ದಾಖಲೆ ಸರಿಗಟ್ಟಿದ ಸಚಿನ್
ಮುಂಬೈ: ಇತರೆ ಭಾರತ ವಿರುದ್ಧದ ಇರಾನಿ ಕಪ್ ಪಂದ್ಯದ ಮೂರನೇ ದಿನವಾದ ಶುಕ್ರವಾರ ಶತಕ ಗಳಿಸುವ ಮೂಲಕ, ಸಚಿನ್ ತೆಂಡೂಲ್ಕರ್ ಅವರು ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಶತಕ ಗಳಿಸಿದ್ದ ಗವಾಸ್ಕರ್ ಅವರ ದಾಖಲೆಯನ್ನು ಸರಿಗಟ್ಟಿದರು.
ಗವಾಸ್ಕರ್ ಅವರು 1971ರಿಂದ 1997ರ ಅವಧಿಯಲ್ಲಿ ಒಟ್ಟು 81 ಶತಕಗಳನ್ನು ದಾಖಲಿಸಿದ್ದಾರೆ. ಅವುಗಳಲ್ಲಿ 34 ಟೆಸ್ಟ್ ಶತಕಗಳೂ ಸೇರಿವೆ.
ಅವರ ದಾಖಲೆಯನ್ನು ಸರಿಗಟ್ಟಿರುವ ಸಚಿನ್ ಅವರ ಖಾತೆಯಲ್ಲಿ ಇದೀಗ, 51 ಟೆಸ್ಟ್ ಶತಕ, 18 ರಣಜಿ ಶತಕ, 2 ಇರಾನಿ ಕಪ್ ಶತಕ, 3 ದುಲೀಪ್ ಕಪ್ ಶತಕಗಳು, 1 ಯಾರ್ಕ್ಶೈರ್ನಲ್ಲಿ ಗಳಿಸಿದ ಶತಕ ಹಾಗೂ ಇತರೆ 6 ವಿವಿಧ ಪಂದ್ಯಗಳಲ್ಲಿ ಶತಕ ಸೇರಿವೆ.
ಇನಿಂಗ್ಸ್ನ 92.2 ನೇ ಓವರ್ನಲ್ಲಿ ಶ್ರೀಶಾಂತ್ ಎಸೆತದಲ್ಲಿ ಸಿಂಗಲ್ ರನ್ ತೆಗೆದ ತೆಂಡೂಲ್ಕರ್ 81ನೇ ಶತಕ ದಾಖಲಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

