ಕ್ರೀಡೆ

ಶಿಷ್ಯೆಯನ್ನೇ ರೇಪ್ ಮಾಡಿದ ಒಲಿಂಪಿಯನ್

Published On :

ಟೋಕಿಯೋ: ಒಲಿಂಪಿಯನ್ ಜುಡೋ ಪಟುಗಳು ತಮ್ಮ ಕೋಚ್‌ನಿಂದಲೇ ಥಳಿತಕ್ಕೊಳಾಗಿರುವ ಘಟನೆ ಇತ್ತೀಚೆಗಷ್ಟೇ ಜಪಾನ್‌ನಿಂದ ವರದಿಯಾಗಿತ್ತು. ಅದರ ಹಿಂದೆಯೇ ಈಗ ಮತ್ತೊಂದು ಆಘಾತಕಾರಿ ಸುದ್ದಿ ಬಹಿರಂಗವಾಗಿದೆ.
ಜಪಾನ್‌ನ ರಾಷ್ಟ್ರೀ ಜುಡೋ ಕೋಚ್ ಮತ್ತು ಒಲಿಂಪಿಕ್ಸ್‌ನಲ್ಲಿ ಎರಡು ಚಿನ್ನದ ಪದಕ ಗೆದ್ದ ಮಾಜಿ ಜುಡೋ ಪಟು, ತನ್ನ ಬಳಿ ತರಬೇತಿ ಪಡೆಯುತ್ತಿದ್ದ ಶಿಷ್ಯ ಮೇಲೆ ಅತ್ಯಾಚಾರ ಮಾಡುವ ಮೂಲಕ ಈಗ ಜೈಲು ಸೇರಿದ್ದಾರೆ. ಕಾಲೇಜ್ ಜುಡೋ ಕ್ಲಬ್ಬೊಂದಕ್ಕೆ ತರಬೇತಿ ನೀಡುತ್ತಿದ್ದ ಮಾಸಾತೋ ಉಚಿಶಿಬಾ ಆ ಕ್ಲಬ್‌ನ ವಿದ್ಯಾರ್ಥಿನಿಯೊಬ್ಬಳ ಮೇಲೆ ಅತ್ಯಾಚಾರವೆಸಗಿದ ಹಿನ್ನೆಲೆಯಲ್ಲಿ, ಆತನಿಗೆ 5 ವರ್ಷ ಕಾರ್ಯಾಗ್ರಹ ಶಿಕ್ಷೆ ವಿಧಿಸಲಾಗಿದೆ ಎಂದು ಜಪಾನ್ ಕೋರ್ಟ್ ಅಧಿಕಾರಿಗಳು ತಿಳಿಸಿದ್ದಾರೆ.
2004ರ ಅಥೇನ್ಸ್ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ನಂತರ 2008ರಲ್ಲಿ ಬೀಜಿಂಗ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಅದೇ ವಿಭಾಗದಲ್ಲಿ ಚಿನ್ನ ಗೆದ್ದು ಸಾಧನೆ ಮಾಡಿದ್ದ ಉಚಿಶಿಬಾ, ಆಗ ಜಪಾನ್‌ನ ರಾಷ್ಟ್ರೀಯ ಹೀರೋ ಆಗಿ ಮಿಂಚಿದ್ದರು. ಕ್ಯಾಶು ನರ್ಸಿಂಗ್ ಮತ್ತು ಸಮಾಜ ಕಲ್ಯಾಣ ವಿಶ್ವವಿದ್ಯಾಲಯದ ಜುಡೋ ಕ್ಲಬ್‌ನಿಂದ ಯುವತಿಯೊಬ್ಬಳು ಟೋಕಿಯೊ ಪ್ರವಾಸ ಮಾಡಿದಾಗ, 2011 ಸೆಪ್ಟೆಂಬರ್‌ನಲ್ಲೇ ಘಟನೆ ನಡೆದಿದೆ ಎಂದು ಅತ್ಯಾಚಾರಕ್ಕೊಳಗಾದ ಜುಡೋಪಟು ಪರ ವಕೀಲರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.