ವಿಟಿಆರ್ ಪಂದ್ಯಾವಳಿ ಸೋತ ನಡಾಲ್
ವಿನಾ ಡೆಲ್ ಮಾರ್: ಖ್ಯಾತ ಟೆನಿಸ್ ಆಟಗಾರ ರಾಫೆಲ್ ನಡಾಲ್ ಅವರು ವಿಟಿಆರ್ ಟೆನಿಸ್ ಪಂದ್ಯಾವಳಿ ಫೈನಲ್ ಪಂದ್ಯದಲ್ಲಿ ಸೋಲುವ ಮೂಲಕ ತಮ್ಮ ಅಭಿಮಾನಿಗಳಿಗೆ 'ಶಾಕ್' ನೀಡಿದ್ದಾರೆ. ಭಾನುವಾರ ನಡೆದ, ಪುರುಷರ ವಿಭಾಗದ ಸಿಂಗಲ್ಸ್ನ ಫೈನಲ್ ಪಂದ್ಯದಲ್ಲಿ ಅವರು, ಅರ್ಜೆಟೀನಾದ ಆಟಗಾರ ಹೊರಾಸಿಯೋ ಜೆಬಲ್ಲೋಸ್ ಅವರ ವಿರುದ್ಧ 6-7 (2), 7-6 (6), 6-4 ಅಂತರದಲ್ಲಿ ಪರಾಭವಗೊಂಡರು.
ಕ್ಲೇ ಕೋರ್ಟ್ ಪಂದ್ಯಾವಳಿಗಳಲ್ಲಿ ಪ್ರಶಸ್ತಿ ಗೆಲ್ಲುವ ಹಂತದಲ್ಲಿ ನಡಾಲ್ ಅವರು ಸೆಣೆಸಿದ್ದು ಇದು 37ನೇ ಬಾರಿ. ಆದರೆ, ಜೆಬಲ್ಲೋಸ್ ಪಾಲಿಗೆ ಇದು ಮೊದಲ ಸಿಂಗಲ್ಸ್ ಪ್ರಶಸ್ತಿ.
ಇಬರಿಬ್ಬರ ನಡುವಿನ ಫೈನಲ್ ಪಂದ್ಯ ತೀವ್ರ ಹಣಾಹಣಿಯಿಂದ ಕೂಡಿತ್ತು. ನಡಾಲ್ ಕೊಡುತ್ತಿದ್ದ ಪ್ರತಿಯೊಂದು ಸವಾಲಿಗೆ, ಪ್ರತಿ ಸವಾಲು ಹಾಕುತ್ತಲೇ ಸಾಗಿದ ಜೆಬಲ್ಲೋಸ್ ಅವರು, ಪಂದ್ಯದಲ್ಲಿ ಜಯಶಾಲಿಯಾಗುವಲ್ಲಿ ಕೊನೆಗೂ ಯಶಸ್ವಿಯಾದರು.
ಇವರಿಬ್ಬರ ಸಮಬಲ ಹೋರಾಟದಿಂದ ಯಾವುದೇ ಸರ್ವೀಸ್ ಬ್ರೇಕ್ಗಳಿಲ್ಲದೇ, ಮೊದಲ ಸೆಟ್ ಟೈ ಬ್ರೇಕರ್ಗೆ ಒಳಗಾಗಿತ್ತು. ಈ ಹಂತದಲ್ಲಿ, ನಡಾಲ್ ಕೆಲ ತಪ್ಪುಗಳನ್ನೆಸಗಿದರು. ಇದರ ಲಾಭ ಪಡೆದ ಜೆಬಲ್ಲೋಸ್, ಟೈ ಬ್ರೇಕ್ ಗೆಲ್ಲುವಲ್ಲಿ ಯಶಸ್ವಿಯಾದರು.
ಎರಡನೇ ಸೆಟ್ನಲ್ಲೂ ಜೆಬಲ್ಲೋಸ್ ಅವರ ಕೈ ಮೇಲಾಯಿತು. ಅತ್ತ, ನಡಾಲ್ ಸಹ ಸೆಟ್ ಬಿಟ್ಟುಕೊಡಲು ಸಿದ್ಧರಿರಲಿಲ್ಲ. ಹಾಗಾಗಿ, ಎರಡನೇ ಸೆಟ್ ಸಹ ಟೈ ಬ್ರೇಕರ್ಗೆ ಬಂದು ನಿಂತಿತು. ಮೊದಲ ಸೆಟ್ ಆದಂತೆಯೇ, ಎರಡನೇ ಸೆಟ್ನಲ್ಲೂ ಯಾವುದೇ ಸರ್ವೀಸ್ ಬ್ರೇಕ್ಗಳಿರಲಿಲ್ಲ. ಇಲ್ಲೂ, ಜೆಬಲ್ಲೋಸ್ ಜೋರಾದ ಆಟ ಪ್ರದರ್ಶಿಸಿ, ಈ ಸೆಟ್ ಅನ್ನೂ ತಮ್ಮ ವಶಕ್ಕೆ ತೆಗೆದ್ದುಕೊಂಡರು. ಇಬ್ಬರ ಪಾಲಿಗೆ ಮೂರನೇ ಹಾಗೂ ನಿರ್ಣಾಯಕ ಸೆಟ್ನ ಮೊದಲ ಗೇಮ್ನಲ್ಲೇ ನಡಾಲ್ ಜಯ ಸಾಧಿಸಿದರು. ಆದರೆ, ಮುಂದಿನ ಗೇಮ್ನಲ್ಲಿ ಜೆಬಲ್ಲೋಸ್ ಜಯ ಸಾಧಿಸಿದರಲ್ಲದೇ, ಪಂದ್ಯದಲ್ಲೂ ವಿಜಯಿಯಾದರು.
ಪ್ರಶಸ್ತಿ ಗೆದ್ದುಕೊಂಡ ಜೆಬಲ್ಲೋಸ್ ಅವರು, 1.3 ಮಿಲಿಯನ್ ಯುಎಸ್ ಡಾಲರ್ ಮೊತ್ತವನ್ನು ಜೇಬಿಗಿಳಿಸಿದರೆ, ನಡಾಲ್ ಅವರು 50 ಮಿಲಿಯನ್ ಯುಎಸ್ ಡಾಲರ್ ಮೊತ್ತವನ್ನು ತಮ್ಮದಾಗಿಸಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

