ಬಲಿಷ್ಠ ಪ್ಯಾಲೆಸ್ತೀನ್ ಮಣಿಸುವುದೇ ಭಾರತ?
ಕೊಚ್ಚಿ: ಮಹತ್ವದ ಎಎಫ್ಸಿ ಚಾಲೆಂಜ್ ಕಪ್ ಅರ್ಹತಾ ಪಂದ್ಯಾವಳಿಗೆ ಒಂದು ತಿಂಗಳ ಕಾಲ ಸಹ ಬಾಕಿ ಉಳಿದಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು ಭಾರತ ಫುಟ್ಬಾಲ್ ತಂಡ ಪ್ಯಾಲೆಸ್ತೀನ್ ವಿರುದ್ಧ ಬುಧವಾರ ಕೊಚ್ಚಿಯಲ್ಲಿ ನಡೆಯಲಿರುವ ಸೌಹಾರ್ದ ಪಂದ್ಯದಲ್ಲಿ ಸಮರ್ಥ ಪ್ರದರ್ಶನ ನೀಡಲು ಸಿದ್ಧವಾಗಿದೆ.
ತರಬೇತುದಾರ ವಿಮ್ ಕೋವರ್ಮನ್ ಅವರು ತಂಡದಲ್ಲಿ ಕೆಲ ಹೊಸ ಮುಖಗಳನ್ನು ಪರಿಚಯಿಸಿದ್ದಾರೆ. ಹೀಗಾಗಿ ಮಾರ್ಚ್ 2ರಿಂದ 6ರವರೆಗೆ ಮ್ಯಾನ್ಮಾರ್ ರಾಜಧಾನಿ ಯಾಗೋನಾದಲ್ಲಿ ನಡೆಯಲಿರುವ ಎಎಫ್ಸಿ ಚಾಲೆಂಜ್ ಕಪ್ ಅರ್ಹತಾ ಪಂದ್ಯಾವಳಿಗೆ ಉತ್ತಮ ತಂಡ ರಚಿಸುವ ಭರವಸೆಯನ್ನು ಅವರು ಹೊಂದಿದ್ದಾರೆ.
ಗುರ್ಜಿಂದರ್ ಕುಮಾರ್, ರಾಜು ಗಾಯಕ್ವಾಡ್, ಲಾಲ್ಕಮಲ್ ಭೋಮಿಕ್, ಸುಶೀಲ್ ಕುಮಾರ್ ಅವರಿಗೆ ಮತ್ತೆ ಅವಕಾಶ ನೀಡಿರುವ ಕೋವರ್ಮನ್ ಸಿ.ಕೆ ವಿನೀತ್ ಮತ್ತು ಅರಾತ್ ಇಜುಮಿ ಅವರಿಗೆ ಮೊದಲ ಬಾರಿಗೆ ರಾಷ್ಟ್ರೀಯ ತಂಡದಲ್ಲಿ ಅವಕಾಶ ನೀಡಿದ್ದಾರೆ.
ಫಿಫಾ ರ್ಯಾಂಕಿಂಗ್ನಲ್ಲಿ ಪ್ಯಾಲೆಸ್ತೀನ್ 152ನೇ ಸ್ಥಾನದಲ್ಲಿದ್ದರೆ, ಭಾರತ 166ನೇ ಸ್ಥಾನದಲ್ಲಿದೆ. ಅಲ್ಲದೆ ಪ್ಯಾಲೆಸ್ತೀನ್ನ 9 ಆಟಗಾರರು ಕಳೆದ ಡಿಸೆಂಬರ್ನಲ್ಲಿ ನಡೆದ ಪೂರ್ವ ಏಷ್ಯಾ ಕಪ್ನಲ್ಲಿ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದ ಆಟಗಾರರಾಗಿದ್ದಾರೆ.
ಭಾರತ ತಂಡ ಬಹುದಿನಗಳಿಂದ ಅಂತಾರಾಷ್ಟ್ರೀಯ ಸೌಹಾರ್ದ ಪಂದ್ಯದಲ್ಲಿ ಜಯ ಸಾಧಿಸಿಲ್ಲ. ಹೀಗಾಗಿ ಕೋವರ್ಮನ್ ತಂಡಕ್ಕೆ ಇದು ಮಹತ್ವದ ಪಂದ್ಯವಾಗಿದೆ. ಕಳೆದ ವರ್ಷ ಅಕ್ಟೋಬರ್ನಲ್ಲಿ ಸಿಂಗಾಪುರ ವಿರುದ್ಧ ನಡೆದ ಸೌಹಾರ್ದ ಪಂದ್ಯದಲ್ಲಿ ಭಾರತ 0-2 ಗೋಲುಗಳ ಅಂತರದಿಂದ ಸೋಲನುಭವಿಸಿತ್ತು.
ಭಾರತದ ಈ ಪಂದ್ಯದಲ್ಲಿ ಜಯ ಸಾಧಿಸಿದಲ್ಲಿ ಫಿಫಾ ರ್ಯಾಂಕಿಂಗ್ನಲ್ಲಿ ಅಂಕಗಳನ್ನು ಪಡೆದುಕೊಳ್ಳಲಿದೆ.
'ಪ್ಯಾಲೆಸ್ತೀನ್ ತಂಡ ಬಲಿಷ್ಠ ಎನಿಸುತ್ತಿದೆ. ಪೂರ್ವ ಏಷ್ಯಾ ಕಪ್ನಲ್ಲಿ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದ್ದ 9 ಆಟಗಾರರು ಎದುರಾಳಿ ತಂಡದಲ್ಲಿದ್ದು, ಅವರ ವಿಡಿಯೋವನ್ನು ನಾವು ವೀಕ್ಷಿಸಿದ್ದೇವೆ. ಪಂದ್ಯದಲ್ಲಿ ನಮ್ಮ ಆಟಗಾರರು ಉತ್ತಮ ಪ್ರದರ್ಶನ ತೋರಲಿದ್ದಾರೆ' ಎಂದು ಪಂದ್ಯಕ್ಕೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ತರಬೇತುದಾರ ಕೋವರ್ಮನ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

