ಯಾವ ಜೀವವೂ ಪುಟ್ಟದಲ್ಲ: ಲಿಫ್ಟ್ ಸಂಧಿಯಲ್ಲಿ ಸಿಲುಕಿಕೊಂಡ ಹಕ್ಕಿ ಮರಿ; ಅಗ್ನಿಶಾಮಕ ದಳ ಕಾರ್ಯಾಚರಣೆ
ಕೇವಲ ಒಂದು ಹಕ್ಕಿ ಮರಿಯನ್ನು ರಕ್ಷಿಸಲು ಅಧಿಕಾರಿಗಳು, ಸಿಬ್ಬಂದಿ ವರ್ಗ ಬರುವುದೆಂಬ ಕಲ್ಪನೆ ಅಲ್ಲಿ ಯಾರಿಗೂ ಇರಲಿಲ್ಲ. ಆದರೆ ಅಂಥದ್ದೊಂದು ಘಟನೆ ಅಂದು ಸಂಭವಿಸಿತು.

ಕಾಸರಗೋಡು: ಯಾವುದೇ ಒಂದು ಜೀವ ಪುಟ್ಟದಲ್ಲ ಎನ್ನುವುದಕ್ಕೆ ನಿದರ್ಶನವೆಂಬಂತೆ ಕಾಸರಗೋಡಿನಲ್ಲಿ ನಡೆದ ಘಟನೆ ಸಾಕ್ಷಿಯಾಗಿದೆ. ಘಟನೆ ನಡೆದ ಸ್ಥಳ ಸೆಂಟ್ರಲ್ ಯೂನಿವರ್ಸಿಟಿ.
ಆ ಯೂನಿವರ್ಸಿಟಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಭೇಟಿ ನೀಡಲಿದ್ದರು. ಹೀಗಾಗಿ ಪೊಲೀಸರು ಕಟ್ಟಡವನ್ನು ಪಹರೆ ಕಾಯುತ್ತಿದ್ದರು. ಈ ಸಂದರ್ಭ ತಾಯಿ ಹಕ್ಕಿಯೊಂದು ಪೊಲೀಸ್ ಪೇದೆಯೊಬ್ಬರ ಸುತ್ತ ಹಾರಾಡುತ್ತಾ ಅವರ ಗಮನ ಸೆಳೆಯಲು ಯತ್ನಿಸುತ್ತಿತ್ತು. ಈ ವಿಚಾರವನ್ನು ಪೇದೆ ಉಪನ್ಯಾಸಕಿ ಆಶಾಲಕ್ಷ್ಮಿ ಅವರ ಗಮನಕ್ಕೆ ತಂದಿದ್ದರು.
ಆಶಾಲಕ್ಷ್ಮಿ ಅವರಿಗೆ ಯೂನಿವರ್ಸಿಟಿ ಕಟ್ಟಡದಲ್ಲಿ ಗೂಡು ಮಾಡಿಕೊಂಡಿದ್ದ ಹಕ್ಕಿಗಳ ಪರಿಚಯವಿತ್ತು. ಈ ಹಿಂದೆ ಹಲವು ಬಾರಿ ಆ ಹಕ್ಕಿಗಳನ್ನು ಗಮನಿಸಿ ಅವುಗಳ ಆಟ ಕಂಡು ಹರ್ಷಿಸಿದ್ದರು ಕೂಡಾ.
ಹಕ್ಕಿಯ ಚೀರಾಟ ಕಂಡು ಆಶಾಲಕ್ಷ್ಮಿ ಪರಿಶೀಲಿಸಿದಾಗ ಆ ಹಕ್ಕಿ ಮರಿ ಲಿಫ್ಟ್ ನಲ್ಲಿ ಸಿಲುಕಿಕೊಂಡಿರುವುದು ತಿಳಿದುಬಂದಿತ್ತು. ಒಡನೆಯೇ ಅವರು ರಕ್ಷಣಾ ಅಧಿಕಾರಿಗಳಿಗೆ ಕರೆ ಮಾಡಲು ಮುಂದಾದರು. ಆದರೆ ಕೇವಲ ಹಕ್ಕಿಯನ್ನು ರಕ್ಷಿಸಲು ಅವರು ಬರುವರೇ ಎನ್ನುವ ಆತಂಕ ಅವರಿಗಿತ್ತು.
ಅವರ ಅಚ್ಚರಿಗೆ ಅಗ್ನಿ ಶಾಮಕ ದಳ ಸಿಬ್ಬಂದಿ ಮತ್ತು ರಕ್ಷಣಾ ಕಾರ್ಯಾಚರಣೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದರು. ಕೆಲ ಗಂಟೆಗಳ ಪರಿಶ್ರಮದ ನಂತರ ಅವರು ಹಕ್ಕಿ ಮರಿಯನ್ನು ರಕ್ಷಿಸುವಲ್ಲಿ ಸಫಲರಾದರು.
Related Article
ಶಾರ್ಕ್ ಪ್ರತಿಕಾಯಗಳಲ್ಲಿನ ಪ್ರೋಟೀನ್ ನಲ್ಲಿ ಕೊರೊನಾಗೆ ತಡೆಯೊಡ್ಡುವ ಸಾಮರ್ಥ್ಯ!
ಹೂಸನ್ನೂ ಮಾರಾಟ ಮಾಡಿ ವಾರಕ್ಕೆ ಸುಮಾರು 38 ಲಕ್ಷ ರೂ. ಗಳಿಸುತ್ತಿರುವ ಟಿವಿ ಸೆಲೆಬ್ರಿಟಿ!
ಜನರ ಸೇವೆಯೇ ಈಶ ಸೇವೆ: ರೋಗಿಗಳಲ್ಲಿ ದೇವರನ್ನು ಕಂಡವರು: ದಿ ಲಾಸ್ಟ್ ಡಾಕ್ಟರ್
ತಡ ರಾತ್ರಿ ಪೊಲೀಸರಿಂದಲೇ ಮಹಿಳೆಯರಿಗೆ ಮನೆ ತನಕ ಡ್ರಾಪ್: ಆಂಧ್ರ ಪೊಲೀಸರ ನೂತನ ಯೋಜನೆಗೆ ಶ್ಲಾಘನೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


