ನಿಮ್ಮ ಮಕ್ಕಳ ಹತ್ರ ಈ ಕಾರ್ಡ್ ಇದೆಯಾ? 5 ವರ್ಷದೊಳಗಿನ ಎಲ್ಲಾ ಮಗುವಿಗೂ ಬೇಕು ಈ ಬಾಲ್ ಆಧಾರ್!
Baal Aadhaar: ಐದು ವರ್ಷದೊಳಗಿನ ಎಲ್ಲಾ ಮಕ್ಕಳ ಶಾಲಾ ದಾಖಲಾತಿ ಮತ್ತು ಸರ್ಕಾರಿ ಸೌಲಭ್ಯಗಳಿಗಾಗಿ ಭಾರತ ಸರ್ಕಾರ ನೀಡುವ ವಿಶೇಷ ನೀಲಿ ಬಣ್ಣದ ಗುರುತಿನ ಚೀಟಿಯೇ 'ಬಾಲ್ ಆಧಾರ್'. ಅದನ್ನು ಪಡೆಯೋದು ಹೇಗೆ? ಎನ್ನುವುದರ ಕುರಿತು ವರದಿ ಇಲ್ಲಿದೆ.

Baal Aadhaar: ಇಂದಿನ ಡಿಜಿಟಲ್ ಯುಗದಲ್ಲಿ ಪ್ರತಿಯೊಬ್ಬ ಭಾರತೀಯ ನಾಗರಿಕನಿಗೂ ಆಧಾರ್ ಕಾರ್ಡ್ ಎಷ್ಟು ಮುಖ್ಯವೋ, ಐದು ವರ್ಷದೊಳಗಿನ ಮಕ್ಕಳಿಗೂ ಅಷ್ಟೇ ಮುಖ್ಯ. ಅದರಂತೆ, ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು (UIDAI) ಚಿಕ್ಕ ಮಕ್ಕಳಿಗಾಗಿ ವಿಶೇಷವಾಗಿ 'ಬಾಲ್ ಆಧಾರ್' (Baal Aadhaar) ಎಂಬ ನೀಲಿ ಬಣ್ಣದ ಆಧಾರ್ ಕಾರ್ಡ್ ಅನ್ನು ಪರಿಚಯಿಸಿದೆ. ಅದನ್ನು ಪಡೆಯೋದು ಹೇಗೆ? ಎನ್ನುವುದರ ಕುರಿತು ವರದಿ ಇಲ್ಲಿದೆ.
ಏನಿದು ಬಾಲ್ ಆಧಾರ್?
ಬಾಲ್ ಆಧಾರ್ ಎಂಬುದು 5 ವರ್ಷದೊಳಗಿನ ಮಕ್ಕಳಿಗಾಗಿ UIDAI ನೀಡುವ ಒಂದು ವಿಶೇಷ ನೀಲಿ ಬಣ್ಣದ ಆಧಾರ್ ಕಾರ್ಡ್ ಆಗಿದೆ. ಮಕ್ಕಳ ಶಾಲಾ ದಾಖಲಾತಿ, ಸರ್ಕಾರಿ ಯೋಜನೆಗಳು ಮತ್ತು ಪಾಸ್‌ಪೋರ್ಟ್ ಪಡೆಯಲು ಇದು ಅತ್ಯಗತ್ಯ ದಾಖಲೆಯಾಗಿದೆ. ಇನ್ನೂ ಇದರಲ್ಲಿ, ಮಕ್ಕಳ ಬೆರಳಚ್ಚು ಜೊತೆಗೆ ಕಣ್ಣಿನ ಸ್ಕ್ಯಾನ್ ಮಾಡೋಲ್ಲ.
ಹೇಗೆ ಅರ್ಜಿ ಸಲ್ಲಿಸುವುದು?
UIDAI ವೆಬ್‌ಸೈಟ್‌ನಲ್ಲಿ ಅಪಾಯಿಂಟ್‌ಮೆಂಟ್ ಬುಕ್ ಮಾಡಿ ಅಥವಾ ನೇರವಾಗಿ ಆಧಾರ್ ಸೇವಾ ಕೇಂದ್ರಕ್ಕೆ ಹೋಗಬೇಕು
ಮಗುವಿನ ಫೋಟೋ ಅಲ್ಲಿಯೇ ತೆಗೆಯುತ್ತಾರೆ
ಈ ವೇಳೆ ಮಗುವಿನ ಆಧಾರ್ ಅನ್ನು ಪೋಷಕರ ಆಧಾರ್ ನಂಬರ್ಗೆ ಲಿಂಕ್ ಮಾಡಲಾಗುತ್ತದೆ
ಇದರ ತರುವಾಯು ಒಂದು ID ಕೊಡುತ್ತಾರೆ. ಅದರಿಂದ ಆನ್‌ಲೈನ್‌ನಲ್ಲಿ ಸ್ಟೇಟಸ್ ಚೆಕ್ ಮಾಡಬಹುದು
ಅರ್ಜಿಗೆ ಬೇಕಾಗಿರುವ ದಾಖಲೆಗಳು:
ಮಗುವಿನ ಜನನ ಪ್ರಮಾಣಪತ್ರ: ಅಕ್ಟೋಬರ್ 1, 2023 ರ ನಂತರ ಜನಿಸಿದ ಮಕ್ಕಳಿಗೆ ಕಡ್ಡಾಯ
ಪೋಷಕರಲ್ಲಿ ಒಬ್ಬರ ಆಧಾರ್ ಕಾರ್ಡ್: ಗುರುತು ಮತ್ತು ಸಂಬಂಧ ದೃಢೀಕರಣಕ್ಕೆ
ಬಯೋಮೆಟ್ರಿಕ್ ನವೀಕರಣ ಯಾವಾಗ?
5 ವರ್ಷ ತುಂಬಿದಾಗ: 1ನೇ ಬಯೋಮೆಟ್ರಿಕ್ ಅಪ್ಡೇಟ್ - ಫಿಂಗರ್‌ಪ್ರಿಂಟ್, ಐರಿಸ್, ಹೊಸ ಫೋಟೋ
15 ವರ್ಷ ತುಂಬಿದಾಗ: 2ನೇ ಕಡ್ಡಾಯ ಬಯೋಮೆಟ್ರಿಕ್ ಅಪ್ಡೇಟ್
ಸಮಯಕ್ಕೆ ಅಪ್ಡೇಟ್ ಮಾಡದಿದ್ದರೆ ಆಧಾರ್ ಸೇವೆಗಳಲ್ಲಿ ತೊಂದರೆ ಆಗಬಹುದು
ಫೀಸ್ ಎಷ್ಟು ?
ಹೊಸ ಬಾಲ್ ಆಧಾರ್: ಸಂಪೂರ್ಣ ಉಚಿತ
5 ಮತ್ತು 15 ವರ್ಷದ ಬಯೋಮೆಟ್ರಿಕ್ ಅಪ್ಡೇಟ್: ಉಚಿತ
ಹೆಸರು/ವಿಳಾಸ ಬದಲಾವಣೆ: ಆನ್‌ಲೈನ್ ಉಚಿತ, UIDAI ಕೇಂದ್ರದಲ್ಲಿ ₹50 ರಿಂದ ₹75
PVC ಆಧಾರ್ ಕಾರ್ಡ್: ₹75 GST ಮತ್ತು ಸ್ಪೀಡ್ ಪೋಸ್ಟ್ ಸೇರಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




