ಕ್ರೀಡೆ

ಗುಣಮುಖರಾಗಿ ಮತ್ತೆ ಕಣಕ್ಕೆ ಕ್ಲೇ ಕೋರ್ಟ್ ಕಿಂಗ್ ರಫೆಲ್ ನಡಾಲ್

Published On :

ಪ್ಯಾರೀಸ್: ಕಳೆದ ಏಳು ತಿಂಗಳಿನಿಂದ ಗಾಯದ ಸಮಸ್ಯೆಯಿಂದ ಬಳಲಿದ್ದ ರಫೆಲ್ ನಡಾಲ್, ಇದೀಗ ಸಂಪೂರ್ಣವಾಗಿ ಗುಣಮುಖರಾಗಿ ಈ ವಾರ ಮತ್ತೆ ಕಣಕ್ಕಿಳಿಯಲಿದ್ದಾರೆ. 11 ಬಾರಿ ಗ್ರಾನ್ ಸ್ಲ್ಯಾಮ್ ಚಾಂಪಿಯನ್ ಆಗಿರುವ ನಡಾಲ್ ಕಳೆದ ವರ್ಷ ಜೂನ್‌ನಲ್ಲಿ ತಮ್ಮ ಕಡೆಯ ಪಂದ್ಯವನ್ನಾಡಿದ್ದರು. ಏಳು ತಿಂಗಳುಗಳ ಕಾಲ ಗಾಯದ ಸಮಸ್ಯೆಯಿಂದ ಬಳಲಿದ್ದ ನಡಾಲ್ ಅನೇಕ ಪ್ರಮುಖ ಟೆನಿಸ್ ಚಾಂಪಿಯನ್‌ಷಿಪ್‌ನಿಂದ ಹೊರಗುಳಿದಿದ್ದರು. ಈಗ ನಡಾಲ್ ಮತ್ತೇ ಕಣಕ್ಕಿಳಿಯಲು ತಯಾರಿ ನಡೆಸುತ್ತಿದ್ದು, ಇದೇ ವಾರ ಚಿಲೆಯಲ್ಲಿ ಆರಂಭವಾಗಲಿರುವ ಟೆನಿಸ್ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸುತ್ತಿದ್ದಾರೆ. ಈ ಮೂಲಕ ನಡಾಲ್ ಮತ್ತೇ ತಮ್ಮ ಗೆಲುವಿನ ಲಯಕ್ಕೆ ಮರಳುವರೇ ಎಂಬುದು ಅಭಿಮಾನಿಗಳಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ನನಗೆ ಇನ್ನೂ ಸ್ವಲ್ಪ ನೋವು ಕಾಡುತ್ತಿದ್ದು, ಆಗಾಗ ವಿಶ್ರಾಂತಿ ಪಡೆದು ಅಭ್ಯಾಸ ನಡೆಸುತ್ತಿದ್ದೇನೆ. ಹೀಗಾಗಿ ನಾನು ಆದಷ್ಟು ಬೇಗ ಕಣಕ್ಕಿಳಿದು ನನ್ನ ಲಯ ಕಂಡುಕೊಳ್ಳಲು ಪ್ರಯತ್ನಿಸುತ್ತೇನೆ. ಈ ಚಾಂಪಿಯನ್‌ಷಿಪ್‌ನಲ್ಲಿ ನನ್ನ ಪ್ರಯತ್ನವನ್ನೇಲ್ಲ ಹಾಕಿ ಆಡುತ್ತೇನೆ. ಈ ವೇಳೆ  ಮೊಣಕಾಲು ನನಗೆ ಬೆಂಬಲ ನೀಡುವ ವಿಶ್ವಾಸವಿದೆ ಎಂದು ನಡಾಲ್ ಅಭಿಪ್ರಾಯಪಟ್ಟರು.
ಈ ಪಂದ್ಯಾವಳಿ ಜೇಡಿಮಣ್ಣಿನ ಅಂಗಣದಲ್ಲಿ ನಡೆಯುತ್ತಿದ್ದು, ನನಗೆ ಸ್ವಲ್ಪ ಅನುಕೂಲವಾಗಲಿದೆ. ನಾನು ಈ ಪಂದ್ಯಾವಳಿಯಲ್ಲಿ ಧೈರ್ಯದಿಂದ ತನ್ನ ಆಟವಾಡಲು ನಾನು ಚಿಂತಿಸುತ್ತಿದ್ದು, ಬಹಳ ದಿನದಿಂದ ಹೊರಗುಳಿದಿದ್ದ ಕಾರಣ ಮತ್ತೇ ಆಟದ ಮೇಲೆ ಹಿಡಿತ ಸಾಧಿಸಲು ಈ ಪಂದ್ಯಾವಳಿ ಸಹಕಾರಿಯಾಗಲಿದೆ ಎಂದು ಅವರು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.