ನಾಕೌಟ್ ಹಂತಕ್ಕೆ ದಕ್ಷಿಣ ಆಫ್ರಿಕಾ ದಾಂಗುಡಿ
ಕಟಕ್: ಮಾರಿಜನ್ನೆ ಕಪ್ಪ ಅವರ ಆಲ್ರೌಂಡ್ ಪ್ರದರ್ಶನದೊಂದಿಗೆ ದಕ್ಷಿಣ ಆಫ್ರಿಕಾ ವನಿತೆಯರ ತಂಡ ಪಾಕಿಸ್ತಾನದ ವಿರುದ್ಧ 126ರನ್‌ಗಳ ಅಂತರದಿಂದ ಜಯ ಸಾಧಿಸುವ ಮೂಲಕ, ಮಹಿಳಾ ವಿಶ್ವಕಪ್‌ನ ಸೂಪರ್ ಸಿಕ್ಸ್ ಹಂತಕ್ಕೆ ಅರ್ಹತೆ ಪಡೆಯಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ದಕ್ಷಿಣ ಆಫ್ರಿಕಾ ಪರ 150 ಎಸೆತಗಳಲ್ಲಿ ಅಜೇಯ 102 ರನ್ ಗಳಿಸಿದ ಮಾರಿಜನ್ನೆ ನಿಗದಿತ ಓವರ್‌ಗಳಲ್ಲಿ ತಂಡ 207 ರನ್ ಗಳಿಸಲು ನೆರವಾದರು. ನಂತರ, ಬ್ಯಾಟ್ ಮಾಡಿದ ಪಾಕಿಸ್ತಾನ ಕೇವಲ 29.4 ಓವರ್‌ಗಳಲ್ಲಿ 81ರನ್ ಗಳಿಸಿ ಆಲೌಟ್ ಆಯಿತು. ಮೂರು ಲೀಗ್ ಪಂದ್ಯಗಳ ಪೈಕಿ ಒಂದರಲ್ಲಿ ಗೆದ್ದು 2 ಪಾಯಿಂಟ್ ಗಳಿಸಿದ ದಕ್ಷಿಣ ಆಫ್ರಿಕಾ, ನಾಕೌಟ್ ಹಂತಕ್ಕೆ ಪ್ರವೇಶ ಪಡೆಯಿತು.
ಸಂಕ್ಷಿಪ್ತ ಸ್ಕೋರ್
ದಕ್ಷಿಣ ಆಫ್ರಿಕಾ: 207/5
(50 ಓವರ್)
ಮಾರಿಜನ್ನೆ ಕಪ್ಪ್ ಅಜೇಯ 102
ನೀಕೇರಕ್ ಅಜೇಯ 55
ಬೌಲಿಂಗ್: ಖುನಿತಾ ಜಲೀಲ್ 30/2, ಆಸ್ಮಾವೀಯಾ ಇಕ್ಬಾಲ್ 31/2
ಪಾಕಿಸ್ತಾನ 81/10 (29.4 ಓವರ್)
ಸಿದ್ರಾ ಅಮೀನ್ 15, ಆಸ್ಮಾವೀಯಾ 14
ಬೌಲಿಂಗ್: ಕಪ್ಪ 18/3, ಲೆಟ್‌ಸೋಲೊ 17/2
ಪಂದ್ಯಶ್ರೇಷ್ಠ: ಕಪ್ಪ್ (ದಕ್ಷಿಣ ಆಫ್ರಿಕಾ)
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

