ವಿಂಡೀಸ್ ವೈಟ್ವಾಷ್
ಮೆಲ್ಬರ್ನ್: ಕಳೆದ ವರ್ಷ ಟಿ20 ವಿಶ್ವಕಪ್ ಗೆದ್ದು ಉತ್ತಮ ಫಲಿತಾಂಶ ಪಡೆದಿದ್ದ ವೆಸ್ಟ್ ಇಂಡೀಸ್ ತಂಡ, ಈ ವರ್ಷ ತನ್ನ ಮೊದಲ ಏಕದಿನ ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ವೈಟ್ವಾಷ್ ಆಗುವ ಮೂಲಕ ನಿರಾಸೆ ಅನುಭವಿಸಿದೆ.
ಭಾನುವಾರ ಮೆಲ್ಬರ್ನ್ನಲ್ಲಿ ನಡೆದ ಐದನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 17 ರನ್ಗಳ ಸೋಲು ಅನುಭವಿಸಿದ್ದು, ಈ ಮೂಲಕ ಐದು ಏಕದಿನ ಪಂದ್ಯಗಳ ಸರಣಿಯಲ್ಲಿ ಗೆಲುವು ಕಾಣದೆ ವೈಟ್ವಾಷ್ ಆಗಿದೆ.
ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ವಿಂಡೀಸ್ ತಂಡ, ಉತ್ತಮವಾಗಿಯೇ ಬೌಲಿಂಗ್ ಆರಂಭಿಸಿತು. ಇನಿಂಗ್ಸ್ ಮೊದಲ ಎಸೆತದಲ್ಲೇ ಇನ್ಫಾರ್ಮ್ ಬ್ಯಾಟ್ಸ್ಮನ್ ಶೇನ್ ವಾಟ್ಸನ್ (0) ಅವರನ್ನು ಬೌಲ್ಡ್ ಮಾಡಿದ ಟಿನೋ ಬೆಸ್ಟ್, ನಂತರ ತಮ್ಮ ಎರಡನೇ ಓವರ್ನಲ್ಲಿ ಮತ್ತೊಬ್ಬ ಆರಂಭಿಕ ಫಿಂಚ್ (1) ಅವರ ವಿಕೆಟ್ ಪಡೆದು ವಿಂಡೀಸ್ಗೆ ಅದ್ಭುತ ಆರಂಭ ನೀಡಿದರು.
ಈ ವೇಳೆ ಜತೆಯಾದ ಹ್ಯೂಸ್ (29) ಹಾಗೂ ಶಾನ್ ಮಾರ್ಶ್ (40) ತಂಡಕ್ಕೆ ಅರ್ಧಶತಕದ ಜತೆಯಾಟ ನೀಡಿದರು. ಈ ವೇಳೆ ದಾಳಿಗಿಳಿದ ಡ್ವೇನ್ ಬ್ರಾವೊ ಈ ಇಬ್ಬರು ಆಟಗಾರರನ್ನು ಪೆವಿಲಿಯನ್ಗೆ ಕಳುಹಿಸಿದರು. ಈ ಸಮಯದಲ್ಲಿ 84 ರನ್ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಕಾಂಗರೂಗಳಿಗೆ ನೆರವಾಗಿದ್ದು ವೊಗ್ಸ್. 106 ಎಸೆತಗಳನ್ನು ಎದುರಿಸಿದ ವೊಗ್ಸ್ 10 ಬೌಂಡರಿ ಹಾಗೂ 2 ಭರ್ಜರಿ ಸಿಕ್ಸರ್ಗಳ ನೆರವಿನಿಂದ ಅಜೇಯ 112 ರನ್ಗಳಿಸಿದರು. ನಂತರ ಬಂದ ಹ್ಯಾಡಿನ್ (43) ಹಾಗೂ ಫಾಕ್ನರ್ ಅಜೇಯ 31 ರನ್ಗಳಿಸಿ ವೊಗ್ಸ್ಗೆ ಸಾಥ್ ನೀಡಿದರು. ಅಂತಿಮವಾಗಿ ಆಸೀಸ್ ತಂಡ 50 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 274ರನ್ ಕಲೆಹಾಕಿತು. ಕಾಂಗರೂಗಳು ನೀಡಿದ ಸವಾಲಿನ ಮೊತ್ತವನ್ನು ಬೆನ್ನಟ್ಟಿದ ವಿಂಡೀಸ್ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ತಂಡದ ಮೊತ್ತ 7ರನ್ ಆಗಿದ್ದಾಗ ಪೊವೆಲ್ (2) ಜಾನ್ಸನ್ ಎಸೆತದಲ್ಲಿ ಫಿಂಚ್ಗೆ ಕ್ಯಾಚ್ ನೀಡಿದರು. ಈ ವೇಳೆ ಜತೆಯಾದ ಚಾರ್ಲ್ಸ್ ಹಾಗೂ ಡರೇನ್ ಬ್ರಾವೊ 106 ರನ್ಗಳ ಶತಕದ ಜತೆಯಾಟವಾಡಿದರು.
ಡರೆನ್ ಬ್ರಾವೊ ಔಟಾದ ನಂತರ ಬಂದ ಡ್ವೇನ್ ಬ್ರಾವೊ ಕೇವಲ 13 ರನ್ಗಳಿಸಿ ಜಾನ್ಸನ್ ಎಸೆತದಲ್ಲಿ ಬೌಲ್ಡ್ ಆದರು. ನಂತರ ಬಂದ ಪೊಲಾರ್ಡ್ ಚಾರ್ಲ್ಸ್ ಜತೆಗೂಡಿ ಅರ್ಧ ಶತಕದ ಜತೆಯಾಟವಾಡಿದರು.
ಒಂದು ಹಂತದಲ್ಲಿ ವಿಂಡೀಸ್ ತಂಡ 36 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 175 ರನ್ಗಳಿಸಿ ಉತ್ತಮ ಹಂತದಲ್ಲಿತ್ತು. 36.5ನೇ ಓವರ್ನಲ್ಲಿ ಶತಕಗಳಿಸಿ ಉತ್ತಮವಾಗಿ ಆಡುತ್ತಿದ್ದ ಚಾರ್ಲ್ಸ್ ಮೆಕೆ ಎಸೆತದಲ್ಲಿ ಕಟಿಂಗ್ ಕ್ಯಾಚ್ ನೀಡಿ ಹೊರ ನಡೆದರು. ನಂತರ ಬಂದ ಯಾವುದೇ ಬ್ಯಾಟ್ಸ್ಮನ್ ನೆಲಕಚ್ಚಿ ಆಡಲಿಲ್ಲ. ಅಂತಿಮವಾಗಿ ವಿಡೀಸ್ ತಂಡ 49.5 ಓವರ್ಗಳಿಗೆ 257 ರನ್ಗಳಿಸಿ ಆಲೌಟ್ ಆಯಿತು. ಆಸೀಸ್ ಪರ ಮೆಕೆ ಹಾಗೂ ಜಾನ್ಸನ್ ತಲಾ 3 ವಿಕೆಟ್ ಪಡೆದು ಮಿಂಚಿದರು.
ಸಂಕ್ಷಿಪ್ತ ಸ್ಕೋರ್
ಆಸ್ಟ್ರೇಲಿಯಾ 274/5 (50 ಓವರ್)
ವೊಗ್ಸ್ ಅಜೇಯ 112 (106)
ಹ್ಯಾಡಿನ್ 43 (45)
ಬೌಲಿಂಗ್: ಡ್ವೇನ್ ಬ್ರಾವೊ 62/2, ಬೆಸ್ಟ್ 71/2
ವೆಸ್ಟ್ ಇಂಡೀಸ್ 257/10 (49.5 ಓವರ್)
ಚಾರ್ಲ್ಸ್ 100 (121)
ಪೊಲಾರ್ಡ್ 45 (62)
ಬೌಲಿಂಗ್: ಜಾನ್ಸನ್ 50/3, ಮೆಕೆ 52/3
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

