ಜಗತ್ತಿನ ವಿಚಿತ್ರ ಮೊಟ್ಟೆ: ಇದನ್ನ ತಿಂದ್ರೆ ಮನುಷ್ಯನ ಆಯಸ್ಸು 7 ವರ್ಷ ಹೆಚ್ಚಾಗುತ್ತೆ! ಯಾವುದದು?
ಆ ಮೊಟ್ಟೆ ತಿಂದ್ರೆ ಅಷ್ಟು ಪ್ರೊಟೀನ್ ಸಿಗುತ್ತೆ, ಈ ಮೊಟ್ಟೆ ತಿಂದ್ರೆ ಇಷ್ಟು ಶಕ್ತಿ ಬರುತ್ತೆ ಎಂದು ಕೇಳಿರುತ್ತೇವೆ! ಆದ್ರೆ ಯಾವತ್ತಾದರೂ ಮೊಟ್ಟೆ ತಿಂದ್ರೆ ಆಯಸ್ಸು ಹೆಚ್ಚಾಗುತ್ತದೆ ಎಂದು ಕೇಳಿದಿರಾ? ಇಲ್ಲಿದೆ ನೋಡಿ ನಿಮ್ಮ ಆಯಸ್ಸು 7 ವರ್ಷ ಹೆಚ್ಚು ಮಾಡುವ ಮೊಟ್ಟೆ ಕುರಿತ ಮಾಹಿತಿ:

Viral News: ಮೊಟ್ಟೆ (Egg) ತಿಂದ್ರೆ ಪ್ರೊಟೀನ್ ಸಿಗುತ್ತೆ, ಶಕ್ತಿ ಬರುತ್ತೆ ಎಂದು ಕೇಳಿರುತ್ತೇವೆ! ಆದ್ರೆ ಯಾವತ್ತಾದರೂ ಮೊಟ್ಟೆ ತಿಂದ್ರೆ ಆಯಸ್ಸು 7 ವರ್ಷ ಜಾಸ್ತಿ ಆಗುತ್ತೆ ಅಂತ ಕೇಳಿದಿರಾ?
ಹೌದು, ಭಾರತೀಯ ಟೂರಿಸ್ಟ್‌ಗಳ ನೆಚ್ಚಿನ ಪ್ರವಾಸಿತಾಣ ಜಪಾನ್‌ಗೆ (Japan) ಹೋದ್ರೆ, ಟೂರಿಸ್ಟ್‌ಗಳು ತಪ್ಪದೇ ತಿನ್ನೋ ಒಂದು ವಿಚಿತ್ರ ಮೊಟ್ಟೆ ಇದೆ. ಅದುವೇ, ಕುರೋ-ತಮಾಗೊ (Kuro-Tamago)! ಅದರಂತೆ, ಈ ಒಂದು ಮೊಟ್ಟೆ ತಿಂದ್ರೆ ನಿಮ್ಮ ಆಯಸ್ಸು 7 ವರ್ಷ ಹೆಚ್ಚಾಗುತ್ತೆ ಎಂದು ವಾಟ್ಸಾಪ್, ಫೇಸ್‌ಬುಕ್‌ನಲ್ಲಿ ವೈರಲ್ ಆಗ್ತಿದೆ. ಹಾಗಾಗಿ, ಅದರ ಸತ್ಯಾಸತ್ಯತೆಯ ಕುರಿತ ವರದಿ ಇಲ್ಲದೆ.
ಈ ಮೊಟ್ಟೆ ಎಲ್ಲಿ ಸಿಗುತ್ತೆ?
ಈ ವಿಶೇಷ ಮೊಟ್ಟೆ ಜಪಾನ್‌ನ ಒವಾಕುಡಾನಿ ಪ್ರದೇಶದಲ್ಲಿ ಕಾಣಸಿಗುತ್ತದೆ. ಸಲ್ಫರ್ ಅಂಶ (ಗಂಧಕದ ಅನಿಲ) ಮತ್ತು ಬಿಸಿನೀರಿನ ಬುಗ್ಗೆಗಳಿಗೆ ಹೆಸರುವಾಸಿಯಾಗಿರುವ ಈ ಪ್ರದೇಶದಲ್ಲಿ ಮೊಟ್ಟೆಗಳನ್ನು ಸುಮಾರು 1 ಗಂಟೆಗಳ ಕಾಲ ಆವಿಯಲ್ಲಿ ಬೇಯಿಸಲಾಗುತ್ತದೆ. ಅದರಂತೆ, ಈ ವೇಳೆ ಆವಿಯಲ್ಲಿರುವ ಸಲ್ಫರ್ ಮತ್ತು ಇತರ ಖನಿಜಗಳು ಮೊಟ್ಟೆಗಳಿಗೆ ಕಪ್ಪು ಬಣ್ಣವನ್ನು ನೀಡುತ್ತವೆ, ಅದಕ್ಕಾಗಿಯೇ ಅವುಗಳನ್ನು ಕಪ್ಪು ಮೊಟ್ಟೆಗಳು ಎಂದೂ ಸಹ ಕರೆಯುತ್ತಾರೆ.
ಇದರ ರುಚಿ ಹೇಗಿರುತ್ತದೆ?
ಒವಾಕುಡಾನಿದ ಜ್ವಾಲಾಮುಖಿ ಪ್ರದೇಶದಲ್ಲಿ ಗಂಧಕದ ಅನಿಲಗಳು ನಿರಂತರವಾಗಿ ಹೊರಬರುವುದರಿಂದ ಇಡೀ ಪ್ರದೇಶದಲ್ಲಿ ಕೊಳೆತ ಮೊಟ್ಟೆಯಂತಹ ಕೆಟ್ಟ ವಾಸನೆ ಇರುತ್ತದೆ. ಆದರೆ, ಮೊಟ್ಟೆಯ ಮೇಲಿನ ಕಪ್ಪು ಸಿಪ್ಪೆಯನ್ನು ತೆಗೆದಾಗ ಒಳಗೆ ಸಾಮಾನ್ಯ ಬಿಳಿ ಬಣ್ಣದ ಬೇಯಿಸಿದ ಮೊಟ್ಟೆಯೇ ಇರುತ್ತದೆ. ಇದರ ರುಚಿ ಕೂಡ ಸಾಮಾನ್ಯ ಬೇಯಿಸಿದ ಮೊಟ್ಟೆಯಂತೆಯೇ ಇರುತ್ತದೆ, ಕೇವಲ ಲಘು ಗಂಧಕದ ಸುವಾಸನೆ ಬರುತ್ತದೆ ಅಷ್ಟೇ.
ಒಂದು ಮೊಟ್ಟೆಯ ಬೆಲೆ ಎಷ್ಟು?
ಈ ಒಂದು ಕಪ್ಪು ಮೊಟ್ಟೆಯ ಬೆಲೆ ಸುಮಾರು 500-600 ಜಪಾನೀಸ್ ಯೆನ್. ಅಂದರೆ ಭಾರತೀಯ ರೂಪಾಯಿ ಮೌಲ್ಯದಲ್ಲಿ ಸುಮಾರು 300 ರಿಂದ 400 ಎನ್ನಲಾಗಿದೆ.
ನಿಜವಾಗ್ಲೂ 7 ವರ್ಷ ಹೆಚ್ಚಾಗುತ್ತಾ ಆಯಸ್ಸು?
ಇಲ್ಲ, ಇದು ವೈಜ್ಞಾನಿಕವಾಗಿ ಸಾಬೀತಾಗಿಲ್ಲ. ಆದರೆ, ಸ್ಥಳೀಯ ನಂಬಿಕೆಯ ಪ್ರಕಾರ ಕುರೋ-ತಮಾಗೊ ಅನ್ನೋದು ಒಂದು ಯೂನಿಕ್ ಜಪಾನೀಸ್ ಅನುಭವ. ಜೊತೆಗೆ ಜಪಾನೀಸ್ ಸಂಸ್ಕೃತಿಯಲ್ಲಿ 7 ಅದೃಷ್ಟದ ಸಂಖ್ಯೆಯಾಗಿರುವುದರಿಂದ ಈ ಮೊಟ್ಟೆ ತಿಂದ್ರೆ 7 ವರ್ಷ ಹೆಚ್ಚಾಗುತ್ತೆ ಎಂಬ ನಂಬಿಕೆ ಪ್ರಸಿದ್ಧಿಯಾಗಿದೆ ಎನ್ನಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


