ಭೂಪಾಲ್ ಎಸ್‌ಎಐಗೆ ಜಯ
ಮೈಸೂರು: ರೀತುಷಾ ಮತ್ತು ರೇಣುಕಾ ಅವರ ಅಮೋಘ ಆಟದ ನೆರವಿನಿಂದಾಗಿ ಭೂಪಾಲ್ ಎಸ್‌ಎಐ ಸ್ಪೋರ್ಟ್ಸ್ ಹಾಸ್ಟೆಲ್ ತಂಡವು, ತಮಿಳುನಾಡಿನ ಕೊವಿಲ್‌ಪಟ್ಟಿ ರಾಜೀವ್‌ಗಾಂಧಿ ಸ್ಪೋರ್ಟ್ಸ್ ಕ್ಲಬ್ ವಿರುದ್ಧ ಜಯಗಳಿಸಿದೆ.
ಇಲ್ಲಿನ ಮೈಸೂರು ವಿವಿ ಸ್ಪೋರ್ಟ್ಸ್ ಪೆವಿಲಿಯನ್ ಹಾಕಿ ಮೈದಾನದಲ್ಲಿ ರಾಷ್ಟ್ರೀಯ ಕ್ರೀಡಾದಿನದ ಅಂಗವಾಗಿ ಸೋಮವಾರದಿಂದ ಆರಂಭಗೊಂಡ ಮೇಜರ್ ಧ್ಯಾನ್‌ಚಂದ್ ಆಹ್ವಾನಿತ ಮಹಿಳೆಯರ ಹಾಕಿ ಪಂದ್ಯಾವಳಿಯಲ್ಲಿ ಭೂಪಾಲ್ ತಂಡವು 12-0 ಅಂತರದಲ್ಲಿ ಜಯಗಳಿಸಿತು.
ತಂಡದ ರೀತುಷಾ 8, 11 ಮತ್ತು 12ನೇ ನಿಮಿಷದಲ್ಲಿ ಗೋಲ್ ಬಾರಿಸಿದರೆ, ಸಹ ಆಟಗಾರ್ತಿ ರೇಣುಕಾ 5 ಮತ್ತು 35ನೇ ನಿಮಿಷದಲ್ಲಿ ಚಂಡನ್ನು ಗೋಲ್‌ನತ್ತ ಅಟ್ಟಿದರು. ಉಳಿದಂತೆ ಶಿಖಾ, ಸುಷ್ಮಾ, ಸೇವಂತಿ, ಪೂಜಾ ಯಾದವ್, ಮೌಲಿ, ಹೇಮಲತಾ ಮತ್ತು ಬಲ್ವಿಂದರ್ ಅವರು ಗೋಲ್ ಬಾರಿಸಿ, ಎದುರಾಳಿ ತಂಡವನ್ನು ನಿಯಂತ್ರಿಸಿದರು. ಮತ್ತೊಂದು ಪಂದ್ಯದಲ್ಲಿ ಲಕ್ನೋ ಇಲೆವೆನ್ ತಂಡವು ಕೂಡ್ಗಿ ಸ್ಪೋರ್ಟ್ಸ್ ಹಾಸ್ಟೆಲ್ ವಿರುದ್ಧ 10-0 ಅಂತರದಲ್ಲಿ ಜಯಗಳಿಸಿತು. ಮೈಸೂರಿನ ಡಿವೈಎಸ್‌ಎಸ್ ಸ್ಪೋರ್ಟ್ಸ್ ಹಾಸ್ಟೆಲ್ ತಂಡವು ಕೇರಳದ ಯುಜಿಸಿ ಸ್ಪೋರ್ಟ್ಸ್ ಹಾಸ್ಟೆಲ್ ವಿರುದ್ಧ 4-1 ಅಂತರದಲ್ಲಿ ಜಯಿಸಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

