ಟೀಂ ಇಂಡಿಯಾಗೆ ತರಬೇತಿ ನೀಡುವ ತವಕದಲ್ಲಿ ಅಜರುದ್ದೀನ್
ಲಂಡನ್: ಮ್ಯಾಚ್ ಫಿಕ್ಸಿಂಗ್‌ನಲ್ಲಿ ಭಾಗಿಯಾದ ಹಿನ್ನೆಲೆಯಲ್ಲಿ ಕ್ರಿಕೆಟ್‌ನಿಂದ ದೂರ ಉದಿರುವ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಅಜರುದ್ದೀನ್ ಅವರಿಗೆ ಈಗ ತಂಡದ ತರಬೇತಿ ನೀಡಬೇಕು ಎಂಬ ಬಯಕೆಯಾಗಿದೆಯಂತೆ. ಒಂದು ವೇಳೆ ಬಿಸಿಸಿಐ ನನಗೆ ಅವಕಾಶ ನೀಡಲು ಮುಂದೆ ಬಂದರೆ ಭವಿಷ್ಯದಲ್ಲಿ ಭಾರತ ತಂಡದ ತರಬೇತುದಾರನಾಗಬೇಕೆಂಬ ಬಯಕೆಯನ್ನು ನಾನು ಹೊಂದಿದ್ದೇನೆ ಎಂದಿದ್ದಾರೆ ಅಜರ್. 'ನಾನು ಎಷ್ಟು ವರ್ಷ ಕ್ರಿಕೆಟ್ ಆಡಿದ್ದೇನೆ ಎಂಬುದು ಮುಖ್ಯವಲ್ಲ. ಕ್ರಿಕೆಟ್‌ನಲ್ಲಿ ನಾನು ಹೆಚ್ಚಿನದನ್ನು ತಿಳಿದುಕೊಂಡಿದ್ದೇನೆ. ಅಲ್ಲದೆ ನನ್ನಲ್ಲಿರುವ ಕೌಶಲ್ಯಗಳನ್ನು ಯುವ ಆಟಗಾರರಿಗೆ ಧಾರೆ ಎರೆಯಲು ಸಿದ್ಧವಾಗಿದ್ದೇನೆ. ನನ್ನನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳುವದು ಬಿಸಿಸಿಐಗೆ ಬಿಟ್ಟ ವಿಷಯ. ಆದರೆ, ಭಾರತ ತಂಡದೊಂದಿಗೆ ಕಾರ್ಯನಿರ್ವಹಿಸಲು ನಾನು ಮಾತ್ರ ಸಿದ್ಧವಾಗಿದ್ದೇನೆ' ಎಂದಿದ್ದಾರೆ ಅಜರ್. 'ಭಾರತ ತಂಡಕ್ಕೆ ಕೋಚ್ ತೀರ್ಮಾನಿಸುವುದು ಬಿಸಿಸಿಐಗೆ ಬಿಟ್ಟ ವಿಷಯವಾಗಿದೆ. ಆದರೆ, ನನಗೆ ಅವಕಾಶ ದೊರಕಿದರೆ, ಅದರಿಂದ ಭಾರತ ಕ್ರಿಕೆಟ್ ತಂಡಕ್ಕೆ ಹೆಚ್ಚಿನ ಲಾಭವಾಗಲಿದೆ' ಎಂದು ಭಾರತ ಮತ್ತು ಪಾಕಿಸ್ತಾನ ವಿದ್ಯಾರ್ಥಿಗಳ ನಡುವಿನ ಸೌಹಾರ್ದ ಪಂದ್ಯಕ್ಕೆ ಲಾರ್ಡ್ಸ್ ಸ್ಟೇಡಿಯಂನಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಅಜರ್ ಹೇಳಿದರು. ಮ್ಯಾಚ್ ಫಿಕ್ಸ್‌ನಲ್ಲಿ ಭಾಗಿಯಾದ ಹಿನ್ನೆಲೆಯಲ್ಲಿ ಅಜರ್ ಮೇಲೆ ಬಿಸಿಸಿಐ ವಿಧಿಸಿದ್ದ ಜೀವಮಾನ ನಿಷೇಧವನ್ನು ಕಳೆದ ವರ್ಷ ನವೆಂಬರ್‌ನಲ್ಲಿ ಆಂಧ್ರಪ್ರದೇಶ ಹೈಕೋರ್ಟ್ ತೆಗೆದು ಹಾಕಿದೆ. ಭವಿಷ್ಯದ ಭಾರತ ತಂಡವನ್ನು ತಯಾರಿ ಮಾಡಲು ಹೊಸಬರಿಗೆ ಅವಕಾಶ ನೀಡಲು ಇದು ಸೂಕ್ತ ಸಮಯವಾಗಿದೆ ಎಂದು 49 ವರ್ಷದ ಮೊರದಾಬಾದ್‌ನ ಕಾಂಗ್ರೆಸ್ ಸಂಸದ ಅಜರ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

