ಭಾರತಕ್ಕೊಂದು ಸಮಾಧಾನಕರ ಜಯ
ಮಿಥಾಲಿ ರಾಜ್ ಅವರ ಅಜೇಯ ಶತಕದ ಸಹಾಯದಿಂದ ಭಾರತೀಯ ಮಹಿಳಾ ಕ್ರಿಕೆಟ್ ತಂಡ, ಪಾಕಿಸ್ತಾನ ಮಹಿಳಾ ತಂಡದ ...
ಕಟಕ್: ಮಿಥಾಲಿ ರಾಜ್ ಅವರ ಅಜೇಯ ಶತಕದ ಸಹಾಯದಿಂದ ಭಾರತೀಯ ಮಹಿಳಾ ಕ್ರಿಕೆಟ್ ತಂಡ, ಪಾಕಿಸ್ತಾನ ಮಹಿಳಾ ತಂಡದ ವಿರುದ್ಧ ನಡೆದ ವಿಶ್ವಕಪ್ನ 7ನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ 6 ವಿಕೆಟ್ಗಳ ಜಯ ಸಾಧಿಸಿತು.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನವನ್ನು 50 ಓವರ್ಗಳಲ್ಲಿ 192 ರನ್ಗಳಿಗೆ ನಿಯಂತ್ರಿಸುವಲ್ಲಿ ಯಶಸ್ವಿಯಾದ 'ವುಮೆನ್ ಇನ್ ಬ್ಲೂ', 46 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 195 ರನ್ ಗಳಿಸಿ, ವಿಜಯದ ನಗೆಬೀರಿತು.
ಈ ಬಾರಿಯ ವಿಶ್ವಕಪ್ನಲ್ಲಿ ಫಾರ್ಮ್ ಇಲ್ಲದೇ ಮಂಕಾಗಿದ್ದ ಭಾರತ ತಂಡದ ನಾಯಕಿ ಮಿಥಾಲಿ ರಾಜ್, ಈ ಪಂದ್ಯದಲ್ಲಿ ಫಾರ್ಮ್ಗೆ ಮರಳುವ ಮೂಲಕ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದರು. 141 ಎಸೆತಗಳಲ್ಲಿ ಅಜೇಯ 103 ರನ್ ಗಳಿಸಿದ ಅವರು, ತಮ್ಮ ಇನಿಂಗ್ಸ್ನಲ್ಲಿ ಒಟ್ಟು 13 ಬೌಂಡರಿ ಹಾಗೂ ಒಂದು ಸಿಕ್ಸರ್ ಬಾರಿಸಿದರು.
ರೀಮಾ ಮಲ್ಹೋತ್ರಾ ಅವರೊಂದಿಗೆ 5ನೇ ವಿಕೆಟ್ಗೆ 87 ರನ್ ಸೇರಿಸಿದ ಮಿಥಾಲಿ, ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಅತ್ತ, ಕ್ರೀಸ್ನಲ್ಲಿ ಅವರಿಗೆ ಉತ್ತಮ ಸಾಥ್ ನೀಡಿದ ಮಲ್ಹೋತ್ರಾ, 25 ರನ್ ಗಳಿಸಿ ಅಜೇಯರಾಗಿ ಉಳಿದರು. 108 ರನ್ಗಳಿಗೆ 4 ವಿಕೆಟ್ ಕಳೆದುಕೊಂಡಿದ್ದ ಭಾರತ, ಪಂದ್ಯದ ಒಂದು ಹಂತದಲ್ಲಿ ಸಂಕಷ್ಟಕ್ಕೆ ಸಿಲುಕಿತ್ತು. ಈ ಹಂತದಲ್ಲಿ ಇನಿಂಗ್ಸ್ನ ಜವಾಬ್ದಾರಿ ಹೊತ್ತುಕೊಂಡ ಈ ಇಬ್ಬರೂ, ತಮ್ಮ ಉತ್ತಮ ಜೊತೆಯಾಟದಿಂದ ಜಯ ತರುವಲ್ಲಿ ಯಶಸ್ವಿಯಾದರು.
ಆರಂಭಿಕರಾದ ತಿರುಶ್ಕಾಮಿನಿ ಅವರೊಂದಿಗೆ 2ನೇ ವಿಕೆಟ್ಗೆ 43 ರನ್ಗಳ ಜೊತೆಯಾಟವಾಡಿದ ಮಿಥಾಲಿ, ಹರ್ಮನ್ಪ್ರೀತ್ ಕೌರ್ ಅವರೊಂದಿಗೆ 3ನೇ ವಿಕೆಟ್ಗೆ 49 ರನ್ಗಳ ಜೊತೆಯಾಟವಾಡಿದರು.
ಇದಕ್ಕೂ ಮುನ್ನ, ಟಾಸ್ ಗೆದ್ದಿದ್ದ ಪಾಕಿಸ್ತಾನ ಮೊದಲು ಬ್ಯಾಟ್ ಮಾಡಲು ನಿರ್ಧರಿಸಿತು. ಆದರೆ, ಆ ನಿರ್ಧಾರ ಅವರಿಗೆ ಯಶಸ್ಸು ತಂದುಕೊಡಲಿಲ್ಲ. ಇನಿಂಗ್ಸ್ನ ಆರಂಭದಿಂದಲೂ ಎಡವುತ್ತಲೇ ಸಾಗಿದ ಪಾಕಿಸ್ತಾನ, ನಿಗದಿತ ಅಂತರದಲ್ಲಿ ವಿಕೆಟ್ ಚೆಲ್ಲುತ್ತಾ ಹೋಯಿತು. ಒಂದು ಹಂತದಲ್ಲಿ, 60 ರನ್ಗಳಿಗೆ 4 ಪ್ರಮುಖ ವಿಕೆಟ್ಗಳನ್ನು ಪಾಕಿಸ್ತಾನ ಕಳೆದುಕೊಂಡಿತ್ತು. ಆದರೆ, ಮೂರನೇ ಕ್ರಮಾಂಕದ ನಯೀನ್ ಅಬಿದಿ ಹಾಗೂ ಮಧ್ಯಮ ಕ್ರಮಾಂಕದ ನಿದಾ ದಾರ್ ಅವರ ಶತಕಾರ್ಧಗಳಿಂದಾಗಿ ಪಾಕಿಸ್ತಾನದ ಇನಿಂಗ್ಸ್ನಲ್ಲಿ ಕೊಂಚ ಚೇತರಿಕೆ ಕಂಡುಬಂತು.
ಪಾಕಿಸ್ತಾನದ ಇನಿಂಗ್ಸ್ ಅನ್ನು ಕಟ್ಟಿಹಾಕುವಲ್ಲಿ ಭಾರತೀಯ ಬೌಲರ್ಗಳು ಹರಿಸಿದ ಬೆವರು ಸಾರ್ಥಕವಾಯಿತು. ವೇಗಿಗಳಾದ ಜುಲಾನ್ ಗೋಸ್ವಾಮಿ (17/2) ಹಾಗೂ ನಾಗರಾಜನ್ ನಿರಂಜನಾ (35/3) ಇಬ್ಬರ ಆಕ್ರಮಣಕಾರಿ ಬೌಲಿಂಗ್, ಪಾಕಿಸ್ತಾನದ ಇನಿಂಗ್ಸ್ ಅನ್ನು ಆರಂಭದಲ್ಲೇ ದಿಕ್ಕುತಪ್ಪಿಸಿತು. ಇದರೊಂದಿಗೆ, ಉತ್ತಮ ಫೀಲ್ಡಿಂಗ್ ಸಹ ಭಾರತದ ಸಹಾಯಕ್ಕೆ ಬಂತು.
ಪಾಕಿಸ್ತಾನದ ಇಬ್ಬರು ಆರಂಭಿಕರನ್ನು ಇನಿಂಗ್ಸ್ನ ಮೊದಲ 11 ಓವರ್ಗಳೊಳಗೇ ಕೇವಲ 28 ರನ್ಗಳ ಮೊತ್ತಕ್ಕೆ ಪೆವಿಲಿಯನ್ಗೆ ಅಟ್ಟುವಲ್ಲಿ ಯಶಸ್ವಿಯಾದ ಭಾರತೀಯರು, ಉತ್ತಮ ಆರಂಭವನ್ನು ಪಡೆದುಕೊಂಡರು.
ಆದರೆ, ಪಾಕಿಸ್ತಾನದ ಮೂರನೇ ಕ್ರಮಾಂಕದ ಅಬಿದಿ ನಯಿನ್, ನಾಲ್ಕನೇ ಕ್ರಮಾಂಕದ ಬಿಸ್ಮಾ ಮಾರೂಫ್ (15) ಅವರೊಂದಿಗೆ 32 ರನ್ಗಳ ಜೊತೆಯಾಟವಾಡಿ, ಭಾರತಕ್ಕೆ ಕೆಲ ಕಾಲ ಸವಾಲಾಗಿ ನಿಂತಿದ್ದರು. ಇನಿಂಗ್ಸ್ನ 22ನೇ ಓವರ್ನಲ್ಲಿ ತಂಡದ ಮೊತ್ತ 60 ರನ್ ಆಗಿದ್ದಾಗ, ಬಿಸ್ಮಾ ಮಾರೂಫ್ ಅವರ ವಿಕೆಟ್ ಪತನಗೊಂಡ ನಂತರ, ಅದೇ ಮೊತ್ತಕ್ಕೆ ಆಸ್ಮಾವಿಯಾ ಇಕ್ಬಾಲ್ ಅವರನ್ನೂ ಕಳೆದುಕೊಂಡಿತು ಪಾಕ್. ಆಗ, ಬಂದ ದಾರ್ ಅವರೊಂದಿಗೆ 5ನೇ ವಿಕೆಟ್ಗೆ 80 ರನ್ಗಳ ಜೊತೆಯಾಟವಾಡಿ, ಪಾಕಿಸ್ತಾನದ ಇನಿಂಗ್ಸ್ಗೆ ಶಕ್ತಿ ತುಂಬುವಲ್ಲಿ ಯಶಸ್ವಿಯಾದರು.
ಅದರಲ್ಲೂ, ಭಾರತದ ಬೌಲರ್ಗಳಿಗೆ ಸೆಡ್ಡು ಹೊಡೆದ ದಾರ್, ಆಕ್ರಮಣಾಕರಿ ಆಟವಾಡಿ, 83 ಎಸೆತಗಳಲ್ಲಿ 7 ಬೌಂಡರಿ ಸೇರಿದಂತೆ 68 ರನ್ ಗಳಿಸಿ, ಇನಿಂಗ್ಸ್ನ ಕೊನೆಯವರೆಗೂ ಅಜೇಯರಾಗಿ ಉಳಿದರು. ಅತ್ತ, ಅಬಿದಿ ಅವರು 113 ಎಸೆತಗಳಲ್ಲಿ, 4 ಬೌಂಡರಿಗಳೊಂದಿಗೆ 58 ರನ್ ಗಳಿಸಿ ಔಟಾದರು. ಇವರಿಬ್ಬರ ಜೊತೆಯಾಟವನ್ನು ಮುರಿಯುವವರೆಗೂ ಭಾರತಕ್ಕೆ ಪಂದ್ಯ ಕ್ಲಿಷ್ಟಕರವಾಗಿತ್ತು. ಆದರೆ, ಈ ಜೋಡಿ ಮುರಿದ ಮೇಲೆ, ಪಾಕಿಸ್ತಾನದ ರನ್ ಗತಿ ಏರಲಿಲ್ಲ. ಅಂತಿಮವಾಗಿ, ಪಾಕಿಸ್ತಾನ 50 ಓವರ್ಗಳಲ್ಲಿ, 7 ವಿಕೆಟ್ಗೆ 192 ರನ್ ಗಳಿಸಿತು.
ಸ್ಕೋರ್ ಬೋರ್ಡ್
ಪಾಕಿಸ್ತಾನ: 192/7 (50 ಓವರ್)
ನಾಹಿಯಾ ಖಾನ್ ಸಿ ನಾಯಕ್ ಬಿ ಗೋಸ್ವಾಮಿ 2 (9), ಸಿದ್ರಾ ಅಮೀನ್ ರನೌಟ್ (ಮಲ್ಹೋತ್ರಾ) 12 (25), ನಯಿನ್ ಅಬಿದಿ ಸಿ ಕಾಮಿನಿ ಬಿ ಗೋಸ್ವಾಮಿ 58 (113), ಬಿಸ್ಮಾ ಮಾರೂಫ್ ಸಿ ಸುಲ್ತಾನಾ ಬಿ ನಿರಂಜನಾ 15 (39), ಆಸ್ಮಾವಿಯಾ ಇಕ್ಬಾಲ್ ಸಿ ನಾಯಕ್ ಬಿ ನಿರಂಜನಾ 0 (2), ನಿದಾ ದಾರ್ ಅಜೇಯ 68 (83), ಕ್ವನಿಟಾ ಜಲೀಲ್ ಸಿ ಮಲ್ಹೋತ್ರಾ ಬಿ ಬಿಷ್ಟ್ 18 (18), ಸನಾ ಮಿರ್ ಬೌಲ್ಡ್ ಬಿ ನಿರಂಜನಾ 10 (9), ಸುಮೈಯಾ ಸಿದ್ದಿಕಿ ಅಜೇಯ 1 (2)
ವಿಕೆಟ್ ಪತನ: 1-6, 2-28, 3-60, 4-60, 5-140, 6-170, 7-191.
ಬೌಲಿಂಗ್: ಗೋಸ್ವಾಮಿ 10-2-17-2, ಅಮಿತಾ ಶರ್ಮಾ 10-0-40-0, ನಿರಂಜನಾ 10-1-35-3, ಬಿಷ್ಟ್ 9-0-50-1, ಸುಲ್ತಾನಾ 8-0-33-0, ಮಲ್ಹೋತ್ರಾ 3-0-16-0.
ಭಾರತ: 195/4 (46 ಓವರ್)
ಪೂನಮ್ ರೌತ್ ಎಲ್ಬಿಡಬ್ಲ್ಯೂ ಬಿ ಕ್ವಾನಿತಾ ಜಲೀಲ್ 4 (8), ಕಾಮಿನಿ ಸಿ ಸನಾ ಮಿರ್ ಬಿ ಬಿಸ್ಮಾ ಮಾರೂಫ್ 26 (44), ಮಿಥಾಲಿ ರಾಜ್ ಅಜೇಯ 103 (141), ಹರ್ಮನ್ ಕೌರ್ ರನೌಟ್ (ನಾಹಿದಾ ಖಾನ್) 16 (30), ಸುಲಕ್ಷಣಾ ನಾಯಕ್ ಬೌಲ್ಡ್ ಬಿ ನಿದಾ ದಾರ್ 3 (5), ರೀಮಾ ಮಲ್ಹೋತ್ರಾ ಅಜೇಯ 25 (48)
ವಿಕೆಟ್ ಪತನ: 1-8, 2-51, 3-100, 4-108
ಬೌಲಿಂಗ್: ಕ್ವಾನಿಟಾ ಜಲೀಲ್ 6-2-19-1, ಸುಮೈಯಾ ಸಿದ್ದಿಕಿ 6-0-26-0, ಸನಾ ಮಿರ್ 10-1-32-0, ಬಿಸ್ಮಾ ಮಾರೂಫ್ 6-0-32-1, ಸಾದಿಯಾ ಯೂಸುಫ್ 9-0-35-0, ಆಸ್ಮಾವಿಯಾ ಇಕ್ಬಾಲ್ 1-0-14-0, ನಿದಾ ದಾರ್ 8-0-34-1.
ಪಂದ್ಯಶ್ರೇಷ್ಠ: ಮಿಥಾಲಿ ರಾಜ್ (ಭಾರತ)
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

