ಎಐಟಿಎ- ಆಟಗಾರರ ನಡುವಿನ ಬಿಕ್ಕಟ್ಟು ಅಂತ್ಯ
ನವದೆಹಲಿ: ಸುಮಾರು ಐದು ವಾರಗಳಿಂದ ದೇಶದ ಅಗ್ರ ಟೆನಿಸ್ ಪಟುಗಳು ಹಾಗೂ ಭಾರತೀಯ ಟೆನಿಸ್ ಸಂಸ್ಥೆ (ಎಐಟಿಎ) ನಡುವೆ ನಡೆಯುತ್ತಿದ್ದ ಜಗಳಕ್ಕೆ ತೆರೆಬಿದ್ದಿದೆ. ಡೇವಿಸ್ ಕಪ್ನಲ್ಲಿ ಪಾರದರ್ಶಕತೆ ಹಾಗೂ ಮಹತ್ವದ ಬದಲಾವಣೆಗಳಿಗೆ ಸಂಬಂಧಿಸಿದಂತೆ ತಾವಿಟ್ಟಿದ್ದ ಬೇಡಿಕೆಗಳಿಗೆ ಸ್ಪಂದಿಸಿರುವ ಎಐಟಿಎ, ತಾನು ನೀಡುವ ಎಲ್ಲಾ ಆಶ್ವಾಸನೆಗಳನ್ನು ಬರವಣೆಗೆಯಲ್ಲಿ ನೀಡಬೇಕೆಂದು ಬಂಡಾಯ ಆಟಗಾರರು ಪಟ್ಟು ಹಿಡಿದಿದ್ದರು. ಇದಕ್ಕೆ ಎಐಟಿಎ ಒಪ್ಪಿದ ಹಿನ್ನೆಲೆಯಲ್ಲಿ, ವಿವಾದ ಅಂತ್ಯಗೊಂಡಿದೆ.
ಆಟಗಾರರ ಬೇಡಿಕೆಯಂತೆ, ಎಲ್ಲಾ ಆಶ್ವಾಸನೆಗಳನ್ನು ಬರವಣೆಗೆ ರೂಪದಲ್ಲಿ ನೀಡಲಾಗಿದ್ದು, ಇದರಿಂದಾಗಿ, ವಿವಾದ ಅಂತ್ಯಗೊಂಡಿದೆ ಎಂದು ಮೂಲಗಳು ಹೇಳಿವೆ.
ವಿವಾದ ಸುಖಾಂತ್ಯಗೊಂಡಿದ್ದರಿಂದ, ಶೀಘ್ರದಲ್ಲೇ ಆರಂಭಗೊಳ್ಳಲಿರುವ ಭಾರತ-ಇಂಡೋನೇಷ್ಯಾ ನಡುವಿನ ಟೆನಿಸ್ ಪಂದ್ಯಾವಳಿಗೆ ಮಹೇಶ್ ಭೂಪತಿ, ಸೋಮದೇವ್ ಸೇರಿದಂತೆ ಹಲವು ಅನುಭವಿ ಆಟಗಾರರು ಲಭ್ಯವಾಗಲಿದ್ದಾರೆ. ಇದೀಗ ಇಂಡೋನೇಷ್ಯಾ ವಿರುದ್ಧದ ಗ್ರೂಪ್ 1ರ ಪಂದ್ಯಗಳಿಗೆ ಭಾರತದ ಅಗ್ರ ಟೆನಿಸಿಗರನ್ನೇ ಆರಿಸಿ, ಬಲಿಷ್ಠ ತಂಡವನ್ನು ಎಐಟಿಎ ಕಳಿಸಲು ಅನುಕೂಲಕರ ವಾತಾವರಣ ಸೃಷ್ಟಿಯಾಗಿದೆ. ಈ ಪಂದ್ಯಾವಳಿಯು ಏಪ್ರಿಲ್ 5ರಿಂದ 7ರವರೆಗೆ ಬೆಂಗಳೂರಿನಲ್ಲಿ ನಡೆಯಲಿದೆ.
ವಿವಾದ ಹಾಗೂ ಬಂಡಾಯಗಳಿಂದಾಗಿ, ಕಳೆದ ವಾರ ನಡೆದ ಡೇವಿಸ್ ಕಪ್ನಿಂದ ಪ್ರಮುಖ ಆಟಗಾರರು ಹಿಂದೆ ಸರಿದಿದ್ದರು. ಅವರ ಬದಲಿಗೆ ಕಿರಿಯ ಆಟಗಾರರು ಡೇವಿಸ್ ಕಪ್ನಲ್ಲಿ ಕಣಕ್ಕಿಳಿದಿದ್ದರು. ಎದುರಾಳಿ ದಕ್ಷಿಣ ಕೊರಿಯಾದ ಬಲಿಷ್ಠ ಆಟಗಾರರ ಮುಂದೆ ಭಾರತೀಯ ಆಟಗಾರರು ವೈಫಲ್ಯ ಕಂಡಿದ್ದರು. ಇದರಿಂದಾಗಿ, ಭಾರತ, ಪಂದ್ಯಾವಳಿಯಲ್ಲಿ 1-4ರ ಹೀನಾಯ ಸೋಲು ಕಂಡಿತ್ತು.
ಆಟಗಾರರು ಮುಂದಿಟ್ಟಿದ್ದ ಬೇಡಿಕೆಗಳಲ್ಲಿ ಹಲವು ಬೇಡಿಕೆಗಳನ್ನು ಈಡೇರಿಸಲು ಸಂಸ್ಥೆ ಒಪ್ಪಿಕೊಂಡಿದ್ದರೂ, ಪಂದ್ಯಾವಳಿಗಳಿಗೆ ನಡೆಯುವ ಆಯ್ಕೆಗೆ ಸಂಬಂಧಿಸಿದಂತೆ ಆಟಗಾರರ ಸಲಹೆಯನ್ನೂ ತೆಗೆದುಕೊಳ್ಳಬೇಕೆಂಬ ಮತ್ತೊಂದು ಬೇಡಿಕೆ ಬಗ್ಗೆ ಇನ್ನೂ ಖಚಿತ ನಿರ್ಧಾರವನ್ನು ಸಂಸ್ಥೆ ಕೈಗೊಂಡಿಲ್ಲ ಎಂದು ಮೂಲಗಳು ತಿಳಿಸಿವೆ. ಅದರಲ್ಲೂ ಪ್ರಮುಖವಾಗಿ, ತಂಡದ ಸದಸ್ಯರನ್ನು ಹಾಗೂ ನಾಯಕರನ್ನು ಆಯ್ಕೆ ಮಾಡುವಾಗ ಆಟಗಾರರ ಸಲಹೆಯನ್ನು ಕೇಳಬೇಕು ಎಂಬ ಬೇಡಿಕೆಯನ್ನು ಆಟಗಾರರು ಮುಂದಿಟ್ಟಿದ್ದರು.
ಬಂಡಾಯ ಶಮನಗೊಂಡಿರುವ ಬಗ್ಗೆ ಮಾತನಾಡಿದ ಎಐಟಿಎ ಮುಖ್ಯಸ್ಥ ಹಿರೋನ್ಮಯ್ ಚಟರ್ಜಿ, 'ನಾವು ಆಟಗಾರರು ಇಟ್ಟಿದ್ದ ಬೇಡಿಕೆಗಳಿಗೆ ಒಪ್ಪಿದ್ದು, ನಮ್ಮ ಆಶ್ವಾನಸೆಗಳನ್ನು ಬರಹದ ರೂಪದಲ್ಲಿ ನೀಡಲು ಸಮ್ಮತಿಸಿದ್ದೇವೆ. ಈ ಹಿನ್ನೆಲೆಯಲ್ಲಿ, ಸಮಾಧಾನಗೊಂಡಿರುವ 11 ಜನ ಬಂಡಾಯ ಆಟಗಾರರು, ಇಂಡೋನೇಷ್ಯಾ ವಿರುದ್ಧದ ಪಂದ್ಯಾವಳಿಯಲ್ಲಿ ಆಡಲು ಒಪ್ಪಿರುವುದಾಗಿ ಸೋಮದೇವ್ ಅವರು ನಮಗೆ ಇ-ಮೇಲ್ ರವಾನಿಸಿದ್ದಾರೆ' ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

