ಕ್ರೀಡೆ

ಗೌರವ ಸಂಪಾದಿಸಲು ಕಠಿಣ ಶ್ರಮ ಅಗತ್ಯ: ಸಚಿನ್

ಗೌರವ ಸಂಪಾದಿಸಲು ಕಠಿಣ ಶ್ರಮ ಅಗತ್ಯ: ಸಚಿನ್
Published On :

ನವದೆಹಲಿ: ಸುದೀರ್ಘ 23 ವರ್ಷಗಳ ಕಾಲ ಕ್ರಿಕೆಟ್‌ನಲ್ಲಿ ಸೇವೆ ಸಲ್ಲಿಸಿರುವ ಬ್ಯಾಟಿಂಗ್ ಮಾಂತ್ರಿಕ ಸಚಿನ್ ತೆಂಡುಲ್ಕರ್, ಯುವ ಪೀಳಿಗೆಗೆ ತಮ್ಮ ಸಲಹೆ ನೀಡಿದ್ದಾರೆ.
 ಪ್ರತಿಯೊಬ್ಬ ವ್ಯಕ್ತಿ ಇತರರಿಂದ ಗೌರವ ಪಡೆಯಲು ಕಠಿಣ ಪರಿಶ್ರಮ ಅಗತ್ಯವಿದೆ ಎಂದು ಸಚಿನ್ ಅಭಿಪ್ರಾಯಪಟ್ಟಿದ್ದಾರೆ.
ಸುದ್ದಿ ವಾಹಿನಿಯೊಂದರ ಸಪೋರ್ಟ್ ಮೈ ಸ್ಕೂಲ್ ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಚಿನ್, ಜೀವನದಲ್ಲಿನ ಸ್ಫರ್ಧೆಯಿಂದ ನಿಮಗೆ ತೊಂದರೆಯಾಗ ಬಾರದು.
ನೀವು ನಿಮ್ಮ ಬದ್ಧತೆ, ಪರಿಶ್ರಮ ಹಾಗೂ ನಿಮ್ಮ ಕೊಡುಗೆ ಬಗ್ಗೆ ಯೋಚಿಸಬೇಕು. ಸ್ಫರ್ಧೆ ಸಾಮಾನ್ಯ ನೀವು ಬೇರೆಯವರು ಏನು ಮಾಡುತ್ತಿದ್ದಾರೆ ಎಂಬುದರ ಬಗ್ಗೆ ಚಿಂತನೆ ಮಾಡಬಾರದು.
ನೀವು ಉತ್ತಮ ಕೆಲಸ ಮಾಡಿದರೆ ಈಡಿ ತಂಡವೇ ಅದನ್ನು ಹಿಂಬಾಲಿಸುವುದು ಎಂದು ಸಚಿನ್ ತಿಳಿಸಿದ್ದಾರೆ.
ನೀವು ಕಠಿಣ ಪರಿಶ್ರಮ ಹಾಕಿದರೆ ಅದೃಷ್ಟ ನಿಮ್ಮ ಕಡೆ ಬರುವುದು.
ಬದುಕಿನಲ್ಲಿ ಹಲವಾರು ಸವಾಲುಗಳು ಎದುರಾಗುತ್ತವೆ, ಈ ಎಲ್ಲಾ ಸವಾಲುಗಳನ್ನು ಸರ್ಮರ್ಥವಾಗಿ ಮೆಟ್ಟಿ ನಿಲ್ಲಲು ಕಠಿಣ ಪರಿಶ್ರಮದ ಅಗತ್ಯವಿದೆ ಎಂದು ಸಚಿನ್ ಕಿವಿಮಾತು ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.