ವಿಶೇಷ

Golden Blood: ಈ ರಕ್ತ ಇರೋದು ಇಡೀ ಜಗತ್ತಿನಲ್ಲಿ ಕೇವಲ 45 ಜನರ ಹತ್ರ ಮಾತ್ರ! ಏನಿದರ ಸ್ಪೆಷಾಲಿಟಿ?

Rh-null ಎಂದು ಕರೆಯಲಾಗುವ ಈ ರಕ್ತ, ಜಗತ್ತಿನ 800 ಕೋಟಿಗೂ ಅಧಿಕ ಜನಸಂಖ್ಯೆಯಲ್ಲಿ ಇರುವುದು ಕೇವಲ 45 ಜನರಲ್ಲಿ ಮಾತ್ರ! ಹಾಗಾಗಿಯೇ, ಇದು ಚಿನ್ನಕ್ಕಿಂತಲೂ ಮೌಲ್ಯಯುತ ಎಂದು ಪರಿಗಣಿಸಲಾಗಿದೆ. ಆ ಕುರಿತ ವರದಿ ಇಲ್ಲಿದೆ:

Golden Blood: ಈ ರಕ್ತ ಇರೋದು ಇಡೀ ಜಗತ್ತಿನಲ್ಲಿ ಕೇವಲ 45 ಜನರ ಹತ್ರ ಮಾತ್ರ! ಏನಿದರ ಸ್ಪೆಷಾಲಿಟಿ?
ಗೋಲ್ಡನ್ ಬ್ಲಡ್ — Online Desk
Published On :

Golden Blood: ಸಾಮಾನ್ಯವಾಗಿ ನಮಗೆ ತಿಳಿದಿರುವಂತೆ ಮನುಷ್ಯರಲ್ಲಿ ಎ, ಬಿ, ಎಬಿ ಮತ್ತು ಓ ಎಂಬ ರಕ್ತದ ಗುಂಪುಗಳಿವೆ (Blood Groups). ಆದರೆ ಇವೆಲ್ಲವುಗಳಿಗಿಂತ ಭಿನ್ನವಾದ, ವಿಜ್ಞಾನ ಲೋಕವನ್ನೇ ಬೆರಗುಗೊಳಿಸುವ ಒಂದು ರಕ್ತದ ಗುಂಪಿದೆ. ಇದನ್ನು ವೈದ್ಯಕೀಯ ಜಗತ್ತಿನಲ್ಲಿ ಗೋಲ್ಡನ್ ಬ್ಲಡ್ (Golden Blood) ಅರ್ಥಾತ್ Rh-null ಎಂದು ಕರೆಯಲಾಗುತ್ತದೆ. ಯಾಕಂದ್ರೆ, ಇಡೀ ಜಗತ್ತಿನ 800 ಕೋಟಿಗೂ ಅಧಿಕ ಜನಸಂಖ್ಯೆಯಲ್ಲಿ ಈ ರಕ್ತ ಇರುವುದು ಕೇವಲ 45 ಜನರಲ್ಲಿ ಮಾತ್ರ! ಹಾಗಾಗಿಯೇ, ಇದು ಚಿನ್ನಕ್ಕಿಂತಲೂ ಮೌಲ್ಯಯುತ ಎಂದು ಪರಿಗಣಿಸಲಾಗಿದೆ. ಆ ಕುರಿತ ವರದಿ ಇಲ್ಲಿದೆ:

ಸಾಮಾನ್ಯವಾಗಿ, ಯಾವುದೇ ರಕ್ತದ ಗುಂಪನ್ನು ಅದರಲ್ಲಿರುವ 'ಆಂಟಿಜೆನ್'ಗಳ ಆಧಾರದ ಮೇಲೆ ಗುರುತಿಸಲಾಗುತ್ತದೆ. ಅಂದ್ರೆ, ಸಾಮಾನ್ಯ ರಕ್ತದ ಗುಂಪುಗಳಲ್ಲಿ ಆರ್‌ಎಚ್ (Rh) ಸಿಸ್ಟಮ್‌ನಲ್ಲಿ ಸುಮಾರು 61 ಸಂಭವನೀಯ ಆಂಟಿಜೆನ್‌ಗಳಿರುತ್ತವೆ. ಆದರೆ Rh-null ರಕ್ತದ ಗುಂಪಿನಲ್ಲಿ ಈ 61 ಆಂಟಿಜೆನ್‌ಗಳಲ್ಲಿ ಒಂದೂ ಇರುವುದಿಲ್ಲ. ಈ ವಿಶೇಷತೆಯೇ ಇದನ್ನು ವಿಶ್ವದ ಅತ್ಯಂತ ಅಪರೂಪದ ರಕ್ತವನ್ನಾಗಿ ಮಾಡಿದೆ.

ಮುಂದುವರೆದು, ಇದನ್ನು ಗೋಲ್ಡನ್ ಬ್ಲಡ್ ಎಂದು ಕರೆಯುವುದು ಅದರ ಬಣ್ಣದಿಂದಲ್ಲ, ಬದಲಾಗಿ ಅದರ ಅಪಾರ ಮೌಲ್ಯದಿಂದ. ಈ ರಕ್ತದ ಗುಂಪು ಹೊಂದಿರುವವರು ವಿಶ್ವದ ಯಾವುದೇ ಅಪರೂಪದ ರಕ್ತದ ಗುಂಪಿನ ವ್ಯಕ್ತಿಗೂ ರಕ್ತದಾನ ಮಾಡಬಹುದು. ಇದು ಅತ್ಯುತ್ತಮ 'ಯುನಿವರ್ಸಲ್ ಡೋನರ್' ಆಗಿ ಕಾರ್ಯನಿರ್ವಹಿಸುತ್ತದೆ. ತುರ್ತು ಸಂದರ್ಭಗಳಲ್ಲಿ ಬೇರೆ ಯಾವುದೇ ಅಪರೂಪದ ರಕ್ತ ಲಭ್ಯವಿಲ್ಲದಿದ್ದಾಗ ಈ ಗೋಲ್ಡನ್ ಬ್ಲಡ್ ಜೀವ ಉಳಿಸುವ ಸಂಜೀವಿನಿಯಾಗುತ್ತದೆ.

ಇನ್ನು, ಈ ರಕ್ತದ ಗುಂಪನ್ನು ಹೊಂದಿರುವುದು ಎಷ್ಟು ವಿಶೇಷವೋ ಅಷ್ಟೇ ಅಪಾಯಕಾರಿ ಕೂಡ ಹೌದು. Rh-null ರಕ್ತ ಹೊಂದಿರುವ ವ್ಯಕ್ತಿಗೆ ರಕ್ತದ ಅವಶ್ಯಕತೆ ಬಿದ್ದಾಗ, ಅವರು ಕೇವಲ Rh-null ರಕ್ತವನ್ನೇ ಪಡೆಯಬೇಕು. ಬೇರೆ ಯಾವುದೇ ಗುಂಪಿನ ರಕ್ತವು ಇವರ ದೇಹಕ್ಕೆ ಹೊಂದಿಕೆಯಾಗುವುದಿಲ್ಲ. ಅದ್ರಲ್ಲೂ, ಇಡೀ ವಿಶ್ವದಲ್ಲಿ ಇಂತಹ ರಕ್ತ ನೀಡಬಲ್ಲ ಸಕ್ರಿಯ ದಾನಿಗಳು ಕೇವಲ 9 ರಿಂದ 10 ಮಂದಿ ಮಾತ್ರ ಇರುವುದರಿಂದ, ಇವರ ಜೀವ ಉಳಿಸುವುದು ವೈದ್ಯರಿಗೆ ದೊಡ್ಡ ಸವಾಲಾಗುತ್ತದೆ.

ಇದಲ್ಲದೆ, ಆಂಟಿಜೆನ್‌ಗಳ ಕೊರತೆಯಿಂದಾಗಿ ಇವರ ಕೆಂಪು ರಕ್ತಕಣಗಳು ಬೇಗನೆ ನಾಶವಾಗುವ ಸಾಧ್ಯತೆ ಇರುತ್ತದೆ, ಇದರಿಂದ ಇವರು ಲಘು ರಕ್ತಹೀನತೆಯಿಂದ ಬಳಲುತ್ತಿರುತ್ತಾರೆ. ಹೀಗಾಗಿ, ಇವರು ನೀಡುವ ರಕ್ತವನ್ನು ಇತರರಿಗಿಂತ ಹೆಚ್ಚಾಗಿ, ಅವರದ್ದೇ ಭವಿಷ್ಯದ ತುರ್ತು ಅಗತ್ಯಗಳಿಗಾಗಿ ಸಂಗ್ರಹಿಸಿಡಲು ವೈದ್ಯರು ಸಲಹೆ ನೀಡುತ್ತಾರೆ. ಒಟ್ಟಾರೆಯಾಗಿ, ಈ 'ಗೋಲ್ಡನ್ ಬ್ಲಡ್' ಮಾನವ ವಿಕಾಸದ ಒಂದು ವಿಶಿಷ್ಟ ವಿಸ್ಮಯವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.