ಕ್ರೀಡೆ

ರಾಡ್‌ವಾನ್‌ಸ್ಕಾ ಮಣಿಸಿದ ಲೀ ನಾ

Published On :

ಮೆಲ್ಬರ್ನ್: ಚೀನಾದ ಟೆನಿಸ್ ತಾರೆ ಲೀ ನಾ ಅವರು ಆಸ್ಟ್ರೇಲಿಯನ್ ಓಪನ್ ಮಹಿಳಾ ಸಿಂಗಲ್ಸ್ ವಿಭಾಗದ ಸೆಮಿಫೈನಲ್ ತಲುಪಿದ್ದಾರೆ. ಮಂಗಳವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಅವರು ಅಗ್ನಿಸ್ಕಾ ರಾಡ್‌ವಾನ್‌ಸ್ಕಾ ಅವರನ್ನು 7-5, 6-3 ಅಂತರದಲ್ಲಿ ಸೋಲಿಸಿ, ಸೆಮಿಫೈನಲ್ ಸುತ್ತಿಗೆ ಕಾಲಿಟ್ಟರು. ವಿಶ್ವದ ಆರನೇ ಶ್ರೇಯಾಂಕದಲ್ಲಿರುವ ಲೀ, 2011ರ ಆಸ್ಟ್ರೇಲಿಯನ್ ಓಪನ್‌ನ ಫೈನಲ್‌ವರೆಗೂ ಲಗ್ಗೆಯಿಟ್ಟಿದ್ದರು. ಆದರೆ, ಫೈನಲ್ ಪಂದ್ಯದಲ್ಲಿ ಕಿಮ್ ಕ್ಲಿಸ್ಟೆರ್ಸ್ ಅವರ ವಿರುದ್ಧ ಪರಾಭವಗೊಂಡಿದ್ದ ಅವರು ಅಂದು ಪ್ರಶಸ್ತಿಯಿಂದ ವಂಚಿತರಾಗಿದ್ದರು. ಆದರೆ, ಈಗ ಮತ್ತೆ ಪ್ರಶಸ್ತಿಯತ್ತ ದಾಪುಗಾಲು ಇಟ್ಟಿರುವ ಲೀ ಅವರು  ಚಾಂಪಿಯನ್ ಆಗುವ ಸನಿಹದಲ್ಲೇ ಇದ್ದಾರೆ. ಅತ್ತ, ಈ ಬಾರಿಯ ಟೆನಿಸ್ ಋತುವಿನಲ್ಲಿ ಆಕ್ಲೆಂಡ್ ಟೆನಿಸ್ ಟೂರ್ನಿ, ಸಿಡ್ನಿ ಟೆನಿಸ್ ಟೂರ್ನಿಗಳ ಪ್ರಶಸ್ತಿಗಳ ಹಿರಿಮೆಯೊಂದಿಗೆ ಪಂದ್ಯಾವಳಿಯಲ್ಲಿ ಕಾಲಿಟ್ಟಿದ್ದ ರಾಡ್‌ವಾನ್‌ಸ್ಕಾ, ಆಸ್ಟ್ರೇಲಿಯನ್ ಓಪನ್‌ನ ಸೆಮಿಫೈನಲ್‌ನಲ್ಲಿ ಸೋತು ನಿರಾಸೆಗೊಂಡರು. ಪಂದ್ಯದ ಮೊದಲ ಸೆಟ್‌ನಲ್ಲಿ ಆಕರ್ಷಕ ಹೊಡೆತಗಳಿಂದ ಗಮನ ಸೆಳೆದ ಈ ಇಬ್ಬರಲ್ಲಿ ಲೀ ನಾ ಅವರೇ ಕೊಂಚ ಮೊನಚಾದ ಆಟ ಪ್ರದರ್ಶಿಸಿದರು. ಅತ್ತ ರಾಡ್‌ವಾನ್‌ಸ್ಕಾ ತಾವೇನೂ ಕಮ್ಮಿ ಇಲ್ಲವೆಂಬಂತೆ ಆಡಿದರು. ಮೊದಲ ಸೆಟ್‌ನ ಕೊನೆಯ ಹಂತದಲ್ಲಿ ವಿಜೃಂಭಿಸಿದ ಲೀ ನಾ ಅವರು 7-5ರ ಅಂತರದಲ್ಲಿ ಜಯ ಸಾಧಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.