ಮೊಹಾಲಿಯಲ್ಲೂ ಜಯದ ನಗೆ

ಮೊಹಾಲಿ: ಸುರೇಶ್ ರೈನಾ ಅವರ ಅಜೇಯ 89 ರನ್‌ಗಳ ಸಹಾಯದಿಂದಾಗಿ ಆತಿಥೇಯ ಭಾರತ ತಂಡ, ಬುಧವಾರ ಇಲ್ಲಿ ನಡೆದ ಇಂಗ್ಲೆಂಡ್ ವಿರುದ್ಧ ನಾಲ್ಕನೇ ಏಕದಿನ ಪಂದ್ಯದಲ್ಲಿ 5 ವಿಕೆಟ್‌ಗಳ ಜಯ ಸಾಧಿಸಿತು.
ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್, ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 257 ರನ್ ಗಳಿಸಿತ್ತು. ಈ ಮೊತ್ತವನ್ನು ಬೆನ್ನಟ್ಟಿದ ಭಾರತ 47.3 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 258 ರನ್ ಗಳಿಸಿ ವಿಜಯದ ನಗೆ ಬೀರಿತು.
ಟಾಸ್ ಗೆದ್ದ ಭಾರತದ ನಾಯಕ ಧೋನಿ, ಇಂಗ್ಲೆಂಡ್ ತಂಡವನ್ನು ಮೊದಲು ಬ್ಯಾಟಿಂಗ್‌ಗೆ ಇಳಿಸಿದರು. ಉತ್ಸಾಹದಿಂದಲೇ ಇನಿಂಗ್ಸ್ ಆರಂಭಿಸಿದ ಆಂಗ್ಲರ ಪಡೆಗೆ ಆರಂಭಿಕರರಾದ ಕುಕ್ ಹಾಗೂ ಇಯಾನ್ ಬೆಲ್ ಇಬ್ಬರೂ ಮೊದಲ ವಿಕೆಟ್‌ಗೆ ಕೇವಲ 34 ರನ್‌ಗಳನ್ನಷ್ಟೇ ಸೇರಿಸಲು ಶಕ್ತವಾದರು.
10ನೇ ಓವರ್‌ನಲ್ಲಿ ಭರವಸೆಯ ಹುಡುಗ ಭುವನೇಶ್ವರ ಕುಮಾರ್ ಅವರು ಥರ್ಡ್ ಮ್ಯಾನ್‌ನಲ್ಲಿ ಹಿಡಿದ ಅದ್ಭುತ ಕ್ಯಾಚ್‌ನಿಂದಾಗಿ ಬೆಲ್ ಅವರ ವಿಕೆಟ್ ಉರುಳಿತು.
ಆದರೆ, ನಂತರ ಬಂದ ಪೀಟರ್ಸನ್, ಕುಕ್ ಜೊತೆಗೂಡಿ, 95 ರನ್ ಸೇರಿಸಿದರು. 32ನೇ ಓವರ್‌ನಲ್ಲಿ ಕುಕ್ ವಿಕೆಟ್ ಉರುಳಿದ ಮೇಲೆ ಇಂಗ್ಲೆಂಡ್‌ನ ಇನ್ನೆರಡು ವಿಕೆಟ್‌ಗಳು ನಿಗದಿತ ಅಂತರದಲ್ಲಿ ಬೇಗನೇ ಉರುಳಿದವು. ಆದರೆ, 5ನೇ ವಿಕೆಟ್‌ಗೆ ಪೀಟರ್ಸನ್ ಹಾಗೂ ರೂಟ್ ಅವರಿಬ್ಬರೂ 78 ರನ್ ಸೇರಿಸಿದ್ದು ತಂಡ ಉತ್ತಮ ಮೊತ್ತ ಪೇರಿಸಲು ನೆರವಾಯಿತು.
ಇನಿಂಗ್ಸ್‌ನ ಕೊನೆಯವರೆಗೂ ಅಜೇಯರಾಗಿ ಉಳಿದ ರೂಟ್ ಅವರು, 8 ಬೌಂಡರಿ ಹಾಗೂ ಒಂದು ಸಿಕ್ಸರ್ ಸೇರಿದಂತೆ ಶತಕಾರ್ಧ ದಾಖಲಿಸಿದರು. ಅಂತಿಮವಾಗಿ, ಇಂಗ್ಲೆಂಡ್ ತಂಡ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 257 ರನ್‌ಗಳ ಸವಾಲಿನ ಮೊತ್ತವನ್ನು ಪೇರಿಸಿತು.
ಭಾರತದ ದಿಟ್ಟ ಉತ್ತರ: ಕುಕ್ ಪಡೆ ನೀಡಿದ್ದ ಮೊತ್ತವನ್ನು ಬೆನ್ನಟ್ಟಲು ಕ್ರೀಸ್‌ಗೆ ಇಳಿದ ಭಾರತ ಆರಂಭದಲ್ಲೇ ಗಂಭೀರ್ ಅವರನ್ನು ಕಳೆದುಕೊಂಡಿತು. ತಂಡದ ಮೊತ್ತ ಕೇವಲ 20 ರನ್ ಆಗಿದ್ದಾಗ, ಬ್ರೆಸ್ನನ್ ಎಸೆತದಲ್ಲಿ ಕೀಪರ್ ಬಟ್ಲರ್‌ಗೆ ಕ್ಯಾಚಿತ್ತ ಅವರು ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದರು. ಆಗ ಬಂದ ವಿರಾಟ್ ಕೊಹ್ಲಿ ಕ್ರೀಸ್‌ನಲ್ಲಿದ್ದ ರೋಹಿತ್ ಶರ್ಮಾ ಅವರನ್ನು ಸೇರಿಕೊಂಡರು. ಈ ಜೋಡಿ 2ನೇ ವಿಕೆಟ್‌ಗೆ 52 ರನ್ ಸೇರಿಸಿತು. 17ನೇ ಓವರ್‌ನಲ್ಲಿ ವಿರಾಟ್ ಕೊಹ್ಲಿ ಅವರು ಟ್ರೇಡ್‌ವೆಲ್ ಎಸೆತದಲ್ಲಿ ಕಾಟ್ ಅಂಡ್ ಬೌಲ್ಡ್‌ಗೆ ಬಲಿಯಾದರು. ಆಗ ರೋಹಿತ್‌ಗೆ ಜೋಡಿಯಾಗಿದ್ದು ಯುವರಾಜ್ ಸಿಂಗ್. ಆದರೆ, ಅವರು ಹೆಚ್ಚು ಆಡಲಿಲ್ಲ. ಕೇವಲ 3 ರನ್ ಗಳಿಸಿದ ಅವರು ಇನಿಂಗ್ಸ್‌ನ 25ನೇ ಓವರ್‌ನಲ್ಲಿ ಟ್ರೇಡ್‌ವೆಲ್ ಎಸೆತದಲ್ಲಿ ಎಲ್‌ಬಿಡಬ್ಲ್ಯೂ ಆಗಿ ನಿರ್ಗಮಿಸಿದರು. ಅವರ ಜಾಗಕ್ಕೆ ಬಂದಿದ್ದು ಸುರೇಶ್ ರೈನಾ. ರೈನಾ- ರೋಹಿತ್ ಜೋಡಿ 4ನೇ ವಿಕೆಟ್‌ಗೆ 68 ರನ್ ಸೇರಿಸಿತು. 32ನೇ ಓವರ್‌ನಲ್ಲಿ ರೋಹಿತ್ (83) ಅವರು ಫಿನ್ನ್ ಬೌಲಿಂಗ್‌ನಲ್ಲಿ ಎಲ್‌ಬಿಡಬ್ಲ್ಯೂ ಬಲೆಗೆ ಬಿದ್ದರು.
ನಂತರ, ರೈನಾ ಅವರೊಂದಿಗೆ ನಾಯಕ ಧೋನಿ ಇನಿಂಗ್ಸ್‌ನ ಜವಾಬ್ದಾರಿ ಹೊತ್ತರು. ಈ ಜೋಡಿ 5ನೇ ವಿಕೆಟ್‌ಗೆ 55 ರನ್ ಸೇರಿಸಿತು. 40ನೇ ಓವರ್‌ನಲ್ಲಿ, ಧೋನಿ ಅವರು ಔಟಾದ ಮೇಲೆ ಕ್ರೀಸ್‌ಗೆ ಆಗಮಿಸಿದ ರವೀಂದ್ರ ಜಡೇಜಾ, ರೈನಾ ಅವರಿಗೆ ಉತ್ತಮ ಬೆಂಬಲ ನೀಡಿದರು.
ಪಂದ್ಯದ ಕೊನೆಯವರೆಗೂ ಅಜೇಯವಾಗಿ ಉಳಿದ ಈ ಜೋಡಿ, ಮುರಿಯದ ಆರನೇ ವಿಕೆಟ್‌ಗೆ 45 ರನ್ ಸೇರಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿತು. ಅಜೇಯ 89 ರನ್ ಗಳಿಸಿ, ತಂಡದ ಗೆಲುವಲ್ಲಿ ಪ್ರಮುಖ ಪಾತ್ರ ವಹಿಸಿದ ಸುರೇಶ್ ರೈನಾ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಇಂಗ್ಲೆಂಡ್: 257/7 (50 ಓವರ್)
ಕುಕ್ ಎಲ್‌ಬಿಡಬ್ಲ್ಯೂ ಬಿ ಅಶ್ವಿನ್ 76 (106), ಬೆಲ್ ಸಿ ಕುಮಾರ್ ಬಿ ಇಶಾಂತ್ 10 (25), ಪೀಟರ್ಸನ್ ಬೌಲ್ಡ್ ಬಿ ಇಶಾಂತ್ 76 (93), ಮಾರ್ಗನ್ ಸಿ ಯುವರಾಜ್ ಬಿ ಅಶ್ವಿನ್ 3 (6), ಪಟೇಲ್ ಸಿ ಮತ್ತು ಬಿ ಜಡೇಜಾ 1 (10), ರೂಟ್ ಅಜೇಯ 57 (45), ಬಟ್ಲರ್ ಸಿ ಯುವರಾಜ್ ಬಿ ಜಡೇಜಾ 14 (9), ಬ್ರೆಸ್ನಾನ್ ಸಿ ಯುವರಾಜ್ ಬಿ ಜಡೇಜಾ 0 (2), ಟ್ರೆಡ್‌ವೆಲ್ ಅಜೇಯ 6 (4), ಇತರೆ 14
ವಿಕೆಟ್ ಪತನ: 1-37, 2-132, 3-138, 4-142, 5-220, 6-241, 7-241
ಬೌಲಿಂಗ್: ಕುಮಾರ್ 10-2-30-0 , ಅಹ್ಮದ್ 8-0-58-0 , ಇಶಾಂತ್ 10-2-47-2 , ಅಶ್ವಿನ್ 10-0-63-2 , ಜಡೇಜಾ 10-2-39-3 , ರೈನಾ 2-0-10-0
ಭಾರತ: 258/5 (47.3 ಓವರ್)
ಗಂಭೀರ್ ಸಿ ಬಟ್ಲರ್ ಬಿ ಬ್ರೆಸ್ನಾನ್ 10 (16), ಶರ್ಮಾ ಎಲ್‌ಬಿಡಬ್ಲ್ಯೂ ಬಿ ಫಿನ್ 83 (93), ಕೊಹ್ಲಿ ಸಿ ಮತ್ತು ಬಿ ಟ್ರೆಡ್‌ವೆಲ್ 26 (33), ಯುವರಾಜ್ ಎಲ್‌ಬಿಡಬ್ಲ್ಯೂ ಬಿ ಟ್ರೆಡ್‌ವೆಲ್ 3 (16), ರೈನಾ ಅಜೇಯ 89 (79), ಧೋನಿ ಸಿ ಮಾರ್ಗನ್ ಬಿ ಡರ್ನ್‌ಬ್ಯಾಚ್ 19 (21), ಜಡೇಜಾ ಅಜೇಯ 21 (27), ಇತರೆ 7
ವಿಕೆಟ್ ಪತನ: 1-20, 2-72, 3-90, 4-158, 5-213
ಬೌಲಿಂಗ್: ಫಿನ್ನ್ 10-1-39-1, ಬ್ರೆಸ್ನಾನ್ 10-1-59-1 , ಡರ್ನ್‌ಬ್ಯಾಚ್ 9.2-0-59-1, ಪಟೇಲ್ 3-0-21-0 , ಟ್ರೆಡ್‌ವೆಲ್ 10-0-54-2, ರೂಟ್ 5-0-24-0
ಪಂದ್ಯ ಶ್ರೇಷ್ಠ: ಸುರೇಶ್ ರೈನಾ
ಒಟ್ಟಾರೆಯಾಗಿ ನಮ್ಮ ತಂಡ ಉತ್ತಮ ಪ್ರದರ್ಶನ ನೀಡಿದೆ. ನಾವು ಇಂಗ್ಲೆಂಡ್ ತಂಡಕ್ಕೆ ಉತ್ತಮ ಆರಂಭ ಸಿಗದಂತೆ ನೋಡಿಕೊಂಡೆವು. ನಂತರ ಬ್ಯಾಟಿಂಗ್‌ನಲ್ಲಿ ರೋಹಿತ್ ಶರ್ಮಾ ಉತ್ತಮ ಪ್ರದರ್ಶನ ನೀಡಿದರು. ಹೊಸ ಬೌಲಿಂಗ್ ಪಡೆಯು ಉತ್ತಮ ಪ್ರದರ್ಶನ ನೀಡಿದೆ.
-ಮಹೇಂದ್ರ ಸಿಂಗ್ ಧೋನಿ, ಭಾರತ ತಂಡದ ನಾಯಕ
ಮೊಹಾಲಿ ಪರಿಸ್ಥಿತಿ ಸಂಪೂರ್ಣವಾಗಿ ನಮ್ಮ ಪರವಾಗಿರಲಿಲ್ಲ. ರೂಟ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದ ಹೊರತಾಗಿಯೂ ಈ ಪಿಚ್‌ನಲ್ಲಿ ನಾವು ಸಾಧಾರಣ ಮೊತ್ತ ಕಲೆಹಾಕಿದ್ದೆವು. ರೋಹಿತ್ ಹಾಗೂ ರೈನಾ ಜತೆಯಾಟ ಪಂದ್ಯವನ್ನು ನಮ್ಮಿಂದ ಕಸಿದುಕೊಂಡಿತು.
-ಅಲಸ್ಟೇರ್ ಕುಕ್, ಇಂಗ್ಲೆಂಡ್ ತಂಡದ ನಾಯಕ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


