ಕ್ರೀಡೆ

ಎಚ್‌ಐಎಲ್: ಚಾರ್ಲ್ಸ್‌ವರ್ತ್, ಒಲ್ಟ್‌ಮನ್ಸ್ ಭಿನ್ನರಾಗ

Published On :

ಮುಂಬೈ: ಎಚ್‌ಐಎಲ್ ಪಂದ್ಯಾವಳಿ ಬಗ್ಗೆ ಇದುವರೆಗೂ ಬಹುತೇಕ ಮಂದಿ ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದ್ದು, ಎಚ್‌ಐಎಲ್‌ನಲ್ಲಿ ಭಾಗಿಯಾಗಿರುವ ಖ್ಯಾತ ತರಬೇತುದಾರರಾದ ರಿಕ್ ಚಾರ್ಲ್ಸ್‌ವರ್ತ್ ಹಾಗೂ ರೊಲೆಂಟ್ ಒಲ್ಟ್‌ಮನ್ಸ್ ಈ ಪಂದ್ಯಾವಳಿ ಬಗ್ಗೆ ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಾಲ್ಕು ಬಾರಿ ಒಲಿಂಪಿಯನ್ ಆಗಿರುವ ಆಸ್ಟ್ರೇಲಿಯಾದ ತಂಡದ ಮಾಜಿ ನಾಯಕ ಹಾಗೂ ಎಚ್‌ಐಎಲ್‌ನಲ್ಲಿ ಮುಂಬೈ ಮ್ಯಾಜಿಶಿಯನ್ಸ್ ತಂಡದ ಕೋಚ್ ಆಗಿರುವ ಚಾರ್ಲ್ಸ್‌ವರ್ತ್, ಎಚ್‌ಐಎಲ್‌ನಿಂದ ಭಾರತೀಯ ಹಾಕಿಗೆ ಅನುಕೂಲವಾಗಲಿದೆ ಎಂಬ ವಾದವನ್ನು ತಳ್ಳಿಹಾಕಿದ್ದಾರೆ.
ಎಚ್‌ಐಎಲ್‌ನಿಂದ ಭಾರತೀಯ ಹಾಕಿಗೆ ಅನುಕೂಲವಾಗಲಿದೆ ಎಂದು ಹೇಳುವುದು ಕಷ್ಟ. ಯುವ ಆಟಗಾರರು ಈ ಪಂದ್ಯಾವಳಿಯಿಂದ ಉತ್ತಮ ಅನುಭವ ಪಡೆಯಬಹುದು ಆದರೆ ಇದು ಅಂತಾರಾಷ್ಟ್ರೀಯ ಪಂದ್ಯಗಳಲ್ಲ ಎಂದು ಚಾರ್ಲ್ಸ್‌ವರ್ತ್ ಅಭಿಪ್ರಾಯಪಟ್ಟಿದ್ದಾರೆ. ಆದರೆ ಇನ್ನೊಂದೆಡೆ ಉತ್ತರ ಪ್ರದೇಶ್ ವಿಜರ್ಡ್ ತಂಡದ ಕೋಚ್ ಆಗಿರುವ ರೊಲೆಂಟ್ ಒಲ್ಟ್‌ಮನ್ಸ್ ಎಚ್‌ಐಎಲ್‌ಗೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ಪಂದ್ಯಾವಳಿ ಪ್ರಾರಂಭವಾಗಲು ಮುಖ್ಯ ಕಾರಣ ಎಂದರೆ ಭಾರತೀಯ ಹಾಕಿಯನ್ನು ಅಭಿವೃದ್ಧಿ ಪಡಿಸುವುದಾಗಿದೆ. ಈ ಪಂದ್ಯಾವಳಿಯಲ್ಲಿ ಯುವ ಪ್ರತಿಭಾವಂತ ಆಟಗಾರರು ಉತ್ತಮ ಅನುಭವ ಪಡೆಯುತ್ತಿರುವುದು ಬಹು ಮುಖ್ಯವಾಗಿದೆ. ಈ ಅನುಭವ ಯುವ ಆಟಗಾರರು ಭವಿಷ್ಯದಲ್ಲಿ ಉತ್ತಮ ಪ್ರದರ್ಶನ ನೀಡಲು ಸಹಾಯವಾಗುತ್ತದೆ ಎಂದು ಒಲ್ಟ್‌ಮನ್ಸ್ ತಿಳಿಸಿದರು.
ಭಾರತದಲ್ಲಿನ ಪ್ರತಿಯೊಬ್ಬರು ಈ ಅದ್ಭುತ ಪಂದ್ಯಾವಳಿಯ ಬಗ್ಗೆ ಹೆಮ್ಮೆ ಪಡಬೇಕು. ಈ ಪಂದ್ಯಗಳೆಲ್ಲಾ ಅಂತಾರಾಷ್ಟ್ರೀಯ ಮಟ್ಟದಲ್ಲಿದ್ದು, ಪ್ರತಿಯೊಬ್ಬರಿಗೂ ಸಹಾಯವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.