಜರೆಂಕಾ ಅವರು ಈ ಬಾರಿಯೂ ಆಸ್ಟ್ರೇಲಿಯನ್ ಓಪನ್ ಗೆಲ್ಲುವ ತಮ್ಮ ಕನಸನ್ನು ನನಸಾಗಿಸುವತ್ತ ಮತ್ತೊಂದು ದಾಪುಗಾಲು ಇಟ್ಟಿದ್ದಾರೆ.
ಬುಧವಾರ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅವರು ಕುಸ್ನೇಟ್ಸೊವಾ ಅವರ ವಿರುದ್ಧ 7-5, 6-1 ಅಂತರದ ಜಯ ಗಳಿಸುವ ಮೂಲಕ ಪಂದ್ಯಾವಳಿಯ ಸೆಮಿಫೈನಲ್ಗೆ ಕಾಲಿಟ್ಟರು.
ಪಂದ್ಯದ ಆರಂಭದಿಂದಲೂ ಎದುರಾಳಿ ಮೇಲೆ ಹಿಡಿತ ಸಾಧಿಸಿದ್ದಅವರು, ಯಾವುದೇ ತಪ್ಪು ಮಾಡದೇ ಮುಂದುವರೆದರು.ಮಿಂಚಿನ ಆಟವಾಡುತ್ತಿದ್ದ ಅವರಿಗೆ ಕುಸ್ನೇಟ್ಸೊವಾ ಅವರೂ ತೀವ್ರ ಸ್ಪರ್ಧೆ ನೀಡಿದರು. ಇಬ್ಬರೂ ಸಮಬಲದ ಹೋರಾಟ ನಡೆಸಿದ್ದರಿಂದ ಮೊದಲ ಸೆಟ್ ತೀವ್ರ ಕುತೂಹಲ ಕೆರಳಿಸಿತ್ತು. ಆದರೆ, ಪ್ರತಿ ಹಂತದಲ್ಲಿ ಎಚ್ಚರಿಕೆಯ ಆಟ ಪ್ರದರ್ಶಿಸಿದ ಅಜರೆಂಕಾ ಅವರು ಮೊದಲ ಸೆಟ್ನಲ್ಲಿ ಕೊನೆಗೂ ಜಯ ಸಾಧಿಸಿದರು. ಮೊದಲ ಸೆಟ್ನಲ್ಲಿ ಪ್ರತಿರೋಧ ತೋರಿದ್ದ ಕುಸ್ನೇಟ್ಸೊವಾ ಅವರು ದ್ವಿತೀಯ ಸೆಟ್ನಲ್ಲಿ ಆಕ್ರಮಣಕಾರಿ ಆಟವನ್ನು ಪ್ರದರ್ಶಿಸಲಿಲ್ಲ. ಹಾಗಾಗಿ, ಈ ಸೆಟ್ನಲ್ಲಿ ಜಯ ಸಾಧಿಸುವುದು ಅಜರೆಂಕಾಗೆ ಕಷ್ಟವೆನಿಸಲಿಲ್ಲ. ಅಂತಿಮವಾಗಿ, 6-1 ಅಂತರದಲ್ಲಿ ಈ ಸೆಟ್ ಗೆದ್ದುಕೊಂಡ ಅವರು, ಪಂದ್ಯಾವಳಿಯ ಸೆಮಿಫೈನಲ್ಗೂ ಕಾಲಿಟ್ಟರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.