'ಹಾಕಿಗೆ ಹಿಂದಿನ ವೈಭವ ಬರಲಿದೆ'
ಲಕ್ನೌ: ಐದು ತಂಡಗಳನ್ನೊಳಗೊಂಡ ಎಚ್‌ಐಎಲ್ ಪಂದ್ಯಾವಳಿಯು ಹಾಕಿ ಕ್ರೀಡೆಗೆ ಈ ಹಿಂದಿನ ವೈಭವವನ್ನು ತರಲಿದೆ ಎಂದು ಭಾರತ ಹಾಕಿ ತಂಡದ ನಾಯಕ ಹಾಗೂ ಎಚ್‌ಐಎಲ್‌ನ ಡೆಲ್ಲಿ ತಂಡದ ಮುಂದಾಳತ್ವ ವಹಿಸಿರುವ ಸರ್ದಾರ್ ಸಿಂಗ್ ಅಭಿಪ್ರಾಯ ಪಟ್ಟಿದ್ದಾರೆ. ಈ ಹಿಂದೆ ಪ್ರಿಮಿಯರ್ ಹಾಕಿ ಲೀಗ್ ತಮ್ಮನ್ನು ಸೇರಿದಂತೆ ಹಲವಾರು ಇತರೆ ಆಟಗಾರರಿಗೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯುವ ಅವಕಾಶ ಕಲ್ಪಿಸಿಕೊಟ್ಟಿದ್ದು, ಇದಕ್ಕೆ ಎಚ್‌ಐಎಲ್ ಹೊಸ ರೂಪ ನೀಡಲಿದೆ ಎಂದು ಸರ್ದಾರ್ ತಿಳಿಸಿದರು. ಈ ಪಂದ್ಯಾವಳಿಯಲ್ಲಿ ಜ್ಯಾಮಿ ಡ್ವೇರ್ ತೈನ್ ಡೆ ನ್ಯೂಜೆರ್ ಅವರಂತಹ ವಿಶ್ವದ ಪ್ರಮುಖ ಆಟಗಾರರು ಭಾಗವಹಿಯುತ್ತಿದ್ದು, ಈ ಪಂದ್ಯಾವಳಿ ವಿಶ್ವದ ಹಾಕಿ ಪಂದ್ಯಾವಳಿಗಳಲ್ಲಿ ಉತ್ತಮ ಪಂದ್ಯಾವಳಿಯಾಗಿದೆ ಎಂದು ಅವರು ತಿಳಿಸಿದರು. ಎಚ್‌ಐಎಲ್‌ನಲ್ಲಿ ಸುಮಾರು 50 ಒಲಿಂಪಿಯನ್ಸ್ ಹಾಗೂ ಎಲ್ಲಾ ಹಿರಿಯ ಆಟಗಾರರು ಭಾಗವಹಿಸುತ್ತಿದ್ದಾರೆ. ಹಾಲೆಂಡ್, ಜರ್ಮನಿ ಮತ್ತು ಆಸ್ಟ್ರೇಲಿಯಾದ ಪ್ರಮುಖ ಆಟಗಾರರು ಈ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿದ್ದು, ಇಂತಹ ಆಟಗಾರರ ಜತೆ ಆ ಡುವ ಅವಕಾಶ ಸಿಗುವುದು ಕೇವಲ ದೊಡ್ಡ ಪಂದ್ಯಾವಳಿಗಳಲ್ಲಿ ಮಾತ್ರ. ಈ ಅವಕಾಶಗಳಿಂದ ನಮ್ಮ ಆಟಗಾರರಿಗೆ ಕಲಿಯಲು ಹೆಚ್ಚಿನ ಅವಕಾಶ ಸಿಗಲಿದೆ ಎಂದು ಸರ್ದಾರ್ ಅಭಿಪ್ರಾಯ ಪಟ್ಟರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

