ಭಜ್ಜಿ ಪಡೆಗೆ ರಾಯುಡು ಆಸರೆ
ಆಂಬಟಿ ರಾಯುಡು ಅವರ ಅಜೇಯ 118 ರನ್ಗಳ ಸಹಾಯದಿಂದಾಗಿ, ಹರ್ಭಜನ್ ಸಿಂಗ್ ನೇತೃತ್ವದ ಇತರೆ ಭಾರತ ತಂಡ...

ಮುಂಬೈ: ಆಂಬಟಿ ರಾಯುಡು ಅವರ ಅಜೇಯ 118 ರನ್ಗಳ ಸಹಾಯದಿಂದಾಗಿ, ಹರ್ಭಜನ್ ಸಿಂಗ್ ನೇತೃತ್ವದ ಇತರೆ ಭಾರತ ತಂಡ, ಮುಂಬೈ ವಿರುದ್ಧ ನಡೆಯುತ್ತಿರುವ ಇರಾನಿ ಟ್ರೋಫಿ ಪಂದ್ಯದಲ್ಲಿ 413 ರನ್ ಮುನ್ನಡೆ ಗಳಿಸಿದೆ.
ಶುಕ್ರವಾರ ದಿನಾಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 27 ರನ್ ಗಳಿಸಿದ್ದ ಇತರೆ ಭಾರತ, ದಿನದಾಟದಲ್ಲಿ 4 ವಿಕೆಟ್ ನಷ್ಟಕ್ಕೆ 296 ರನ್ ಗಳಿಸಿತು.
ಶನಿವಾರ ಇನಿಂಗ್ಸ್ ಮುಂದುವರೆಸಿದ್ದ ಮುರಳಿ ವಿಜಯ್ ಹಾಗೂ ಶ್ರೀಶಾಂತ್, ಇಬ್ಬರೂ 2ನೇ ವಿಕೆಟ್ಗೆ 60 ರನ್ ಸೇರಿಸಿದರು. 18ನೇ ಓವರ್ನಲ್ಲಿ ಶ್ರೀಶಾಂತ್ ಅವರು, ರನೌಟ್ ಆಗಿ ಹೊರನಡೆದರು. ಆನಂತರ, ಕ್ರೀಸ್ಗೆ ಕಾಲಿಟ್ಟ ಮನೋಜ್ ತಿವಾರಿ, ಆರಂಭಿಕ ಮುರಳಿ ವಿಜಯ್ ಜೊತೆ ಸೇರಿಕೊಂಡರು. ಆದರೆ, ಈ ಜೋಡಿ ಹೆಚ್ಚು ಆಡಲಿಲ್ಲ. ತಂಡದ ಮೊತ್ತಕ್ಕೆ ಕೇವಲ 7 ರನ್ ಸೇರಿಸುವಷ್ಟರಲ್ಲಿ ವಿಜಯ್ ವಿಕೆಟ್ ಒಪ್ಪಿಸುವ ಮೂಲಕ ಈ ಜೋಡಿ ಮುರಿದುಬಿತ್ತು.
ಆದರೆ, ಈ ಹಂತದಲ್ಲಿ ತಿವಾರಿಗೆ ಜೋಡಿಯಾದ ಆಂಬಟಿ ರಾಯುಡು, ಜವಾಬ್ದಾರಿಯುತ ಆಟವಾಡಿ 4ನೇ ವಿಕೆಟ್ಗೆ ಭರ್ಜರಿ 140 ರನ್ಗಳ ಜೊತೆಯಾಟವಾಡಿದರು. ಏತನ್ಮಧ್ಯೆ ಶತಕಾರ್ಧ ಗಳಿಸಿದ ತಿವಾರಿ, 5 ಬೌಂಡರಿ, 3 ಸಿಕ್ಸರ್ ಸೇರಿದಂತೆ 69 ರನ್ ಗಳಿಸಿದರು. ತಂಡದ ಮೊತ್ತ 207 ರನ್ ಆಗಿದ್ದಾಗ, ಮನೋಜ್ ತಿವಾರಿ ವಿಕೆಟ್ ಒಪ್ಪಿಸಿದರು. ಆಗ, ರಾಯುಡು ಅವರಿಗೆ ಜೋಡಿಯಾಗಿದ್ದು ಮೊದಲ ಇನಿಂಗ್ಸ್ನಲ್ಲಿ ಶತಕ ಬಾರಿಸಿದ್ದ ಸುರೇಶ್ ರೈನಾ. ಈ ಜೋಡಿ, ದಿನಾಂತ್ಯದವರೆಗೂ ಅಜೇಯವಾಗಿ ಉಳಿದು, ತಂಡದ ಮೊತ್ತಕ್ಕೆ 89 ರನ್ ಸೇರಿಸಿತು.
9 ಬೌಂಡರಿ, 4 ಸಿಕ್ಸರ್ ಸೇರಿದಂತೆ 118 ರನ್ ಗಳಿಸಿರುವ ಆಂಬಟಿ ರಾಯುಡು ಹಾಗೂ 70 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್ ಸೇರಿದಂತೆ 40 ರನ್ ಗಳಿಸಿರುವ ರೈನಾ ಅವರು, ಭಾನುವಾರ ಇನಿಂಗ್ಸ್ ಮುಂದುವರೆಸಲಿದ್ದಾರೆ.
ಸ್ಕೋರ್ ಬೋರ್ಡ್
ಇತರೆ ಭಾರತ ಪ್ರಥಮ ಇನಿಂಗ್ಸ್ 526/10
ಮುಂಬೈ ಪ್ರಥಮ ಇನಿಂಗ್ಸ್ 409/10
ಇತರೆ ಭಾರತ ದ್ವಿತೀಯ ಇನಿಂಗ್ಸ್ 296/4
(ಶುಕ್ರವಾರ ದಿನಾಂತ್ಯಕ್ಕೆ 27/1)
ಮುರಳಿ ವಿಜಯ್ ಸಿ ಶರ್ಮಾ ಬಿ ಠಾಕುರ್ 35, ಶ್ರೀಶಾಂತ್ ರನೌಟ್ ಶರ್ಮಾ 18, ಮನೋಜ್ ತಿವಾರಿ ಸಿ ಜಾಫರ್ ಬಿ ದಾಬೋಲ್ಕರ್ 69, ಆಂಬಟಿ ರಾಯಿಡು ಅಜೇಯ 118, ರೈನಾ ಅಜೇಯ 40, ಇತರೆ 16.
ವಿಕೆಟ್ ಪತನ: 2-60, 3-67, 4-207.
ಬೌಲಿಂಗ್: ಕುಲ್ಕರ್ಣಿ 13-3-31-1, ನಾಯರ್ 9-3-28-0, ಖಾನ್ 12-6-21-0, ಠಾಕುರ್ 9-0-25-1, ಚವಾಣ್ 29-4-93-0, ದಾಬೋಲ್ಕರ್ 18-1-73-1, ಶರ್ಮಾ 5-0-21-0
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


