ಕೋವಿಡ್ ವಾರಿಯರ್ಸ್

ಗ್ರಾಮ ಪಂಚಾಯಿತಿಯ 170 ಕೋವಿಡ್ ವಾರಿಯರ್ಸ್‌ಗೆ ಇನ್ನೂ ಸಿಗದ ಪರಿಹಾರ, ಸಂಕಷ್ಟದಲ್ಲಿ ಕುಟುಂಬಗಳು
ರಾಜ್ಯದ ಬಹುತೇಕ ಎಲ್ಲ ಕೋವಿಡ್ ವಾರಿಯರ್ಸ್ ಕುಟುಂಬಗಳು ಪರಿಹಾರವನ್ನು ಪಡೆದಿವೆ. ಆದರೆ, ಸುಮಾರು 170 ಗ್ರಾಮ ಪಂಚಾಯಿತಿ ಸಿಬ್ಬಂದಿಯ ಸಂಬಂಧಿಕರು ಇನ್ನೂ ಸಹಾನುಭೂತಿಯ ಆಧಾರದ ಮೇಲೆ ಯಾವುದೇ ಪರಿಹಾರ ಅಥವಾ ಉದ್ಯೋಗವನ್ನು ಪಡೆದಿಲ್ಲ.

ಮೈಸೂರು: ಪೆಟ್ರೋಲ್ ಬಂಕ್ ನಿಂದ ಕೋವಿಡ್ ವಾರಿಯರ್ ಗಳಿಗೆ 'ದುಬಾರಿ' ಉಡುಗೊರೆ!
ಇಂಧನ ಬೆಲೆ ಗಗನಕ್ಕೇರಿರುವುದರಿಂದ ಎಲ್ಲರ ಕೈ ಸುಡುತ್ತಿದೆ. ಇಂತಹ ಸಂದರ್ಭದಲ್ಲಿ ಮೈಸೂರು ಮೂಲದ ಪೆಟ್ರೋಲ್ ಬಂಕ್ ವೊಂದು ಕೋವಿಡ್ ವಾರಿಯರ್ ಗಳಿಗೆ ದುಬಾರಿ ಗಿಫ್ಟ್ ನೀಡಲು ಮುಂದಾಗಿದೆ.

ಶಿಕ್ಷಕರನ್ನು ಕೊರೋನಾ ವಾರಿಯರ್ಸ್ ಎಂದು ಘೋಷಿಸಿ: ಬಸವರಾಜ ಹೊರಟ್ಟಿ
ಕೋವಿಡ್ ಎರಡನೇ ಅಲೆಯಲ್ಲಿ ಹಲವು ಶಿಕ್ಷಕರು ಸೋಂಕಿಗೆ ಬಲಿಯಾಗಿದ್ದಾರೆ ಹೀಗಾಗಿ ಅವರನ್ನು ಕೊರೋನಾ ವಾರಿಯರ್ಸ್ ಎಂದು ಘೋಷಿಸಬೇಕು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಒತ್ತಾಯಿಸಿದ್ದಾರೆ.

ಹಾಲು ಉತ್ಪಾದಕ ಸಂಘಗಳ ನೌಕರರನ್ನು ಕೋವಿಡ್ ವಾರಿಯರ್ಸ್ ಎಂದು ಘೋಷಿಸಿ: ರಾಜ್ಯ ಸರ್ಕಾರಕ್ಕೆ ಕುಮಾರಸ್ವಾಮಿ ಆಗ್ರಹ
ಹಾಲು ಉತ್ಪಾದಕ ಸಂಘಗಳಲ್ಲಿ ಕಾರ್ಯ ನಿರ್ವಹಿಸುವ ನೌಕರರನ್ನು ಕೋವಿಡ್ ವಾರಿಯರ್ಸ್ ಎಂದು ಘೋಷಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಕೋವಿಡ್ ವಾರಿಯರ್ಸ್ ಗೆ ಮೊದಲ ಲಸಿಕೆ- ಕೇಂದ್ರ ಸಚಿವ ಅಶ್ವಿನ್ ಕುಮಾರ್ ಚೌಬೆ
ಕೊರೋನಾವೈರಸ್ ಲಸಿಕೆ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ವಿಜ್ಞಾನಿಗಳು ಶ್ರಮ ವಹಿಸುತ್ತಿದ್ದು,ಅವರ ಪ್ರಯತ್ನ ಒಂದು ವೇಳೆ ಫಲಪ್ರದವಾದರೆ ಮೊದಲ ಡೋಸ್ ನ್ನು ಕೋವಿಡ್-19 ವಾರಿಯರ್ಸ್ ಗೆ ನೀಡಲಾಗುವುದು ಎಂದು ಕೇಂದ್ರ ಆರೋಗ್ಯ ಸಹಾಯಕ ಸಚಿವ ಅಶ್ವಿನ್ ಕುಮಾರ್ ಚೌಬೆ ಶನಿವಾರ ಹೇಳಿದ್ದಾರೆ.

ಅರೆ ವೈದ್ಯಕೀಯ ವಿದ್ಯಾರ್ಥಿಗಳಿಂದ ಕೋವಿಡ್ 19 ವಾರಿಯರ್ ಆಗಿ ಕಾರ್ಯ ನಿರ್ವಹಿಸಲು ಮತ್ತೊಮ್ಮೆ ನೋಂದಣಿಗೆ ಅವಕಾಶ
ರಾಜ್ಯದಲ್ಲಿ ಕೊರೋನಾ ವೈರಸ್ ಸೋಂಕು ನಿಯಂತ್ರಣ ಕಾರ್ಯದಲ್ಲಿ ಆರೋಗ್ಯ ಯೋಧರಾಗಿ ಸೇವೆ ಸಲ್ಲಿಸಲು ಕರ್ನಾಟಕ ನರ್ಸಿಂಗ್ ಹಾಗೂ ಅರೆ ವೈದ್ಯಕೀಯ ವಿಜ್ಞಾನಗಳ ಶಿಕ್ಷಣ ನಿಯಂತ್ರಣ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬರುವ ವಿವಿಧ ಕೋರ್ಸ್‍ಗಳ ಸುಮಾರು 5 ಸಾವಿರಕ್ಕೂ ಅಧಿಕ ಅರೆ ವೈದ್ಯಕೀಯ ವಿದ್ಯಾರ್ಥಿಗಳು ಸ್ವಯಂಪ್ರೇರಿತರಾಗಿ ನೋಂದಣಿ ಮಾಡಿಕೊಂಡಿದ್ದಾರೆ.

