ಕ್ರೀಡೆ

ರಣಜಿಗೆ ಪೂಜಾರ, ರೋಹಿತ್ ಅಲಭ್ಯ

Published On :

ನವದೆಹಲಿ: ಪ್ರಸಕ್ತ ರಣಜಿ ಋತುವಿನ ಫೈನಲ್ ಪಂದ್ಯ ಜ.26 ರಿಂದ ಆರಂಭವಾಗಲಿದ್ದು, ಈ ಪಂದ್ಯಕ್ಕಾಗಿ ಚೇತೇಶ್ವರ ಪೂಜಾರ ಹಾಗೂ ರೋಹಿತ್ ಶರ್ಮಾ ಅವರನ್ನು ರಾಷ್ಟ್ರೀಯ ತಂಡದಿಂದ ಕೈಬಿಡಲಾಗುವುದಿಲ್ಲ ಎಂದು ಬಿಸಿಸಿಐ ತಿಳಿಸಿದೆ. ಮುಂಬೈ ಹಾಗೂ ಸೌರಾಷ್ಟ್ರ ತಂಡಗಳ ಪ್ರಮುಖ ಬ್ಯಾಟ್ಸ್‌ಮನ್‌ಗಳಾದ ಈ ಇಬ್ಬರು ಆಟಗಾರರನ್ನು ರಣಜಿ ಫೈನಲ್ ಪಂದ್ಯಕ್ಕಾಗಿ ರಾಷ್ಟ್ರೀಯ ತಂಡದಿಂದ ಬಿಡಲಾಗುವುದು ಎಂಬ ವರದಿಯನ್ನು ಬಿಸಿಸಿಐ ಅಧಿಕಾರಿಗಳು ತಳ್ಳಿ ಹಾಕಿದ್ದಾರೆ. ಪೂಜಾರ, ಜಡೇಜಾ ಹಾಗೂ ರೋಹಿತ್ ಈ ಮೂರು ಆಟಗಾರರಲ್ಲಿ ಯಾವುದೇ ಆಟಗಾರರನ್ನು ರಣಜಿ ಪಂದ್ಯಕ್ಕಾಗಿ ರಾಷ್ಟ್ರೀಯ ತಂಡದಿಂದ ಬಿಡಲಾಗುವುದಿಲ್ಲ. ಇಂಗ್ಲೆಂಡ್ ವಿರುದ್ಧ ಮೊಹಾಲಿ ಹಾಗೂ ಧರ್ಮಶಾಲಾದಲ್ಲಿ ನಡೆಯಲಿರುವ ನಾಲ್ಕನೇ ಹಾಗೂ ಐದನೇ ಪಂದ್ಯದ ವೇಳೆ ಈ ಆಟಗಾರರು ತಂಡದ ಜತೆಯಲ್ಲಿರುತ್ತಾರೆ ಎಂದು ಬಿಸಿಸಿಐ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.