ಮೈಸೂರು: ಪೆಟ್ರೋಲ್ ಬಂಕ್ ನಿಂದ ಕೋವಿಡ್ ವಾರಿಯರ್ ಗಳಿಗೆ 'ದುಬಾರಿ' ಉಡುಗೊರೆ!
ಇಂಧನ ಬೆಲೆ ಗಗನಕ್ಕೇರಿರುವುದರಿಂದ ಎಲ್ಲರ ಕೈ ಸುಡುತ್ತಿದೆ. ಇಂತಹ ಸಂದರ್ಭದಲ್ಲಿ ಮೈಸೂರು ಮೂಲದ ಪೆಟ್ರೋಲ್ ಬಂಕ್ ವೊಂದು ಕೋವಿಡ್ ವಾರಿಯರ್ ಗಳಿಗೆ ದುಬಾರಿ ಗಿಫ್ಟ್ ನೀಡಲು ಮುಂದಾಗಿದೆ.

ಮೈಸೂರು: ಇಂಧನ ಬೆಲೆ ಗಗನಕ್ಕೇರಿರುವುದರಿಂದ ಎಲ್ಲರ ಕೈ ಸುಡುತ್ತಿದೆ. ಇಂತಹ ಸಂದರ್ಭದಲ್ಲಿ ಮೈಸೂರು ಮೂಲದ ಪೆಟ್ರೋಲ್ ಬಂಕ್ ವೊಂದು ಕೋವಿಡ್ ವಾರಿಯರ್ ಗಳಿಗೆ ದುಬಾರಿ ಗಿಫ್ಟ್ ನೀಡಲು ಮುಂದಾಗಿದೆ.
ಬೋಗಾದಿ ವೃತ್ತದಲ್ಲಿರುವ ಎನ್ ಸುಂದರಮ್ ಮತ್ತು ಸನ್ಸ್ ಪೆಟ್ರೋಲ್ ಬಂಕ್ ಸುಮಾರು 50 ಫ್ರಂಟ್ ಲೈನ್ ವರ್ಕರ್ಸ್ ಗೆ 5 ಲೀಟರ್ ಪೆಟ್ರೋಲ್ ಉಚಿತವಾಗಿ ನೀಡಿದೆ.
ವಿವಿಧ ಪ್ರದೇಶಗಳಲ್ಲಿರುವ ಕೋವಿಡ್ ರೋಗಿಗಳನ್ನು ಭೇಟಿ ಮಾಡುವ ಸಲುವಾಗಿ ವಾರಿಯರ್ಸ್ ಗಳು ತಮ್ಮದೇ ಹಣ ಖರ್ಚು ಮಾಡಿಕೊಂಡು ಹೋಗುತ್ತಾರೆ, ಹೀಗಾಗಿ ಪೆಟ್ರೋಲ್ ಬಂಕ್ ಮಾಲೀಕ ಕುಮಾರ್ ಕೆಎಸ್ ತಮ್ಮ ಬಂಕ್ ನಿಂದ ಪ್ರತಿ ಕೋವಿಡ್ ವಾರಿಯರ್ಸ್ ಗೆ ಐದು ಲೀಟರ್ ಪೆಟ್ರೋಲ್ ನೀಡುತ್ತಿದ್ದಾರೆ. ಸುಮಾರು 50 ಕ್ಕೂ ಹೆಚ್ಚು ಮಂದಿ ಇದರ ಪ್ರಯೋಜನ ಪಡೆದಿದ್ದಾರೆ.
ಉದ್ಯಮಿ ಕುಮಾರ್ ಹಲವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು, ಸಾಂಕ್ರಾಮಿಕ ಕಾಲದಲ್ಲಿ ಆಹಾರ ವಿತರಣೆ ಸೇರಿದಂತೆ ಹಲವು ಜನಪರ ಸೇವೆ ಮಾಡುತ್ತಿದ್ದಾರೆ, ಕುಮಾರ್ ಅವರು ಸುಮಾರು 20 ಸಾವಿರ ರು. ಮೌಲ್ಯದ ಪೆಟ್ರೋಲ್ ಕೂಪನ್ ಗಳನ್ನು ಕೋವಿಡ್ ಸ್ವಯಂ ಸೇವಕರಿಗೆ ನೀಡಿದ್ದಾರೆ, ಯಾವುದೇ ಲಾಭವಿಲ್ಲದೇ ನಿಸ್ವಾರ್ಥ ಸೇವೆ ಮಾಡುತ್ತಿರುವ ಕೊರೋನಾ ವಾರಿಯರ್ಸ್ ಕೆಲಸ ಕಂಡು ಕುಮಾರ್ ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ತಂಡದ ಮತ್ತೊಬ್ಬ ಸದಸ್ಯ ಸುರೇಶ್ ಕು ಮಾರ್ ತಿಳಿಸಿದ್ದಾರೆ.
ಕೋವಿಡ್ ಮಿತ್ರ ಮತ್ತು ವ್ಯಾಕ್ಸಿನೇಷನ್ ಕೇಂದ್ರಗಳಲ್ಲಿ ಕೆಲಸ ಮಾಡುವವರಲ್ಲದೆ, ಅಗತ್ಯವಿರುವವರಿಗೆ ಅಗತ್ಯ ವಸ್ತುಗಳನ್ನು ತಲುಪಿಸುವ ಸ್ವಯಂಸೇವಕರು ಮತ್ತು ಶವಸಂಸ್ಕಾರ ಕೆಲಸ ಮಾಡುವವರು ಪ್ರಯೋಜನ ಪಡೆದಿದ್ದಾರೆ.
ಜನರು ನಮ್ಮ ಕೆಲಸಗಳನ್ನು ಗುರುತಿಸಿ ಮೆಚ್ಚುಗೆ ಸೂಚಿಸುತ್ತಿರುವುದು ನಮಗೆ ಮತ್ತಷ್ಟು ಪ್ರೇರೇಪಣೆ ನೀಡುತ್ತಿದೆ, ಇದರಿಂದ ಇನ್ನೂ ಹಲವು ಮಂದಿ ಸಮಾಜ ಮುಖಿ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ಸಹಾಯವಾಗುತ್ತದೆ ಎಂದು ಸ್ವಯಂ ಸೇವಕ ಯಶಸ್ ಎಂಬುವರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


