ಕಾಂಗರೂ ಪಡೆಗೆ ಜಯ ತಂದ ಲ್ಯಾನಿಂಗ್
ಕಟಕ್: ಮೆಗ್ ಲ್ಯಾನಿಂಗ್ ಅವರ ಆಕರ್ಷಕ ಶತಕದಿಂದಾಗಿ ಆಸ್ಟ್ರೇಲಿಯಾ ಶನಿವಾರ ನಡೆದ ನ್ಯೂಜಿಲೆಂಡ್ ವಿರುದ್ಧದ ಮಹಿಳಾ ವಿಶ್ವಕಪ್ ಲೀಗ್ ಪಂದ್ಯದಲ್ಲಿ 7 ವಿಕೆಟ್ಗಳ ಜಯ ಸಾಧಿಸಿತು.
ನ್ಯೂಜಿಲೆಂಡ್ ನೀಡಿದ್ದ 228 ರನ್ಗಳ ಸವಾಲಿಗೆ ಉತ್ತರ ನೀಡಲು, ಕ್ರೀಸ್ಗೆ ಇಳಿದಿದ್ದ ಆಸ್ಟ್ರೇಲಿಯಾ ತಂಡ 3 ವಿಕೆಟ್ ನಷ್ಟಕ್ಕೆ 228 ರನ್ ಗಳಿಸಿ ವಿಜಯದ ನಗೆ ಬೀರಿತು.
ಆಸ್ಟ್ರೇಲಿಯಾದ ಇನಿಂಗ್ಸ್ನಲ್ಲಿ ಮಿಂಚಿದ್ದು 21ರ ವಯಸ್ಸಿನ ಲ್ಯಾನಿಂಗ್. 104 ಎಸೆತಗಳಲ್ಲಿ 17 ಬೌಂಡರಿ ಹಾಗೂ 1 ಸಿಕ್ಸರ್ ಸೇರಿದಂತೆ 112 ರನ್ ಗಳಿಸಿದ ಅವರು, ತಂಡಕ್ಕೆ ಜಯ ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಲ್ಯಾನಿಂಗ್ ಅವರಿಗೆ ಉತ್ತಮ ಸಾಥ್ ನೀಡಿದ ಕ್ಯಾಮರೂನ್ 87 ಎಸೆತಗಳಲ್ಲಿ 82 ರನ್ ಗಳಿಸಿದರು.
ಕೇವಲ 19 ರನ್ಗಳಿಗೆ ಆರಂಭಿಕ ಆಟಗಾರ್ತಿ ಹೇನ್ಸ್ ಅವರನ್ನು ಕಳೆದುಕೊಂಡಿದ್ದ ಆಸೀಸ್ಗೆ, ಲ್ಯಾನಿಂಗ್-ಕ್ಯಾಮರೂನ್ ಇಬ್ಬರೂ 2ನೇ ವಿಕೆಟ್ಗೆ 182 ರನ್ ಸೇರಿಸಿದ್ದು ವರದಾನವಾಯಿತು.
ಇನಿಂಗ್ಸ್ನ 33ನೇ ಓವರ್ ಹಾಗೂ 37ನೇ ಓವರ್ನಲ್ಲಿ ಕ್ರಮವಾಗಿ ಕ್ಯಾಮರೂನ್ ಹಾಗೂ ಲ್ಯಾನಿಂಗ್ ಔಟಾದರೂ, ಅವರು ಹಾಕಿಕೊಟ್ಟ ಭದ್ರ ಅಡಿಪಾಯದ ಮೇಲೆ ಮುಂದಿನ ಬ್ಯಾಟರ್ಗಳಾದ ಬ್ಲಾಕ್ವೆಲ್, ಸ್ತಾಲೇಕರ್ ಇಬ್ಬರೂ ಅನಾಯಾಸವಾಗಿ ಗೆಲುವಿನ ಮಹಲು ಕಟ್ಟಿದರು. 14 ರನ್ ಗಳಿಸಿದ ಬ್ಲಾಕ್ವೆಲ್, 8 ರನ್ ಗಳಿಸಿದ ಸ್ತಾಲೇಕರ್ ಇಬ್ಬರೂ ಅಜೇಯರಾಗಿ ಉಳಿದರು.
ಆಸರೆಯಾದ ಬೇಟ್ಸ್: ಇದಕ್ಕೂ ಮೊದಲು, ಬ್ಯಾಟಿಂಗ್ ಮಾಡಿದ್ದ ನ್ಯೂಜಿಲೆಂಡ್ ಕೇವಲ 11 ರನ್ಗಳಿಗೆ ಆರಂಭಿಕ ಆಟಗಾರ್ತಿ ದೂಲನ್ ಅವರನ್ನು ಕಳೆದುಕೊಂಡಿತು. ಮತ್ತೊಬ್ಬ ಆರಂಭಿಕ ಆಟಗಾರ್ತಿ ಹಾಗೂ ನಾಯಕಿ ಬೇಟ್ಸ್ ಅವರು ಕ್ರೀಸ್ಗೆ ಗಟ್ಟಿಯಾಗಿ ನಿಂತರಾದರೂ, ನಿಗದಿತ ಅಂತರದಲ್ಲಿ ನ್ಯೂಜಿಲೆಂಡ್, ಸ್ಯಾಟರ್ವೇಯ್ಟ್, ಡಿವೈನ್, ಮ್ಯಾಕ್ ಗ್ಲಾಷನ್ ಅವರುಗಳನ್ನು ಕಳೆದುಕೊಂಡಿತು. ಕ್ರೀಸ್ನ ಒಂದು ತುದಿಯಲ್ಲಿ ವಿಕೆಟ್ ಉರುಳುತ್ತಿದ್ದರೂ, ಗಟ್ಟಿಯಾಗಿ ನಿಂತು ಬ್ಯಾಟ್ ಮಾಡಿದ ಬೇಟ್ಸ್, ಪರ್ಕಿನ್ಸ್ ಜೊತೆ ಸೇರಿ 5ನೇ ವಿಕೆಟ್ಗೆ 103 ರನ್ಗಳ ಜೊತೆಯಾಟವಾಡಿದರು. ಇನಿಂಗ್ಸ್ನ 38ನೇ ಓವರ್ನಲ್ಲಿ ಪರ್ಕಿನ್ಸ್ ಔಟಾದರೂ, ನಂತರ ಬ್ರೌನಿ ಜೊತೆಗೂಡಿದ ಬೇಟ್ಸ್ 69 ರನ್ ಸೇರಿಸಿದರು. ಆದರೆ, 49ನೇ ಓವರ್ನಲ್ಲಿ ಬೇಟ್ಸ್ ಔಟಾಗುವ ಮೂಲಕ ಈ ಜೊತೆಯಾಟ ಕೊನೆಗೊಂಡಿತು.
ಸಂಕ್ಷಿಪ್ತ ಸ್ಕೋರ್
ನ್ಯೂಜಿಲೆಂಡ್: 227/6 (50 ಓವರ್)
ಸುಝಿ ಬೇಟ್ಸ್ 102 (134)
ಪರ್ಕಿನ್ಸ್ 41 (78)
ಬೌಲಿಂಗ್: ಶುಟ್ 40/3,
ಹಂಟರ್ 17/1
ಆಸ್ಟ್ರೇಲಿಯಾ: 228/3 (38.2 ಓವರ್)
ಲ್ಯಾನಿಂಗ್ 112 (104), ಕ್ಯಾಮೆರೂನ್ 82 (87)
ಬೌಲಿಂಗ್: ತಹುಹು 38/1, ರುಕ್ 46/1
ಪಂದ್ಯಶ್ರೇಷ್ಠ: ಲ್ಯಾನಿಂಗ್ (ಆಸ್ಟ್ರೇಲಿಯಾ)
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

