ಫೆ.1,2ಕ್ಕೆ ಕರಾಟೆ ಚಾಂಪಿಯನ್ ಶಿಪ್
ಶಿವಮೊಗ್ಗ: ಫೆಬ್ರವರಿ 1 ಮತ್ತು 2ರಂದು ಥೈಲ್ಯಾಂಡ್‌ನಲ್ಲಿ ನಡೆಯುವ ಫೆಸಿಫಿಕ್ ಇಂಟರ್‌ನ್ಯಾಷನಲ್ ಕರಾಟೆ ಚಾಂಪಿಯನ್ ಶಿಪ್ 2013ರಲ್ಲಿ ಶಿವಮೊಗ್ಗದ ಮೂವರು ಕರಾಟೆ ಪಟುಗಳು ಸ್ಪರ್ಧಿಸುತ್ತಿದ್ದಾರೆ.
ಕರಾಟೆ ಪಟುಗಳಾದ ಸನ್ಸೈ ಚಂದ್ರಕಾಂತ್, ರಾಜಾ ಆಗ್ರೋ ಸರ್ವಿಸ್ ಸೆಂಟರ್‌ನ ಬಸವರಾಜು, ಶಿವರಾಮಕೃಷ್ಣ ವಿವಿಧ ವಿಭಾಗಗಳಲ್ಲಿ ಸ್ಪರ್ಧಿಸುತ್ತಿದ್ದಾರೆ. ಇವರೊಂದಿಗೆ ಹಿರಿಯೂರಿನ ರಂಗಸ್ವಾಮಿ, ಗೋಕುಲ್ ಸಹ ಸ್ಪರ್ಧಿಸುತ್ತಿದ್ದಾರೆ.
ಈ ಕರಾಟೆ ಪಟುಗಳು ಕಳೆದ ತಿಂಗಳು ನಡೆದಂತಹ ರಾಷ್ಟ್ರೀಯಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಆಯ್ಕೆಯಾಗಿದ್ದು, ಈ ಪಂದ್ಯಾವಳಿಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಇವರೊಂದಿಗೆ ಭಾರತದ ಒಟ್ಟು 60 ಸ್ಪರ್ಧಾಗಳು ಪಾಲ್ಗೊಳ್ಳುತ್ತಿದ್ದು, ಒಟ್ಟು 18 ದೇಶದ ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಸನ್ಸೈ ಚಂದ್ರಕಾಂತ್, ಈ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುತ್ತಿರುವುದು ಹೆಮ್ಮೆ ಎನಿಸುತ್ತಿದೆ. ಸ್ಪರ್ಧೆಯಲ್ಲಿ ವಿಜೇತರಾಗುವ ವಿಶ್ವಾಸವಿದೆ ಎಂದರು.
ಇತರೆ ರಾಜ್ಯಗಳಲ್ಲಿ ಅಲ್ಲಿನ ಸರ್ಕಾರಗಳು ಕರಾಟೆ ಪಟುಗಳಿಗೆ ಪ್ರೋತ್ಸಾಹ ನೀಡುತ್ತಿದ್ದು, ಆರ್ಥಿಕ ಸಹಕಾರ ನೀಡುತ್ತಿವೆ. ಆದರೆ, ಕರ್ನಾಟಕದಲ್ಲಿ ಪ್ರೋತ್ಸಾಹದ ಕೊರತೆ ಇದೆ ಎಂದು ಅಳಲು ತೋಡಿಕೊಂಡ ಅವರು, ನಾವು ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಕೆಲವೊಂದು ಸಂಘ ಸಂಸ್ಥೆಗಳು ಹಣಕಾಸಿನ ನೆರವು ಒದಗಿಸಿಕೊಟ್ಟಿವೆ ಎಂದು ಸ್ಮರಿಸಿದರು.
ಸುದ್ದಿಗೋಷ್ಠಿಯಲ್ಲಿ ಸ್ಪರ್ಧಾಗಳು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

