ಕ್ರೀಡೆ

ಸ್ಕೇಟಿಂಗ್ ಹರ್ಯಾಣಕ್ಕೆ ಪ್ರಶಸ್ತಿ

Published On :

ಬೆಳಗಾವಿ: ನಗರದ ಶಿವಗಂಗಾ ರೋಲರ್ ಸ್ಕೇಟಿಂಗ್ ಕ್ಲಬ್ ಅಂಗಣದಲ್ಲಿ ನಡೆದ 50ನೇ ಸ್ವರ್ಣ ಜಂುಂತಿ ರಾಷ್ಟ್ರೀಂು ರೋಲರ್ ಸ್ಕೇಟಿಂಗ್ ಹಾಕಿ ಚಾಂಪಿಂುನ್‌ಶಿಪ್‌ನ್ ಭಾನುವಾರದ ಮಹಿಳೆಯರ ಹಿರಿಯರ ವಿಭಾಗದ ಫೈನಲ್ ಪಂದ್ಯದಲ್ಲಿ ಹರಿಯಾಣ ತಂಡವು ಆಂಧ್ರಪ್ರದೇಶ ತಂಡವನ್ನು 9-1 ಗೋಲುಗಳಿಂದ ಸೋಲಿಸಿ ಪ್ರಶಸ್ತಿ ಗೆದ್ದುಕೊಂಡಿತು.
ಪಂದ್ಯದ ಮೊದಲ ಸುತ್ತಿನಲ್ಲಿ ಹರಿಯಾಣ ತಂಡವು 3 ಗೋಲು ಭಾರಿಸಿ ಮುನ್ನಡೆ ಸಾಧಿಸಿದರೆ, ಆಂಧ್ರಪ್ರದೇಶ ತಂಡವು ಕೇವಲ 1 ಗೋಲು ಕಲೆ ಹಾಕಿತು. ಆದರೆ, ಎರಡನೇ ಸುತ್ತಿನಲ್ಲಿ ಹರಿಯಾಣ ತಂಡದ ಆಟಗಾರರು ಆಕ್ರಮಣಕಾರಿ ಆಟ ಪ್ರದರ್ಶಿಸಿ 6 ಗೋಲು ಬಾರಿಸಿದರೆ ಒತ್ತಡದಲ್ಲೇ ಮೈದಾನಕ್ಕಿಳಿದ ಆಂಧ್ರ ತಂಡದ ಆಟಗಾರರು ಒಂದೇ ಒಂದು ಗೋಲು ಭಾರಿಸುವಲ್ಲೂ ಸಫಲವಾಗಲಿಲ್ಲ.
ಹರಿಯಾಣ ತಂಡದ ಪರವಾಗಿ ಯಶ್‌ದೀಪ್- 5, ಸಂದೀಪ- 3, ಹರಪ್ರೀತ್-1 ಗೋಲು ಬಾರಿಸುವ ಮೂಲಕ ಆಕ್ರಮಣಕಾರಿ ಆಟ ಪ್ರದರ್ಶಿಸಿದರು. ಆಂಧ್ರಪ್ರದೇಶ ತಂಡದ ಪರವಾಗಿ ಟಿ.ಇ. ಜೋಯಿಸ್-1 ಗೋಲು ಬಾರಿಸಿದರು.
ಸಿನಿಯರ್ ಲಿಗ್ ಫಲಿತಾಂಶ: ಈ ಮೊದಲು ನಡೆದ ಲಿಗ್ ಪಂದ್ಯದ ಪುರುಷರ ಹಿರಿಯ ವಿಭಾಗದಲ್ಲಿ ಚಂಡಿಗಡ ತಂಡವು ಕರ್ನಾಟಕ ತಂಡವನ್ನು 14-0 ಗೋಲುಗಳಿಂದ ಸೋಲಿಸಿತು. ಹರಿಯಾಣ ತಂಡವು ಉತ್ತರ ಪ್ರದೇಶ ತಂಡದ ವಿರುದ್ಧ 7-0 ಗೆದ್ದುಕೊಂಡಿತು. ಜಾರ್ಖಂಡ್ ತಂಡವು ತಮಿಳನಾಡು ತಂಡವನ್ನು 13-1 ಗೋಲುಗಳಿಂದ ಸೋಲಿಸಿತು. ಪಂಜಾಬ್ ತಂಡವು ಮಹಾರಾಷ್ಟ್ರ ತಂಡದ ವಿರುದ್ಧ 4-3 ಗೋಲುಗಳಿಂದ ಗೆಲವಿನ ನಗೆ ಬೀರಿತು.ಜೂನಿಯರ್ ಲೀಗ್ ಫಲಿತಾಂಶ: ತಮಿಳುನಾಡು ತಂಡವು ಕರ್ನಾಟಕ ತಂಡವನ್ನು 9-4 ಗೋಲುಗಳಿಂದ ಸೋಲಿಸಿತು. ದೆಹಲಿ ಮತ್ತು ಉತ್ತರ ಪ್ರದೇಶ ತಂಡದ ಪಂದ್ಯ ಡ್ರಾದಲ್ಲಿ ಅಂತ್ಯವಾಯಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.