ತರಕಾರಿಗಳಂತೆ ಕಂತೆ ಕಂತೆ ನೋಟು ಮಾರುವ ಜಗತ್ತಿನ ವಿಚಿತ್ರ ಮಾರುಕಟ್ಟೆ; ಆದರೂ ಆ ಹಣದ ಮೂಟೆಗಳನ್ನು ಯಾರು ಕದಿಯಲ್ಲ!
ಇಂದಿನ ದಿನಗಳಲ್ಲಿ ಪ್ರಪಂಚದ ಬಹುತೇಕ ದೇಶಗಳಲ್ಲಿ ಡಿಜಿಟಲ್ ಪಾವತಿಗಳು ಬಹಳ ವೇಗವಾಗಿ ಬೆಳೆಯುತ್ತಿವೆ. ಭಾರತದಲ್ಲಿ ಯುಪಿಐ ಬಂದ ನಂತರ ಹಣ ಬಳಕೆ ತುಂಬಾ ಕಡಿಮೆಯಾಗಿದೆ. ಆದರೆ ಜಗತ್ತಿನಲ್ಲಿ ಒಂದು ದೇಶವಿದೆ. ಅಲ್ಲಿ ಮಾರುಕಟ್ಟೆಗೆ ಹೋದರೆ ಹಣ್ಣು, ತರಕಾರಿಗಿಂತ ಹೆಚ್ಚಾಗಿ ನೋಟುಗಳ ಕಂತೆಗಳು ಕಾಣಸಿಗುತ್ತವೆ.


ಇಂದಿನ ದಿನಗಳಲ್ಲಿ ಪ್ರಪಂಚದ ಬಹುತೇಕ ದೇಶಗಳಲ್ಲಿ ಡಿಜಿಟಲ್ ಪಾವತಿಗಳು ಬಹಳ ವೇಗವಾಗಿ ಬೆಳೆಯುತ್ತಿವೆ. ಭಾರತದಲ್ಲಿ ಯುಪಿಐ ಬಂದ ನಂತರ ಹಣ ಬಳಕೆ ತುಂಬಾ ಕಡಿಮೆಯಾಗಿದೆ. ಆದರೆ ಜಗತ್ತಿನಲ್ಲಿ ಒಂದು ದೇಶವಿದೆ. ಅಲ್ಲಿ ಮಾರುಕಟ್ಟೆಗೆ ಹೋದರೆ ಹಣ್ಣು, ತರಕಾರಿಗಿಂತ ಹೆಚ್ಚಾಗಿ ನೋಟುಗಳ ಕಂತೆಗಳು ಕಾಣಸಿಗುತ್ತವೆ.

ಹೌದು, ಜಗತ್ತಿನಲ್ಲಿ ಪ್ರತಿಯೊಂದು ದೇಶಕ್ಕೂ ತನ್ನದೇ ಆದ ಆರ್ಥಿಕ ವ್ಯವಸ್ಥೆ ಇರುತ್ತದೆ. ಆದರೆ ಆಫ್ರಿಕಾ ಖಂಡದ ಸೋಮಾಲಿಲ್ಯಾಂಡ್ ಎಂಬ ದೇಶದಲ್ಲಿ ಅತ್ಯಂತ ವಿಚಿತ್ರವಾದ ಆರ್ಥಿಕ ಪರಿಸ್ಥಿತಿ ಇದೆ. ಅದರಂತೆ, ಇಡೀ ಪ್ರಪಂಚದಲ್ಲೇ ಬೀದಿ ಬದಿಯಲ್ಲಿ ತರಕಾರಿಗಳನ್ನು ರಾಶಿ ಹಾಕಿ ಮಾರಾಟ ಮಾಡುವಂತೆ, ಕಂತೆ ಕಂತೆ ನೋಟುಗಳನ್ನು ಒಂದು ವಸ್ತುವಿನಂತೆ ತೂಕ ಮಾಡಿ ಮಾರುವ ಏಕೈಕ ದೇಶ ಇದು. ಆ ಕುರಿತ ವರದಿ ಇಲ್ಲಿದೆ.

1 ಅಮೆರಿಕನ್ ಡಾಲರ್‌ಗೆ 9,000!
ಆಫ್ರಿಕಾ ಖಂಡದ ಉತ್ತರ ಭಾಗದ ಅಡೆನ್ ಕೊಲ್ಲಿಯ ಹತ್ತಿರ ಇರುವ ಸೊಮಾಲಿಲ್ಯಾಂಡ್ 1991 ರಲ್ಲಿ ಸೊಮಾಲಿಯಾದಿಂದ ಪ್ರತ್ಯೇಕವಾಗಿದೆ ಎಂದು ಘೋಷಿಸಿಕೊಂಡಿತು. ಆದರೆ ಇಂದಿಗೂ ವಿಶ್ವದ ಹೆಚ್ಚಿನ ದೇಶಗಳು ಇದನ್ನು ಪ್ರತ್ಯೇಕ ರಾಷ್ಟ್ರವಾಗಿ ಒಪ್ಪಿಕೊಂಡಿಲ್ಲ. ಆದರೂ ಇಲ್ಲಿ ಸುಮಾರು 40 ಲಕ್ಷ ಜನರು ತಮ್ಮದೇ ಆಡಳಿತದೊಂದಿಗೆ ಜೀವನ ನಡೆಸುತ್ತಿದ್ದಾರೆ. ಇನ್ನು, ಈ ದೇಶದಲ್ಲಿ ಶಿಲ್ಲಿಂಗ್ ಎಂಬ ಕರೆನ್ಸಿಯನ್ನು ಬಳಸಲಾಗುತ್ತದೆ.

ಮುಂದುವರೆದು, ಜಾಗತಿಕ ಮಾರುಕಟ್ಟೆಯಲ್ಲಿ ಶಿಲ್ಲಿಂಗ್ ಮೌಲ್ಯವು ತೀರಾ ಕುಸಿದು ಹೋಗಿದೆ. ಅಂದರೆ, ಕೇವಲ 1 ಅಮೆರಿಕನ್ ಡಾಲರ್ (ಅಂದಾಜು 95 ಭಾರತೀಯ ರೂಪಾಯಿ) ಕೊಟ್ಟರೆ, ಬರೋಬ್ಬರಿ 50 ಕೆ.ಜಿ ತೂಕದಷ್ಟು ನೋಟುಗಳ ಚೀಲವನ್ನೇ ಖರೀದಿಸಬಹುದು. ಅರ್ಥಾತ್, 1 ಡಾಲರ್‌ಗೆ ಸುಮಾರು 9,000 ಶಿಲ್ಲಿಂಗ್‌ಗಳು ದೊರೆಯುತ್ತವೆ. ಹಾಗಾಗಿ, ಇಲ್ಲಿನ ಜನರು ತರಕಾರಿ ಅಥವಾ ಸಣ್ಣಪುಟ್ಟ ದಿನಸಿ ವಸ್ತುಗಳನ್ನು ಖರೀದಿಸಲು ಕೂಡ ಜನರು ದೊಡ್ಡ ದೊಡ್ಡ ಚೀಲಗಳಲ್ಲಿ ನೋಟುಗಳ ಕಂತೆಗಳನ್ನು ಹೊತ್ತುಕೊಂಡು ಹೋಗಬೇಕಾದ ಅನಿವಾರ್ಯತೆ ಇದೆ.

ಮುಂದುವರೆದು, ಬೀದಿ ಬದಿಯ ವ್ಯಾಪಾರಿಗಳು ರಸ್ತೆಗಳ ಪಕ್ಕದಲ್ಲಿ ಹಣದ ದೊಡ್ಡ ದೊಡ್ಡ ರಾಶಿಗಳನ್ನು ಹಾಕಿ ಕುಳಿತಿರುತ್ತಾರೆ. ಯಾಕಂದ್ರೆ, ಇಲ್ಲಿ ನೋಟುಗಳನ್ನು ಒಂದೊಂದಾಗಿ ಎಣಿಸುವುದು ಅಸಾಧ್ಯದ ಮಾತು. ಹಾಗಾಗಿ ಇಲ್ಲಿ ಹಣವನ್ನು ತಕ್ಕಡಿಯಲ್ಲಿ ಹಾಕಿ ಕಿಲೋ ಲೆಕ್ಕದಲ್ಲಿ ತೂಕ ಮಾಡಲಾಗುತ್ತದೆ. ಇಷ್ಟೊಂದು ಹಣ ರಸ್ತೆಯಲ್ಲಿ ಓಪನ್ ಆಗಿ ಬಿದ್ದಿದ್ದರೂ ಇಲ್ಲಿ ಕಳ್ಳತನದ ಭಯವಿಲ್ಲದಿರುವುದು ಮತ್ತೊಂದು ಅಚ್ಚರಿಯ ಸಂಗತಿಯಾಗಿದೆ.

ಏತನ್ಮಧ್ಯೆ, ಇತ್ತೀಚಿನ ದಿನಗಳಲ್ಲಿ ಇಲ್ಲಿನ ಜನರು ಈ ಸಮಸ್ಯೆಯಿಂದ ಪಾರಾಗಲು ಮೊಬೈಲ್ ಮೂಲಕ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಹೆಚ್ಚಾಗಿ ಬಳಸುತ್ತಿದ್ದಾರೆ. ಆದರೂ ಇಂದಿಗೂ ಈ ತೆರೆದ ಹಣದ ಮಾರುಕಟ್ಟೆ ಜಗತ್ತಿನಾದ್ಯಂತ ಎಲ್ಲರ ಗಮನ ಸೆಳೆಯುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


