ಉಪಾಂತ್ಯಕ್ಕೆ ಡೇವಿಡ್ ಫೆರರ್
ಮೆಲ್ಬರ್ನ್: ಖ್ಯಾತ ಟೆನಿಸ್ ಆಟಗಾರ ಡೇವಿಡ್ ಫೆರರ್ ಅವರು ಆಸ್ಟ್ರೇಲಿಯನ್ ಓಪನ್ ಪಂದ್ಯಾವಳಿಯ ಪುರುಷರ ಸಿಂಗಲ್ಸ್ ವಿಭಾಗದ ಸೆಮಿಫೈನಲ್ ತಲುಪಿದ್ದಾರೆ.
ಮಂಗಳವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅವರು ನಿಕೋಲಸ್ ಆಲ್‌ಮಾಗ್ರೊ ಅವರನ್ನು 4-6, 4-6, 7-5, 7-6 (4), 6-2 ಅಂತರದಲ್ಲಿ ಸೋಲಿಸಿದರು. ಮೊದಲೆರಡು ಸೆಟ್‌ಗಳಲ್ಲಿ ಅಲ್‌ಮಾಗ್ರೊ ಅವರ ವಿರುದ್ಧ ಸೋಲು ಕಂಡಿದ್ದ ಡೇವಿಡ್ ಫೆರರ್ ಅವರು, ಮೂರನೇ ಸೆಟ್‌ನಲ್ಲಿ ತಿರುಗೇಟು ನೀಡಿದರು. ಆದರೆ, ನಾಲ್ಕನೇ ಸೆಟ್‌ನಲ್ಲಿ ಇಬ್ಬರದೂ ಸಮಬಲದ ಹೋರಾಟವಾಯಿತು. ಇದರಿಂದಾಗಿ, ಸೆಟ್ ಟೈಬ್ರೇಕರ್‌ಗೆ ಒಳಗಾಯಿತು. ಇಬ್ಬರೂ ಮದಗಜಗಳಂತೆ ಕಾದಾಡಿದರಾದರೂ, ಅಂತಿಮವಾಗಿ ಈ ಸೆಟ್‌ನಲ್ಲಿ ಫೆರರ್ ಅವರೇ ಜಯ ಪಡೆದರು. ಮೂರನೇ ಸೆಟ್‌ನ ಸೋಲಿನ ಪರಿಣಾಮವಾಗಿ ಮಂಕಾದಂತೆ ಕಂಡುಬಂದ ಆಲ್‌ಮಾಗ್ರೋ ಅವರು, ನಾಲ್ಕನೇ ಹಾಗೂ ನಿರ್ಣಾಯಕ ಸೆಟ್‌ನಲ್ಲಿ ಹೆಚ್ಚು ಆರ್ಭಟಿಸಲಿಲ್ಲ. ಅತ್ತ, ಫೆರರ್ ಮಾತ್ರ ಹಿಂದಿನ ಸೆಟ್‌ಗಳಲ್ಲಿ ಆಡಿದಂತೇ ಉತ್ಸಾಹದಿಂದ ಆಡಿದರು. ಅವರ ಆಟಕ್ಕೆ ಪ್ರತಿಯುತ್ತರ ನೀಡುವಲ್ಲಿ ಪದೇ ಪದೇ ವಿಫಲರಾದ ಆಲ್‌ಮಾಗ್ರೋ ಅವರು, ನಾಲ್ಕನೇ ಸೆಟ್‌ನಲ್ಲಿ ಸುಲಭವಾಗಿ ಸೋಲು ಕಂಡರು. ಅಂತಿಮವಾಗಿ, ಫೆರರ್ ಅವರು ಪಂದ್ಯದಲ್ಲಿ ಜಯ ಸಾಧಿಸಿ, ಸೆಮಿಫೈನಲ್‌ಗೆ ಲಗ್ಗೆಯಿಟ್ಟರು. ಸ್ಪೇನ್‌ನ ಆಲ್‌ಮಾಗ್ರೋ ವಿರುದ್ಧ ಫೆರರ್ ದಾಖಲಿಸಿದ ಈ ಗೆಲುವು, ಅವರ ವಿರುದ್ಧ ಗಳಿಸಿದ ಸತತ 13ನೇ ಜಯವಾಗಿದೆ. ಈ ಹಿಂದಿನ 12 ಪಂದ್ಯಗಳಲ್ಲೂ ಫೆರರ್ ಅವರೇ ಆಲ್‌ಮಾಗ್ರೋ ವಿರುದ್ಧ ಜಯ ಗಳಿಸಿದ್ದಾರೆ. ಡೇವಿಸ್ ಕಪ್‌ನಲ್ಲಿ ಫೆರರ್ ಹಾಗೂ ಅಲ್‌ಮಾಗ್ರೋ ಜೊತೆಯಾಟಗಾರರಾಗಿದ್ದಾರೆ.
ವಿಶ್ವ ಟೆನಿಸ್‌ನಲ್ಲಿ 4ನೇ ಶ್ರೇಯಾಂಕದಲ್ಲಿರುವ ಫೆರರ್ ಅವರು, ಸೆಮಿಫೈನಲ್‌ನಲ್ಲಿ ಹಾಲಿ ಚಾಂಪಿಯನ್ ನೊವಾಕ್ ಜೊಕೋವಿಚ್ ಅಥವಾ ಥಾಮಸ್ ಬೆರ್ಡಿಚ್ ಅವರೊಂದಿಗೆ ಸೆಣೆಸಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

