ಕ್ರೀಡೆ

ಕಿವೀಸ್‌ಗೆ 8 ವಿಕೆಟ್ ಭರ್ಜರಿ ಗೆಲುವು

Published On :

ಮುಂಬೈ: ಕಿವೀಸ್ ಬೌಲರ್‌ಗಳ ಕರಾರುವಾಕ್ ದಾಳಿಯಿಂದಾಗಿ, ಶ್ರೀಲಂಕಾ ತಂಡ, ಶುಕ್ರವಾರ ನಡೆದ ಮಹಿಳಾ ವಿಶ್ವಕಪ್‌ನ ಸೂಪರ್ ಸಿಕ್ಸ್ ಹಂತದ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 8 ವಿಕೆಟ್‌ಗಳ ಸೋಲು ಕಂಡಿತು.  ಮೊದಲು ಬ್ಯಾಟ್ ಮಾಡಿದ್ದ ಶ್ರೀಲಂಕಾ, ಕಿವೀಸ್ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸುವಲ್ಲಿ ವಿಫಲವಾಗಿ 103 ರನ್‌ಗೆ ಆಲೌಟ್ ಆಯಿತು.  
ಲಂಕಾ ನೀಡಿದ್ದ ಸುಲಭ ಮೊತ್ತವನ್ನು ಬೆನ್ನಟ್ಟಿದ ನ್ಯೂಜಿಲೆಂಡ್‌ಗೆ ಗೆಲುವು ಸಾಧಿಸುವುದೇನೂ ಕಷ್ಟವಾಗಲಿಲ್ಲ. ಮೊದಲ ವಿಕೆಟ್‌ಗೆ ಆರಂಭಿಕರಾದ ಮೆಕೇ, ಬೇಟ್ಸ್ ಜೋಡಿ 71 ರನ್ ಕಲೆಹಾಕಿತು. ಅದೇ ಮೊತ್ತಕ್ಕೆ ಬೇಟ್ಸ್ ಹಾಗೂ ಮೂರನೇ ಕ್ರಮಾಂಕದ ಸ್ಯಾಟರ್ತ್‌ವೇಯ್ಟ್ ಅವರ ವಿಕೆಟ್ ಉರುಳಿದರೂ, ನಾಲ್ಕನೇ ಕ್ರಮಾಂಕದ ಡಿವೈನ್ ಹಾಗೂ ಆರಂಭಿಕರಾದ ಮೆಕೇ ಇಬ್ಬರೂ ತಂಡವನ್ನು ಜಯದ ದಡ ಮುಟ್ಟಿಸುವಲ್ಲಿ ಸಫಲರಾದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.