ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಪ್ರತಿಭೆ: ಬೆಂಗಳೂರು ನಗರಕ್ಕೆ ವಿಶ್ವದಲ್ಲಿ 5ನೇ ಶ್ರೇಯಾಂಕ!
ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI)ನಲ್ಲಿ ವಿಶ್ವದ ಅಗ್ರ ಐದು ನಗರಗಳಲ್ಲಿ ಬೆಂಗಳೂರು 5ನೇ ಸ್ಥಾನ ಪಡೆದಿದೆ. ಮೊದಲ ನಾಲ್ಕು USAಯ ನಗರಗಳಾಗಿವೆ. ಶ್ರೇಯಾಂಕ ನೀಡಿಕೆ ಅಗ್ರ 50 AI ನಗರಗಳಲ್ಲಿ ಒಂದಾಗಿದೆ, ಇದನ್ನು TIDE ಫ್ರೇಮ್‌ವರ್ಕ್‌ನಿಂದ ಅಳೆಯಲಾಗಿದ್ದು, ಹಾರ್ವರ್ಡ್ ಬ್ಯುಸಿನೆಸ್ ರಿವ್ಯೂ (HBR)ನಲ್ಲಿ ಪಟ್ಟಿಮಾಡಲಾಗಿದೆ.

ಬೆಂಗಳೂರು: ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI)ನಲ್ಲಿ ವಿಶ್ವದ ಅಗ್ರ ಐದು ನಗರಗಳಲ್ಲಿ ಬೆಂಗಳೂರು 5ನೇ ಸ್ಥಾನ ಪಡೆದಿದೆ. ಮೊದಲ ನಾಲ್ಕು USAಯ ನಗರಗಳಾಗಿವೆ. ಶ್ರೇಯಾಂಕ ನೀಡಿಕೆ ಅಗ್ರ 50 AI ನಗರಗಳಲ್ಲಿ ಒಂದಾಗಿದೆ, ಇದನ್ನು TIDE ಫ್ರೇಮ್‌ವರ್ಕ್‌ನಿಂದ ಅಳೆಯಲಾಗಿದ್ದು, ಹಾರ್ವರ್ಡ್ ಬ್ಯುಸಿನೆಸ್ ರಿವ್ಯೂ (HBR)ನಲ್ಲಿ ಪಟ್ಟಿಮಾಡಲಾಗಿದೆ.
ಟಾಪ್ 4 ನಗರಗಳು: ಮೊದಲ ನಾಲ್ಕು ನಗರಗಳು ಸ್ಯಾನ್ ಫ್ರಾನ್ಸಿಸ್ಕೋ, ನ್ಯೂಯಾರ್ಕ್, ಬೋಸ್ಟನ್ ಮತ್ತು ಸಿಯಾಟಲ್. ವೈವಿಧ್ಯತೆ ಮತ್ತು ಪ್ರತಿಭೆ ವಿಷಯಗಳಲ್ಲಿ ಶ್ರೇಯಾಂಕ ನೀಡಲಾಗುತ್ತಿದ್ದು, ಬೆಂಗಳೂರು ವಿಶ್ವದ ಎರಡನೇ ಅತಿ ದೊಡ್ಡ AI ಶ್ರೇಯಾಂಕವನ್ನು ಹೊಂದಿದೆ. ನಗರದಲ್ಲಿ ಹೂಡಿಕೆಗಳು, ಪ್ರತಿಭೆಯ ವೈವಿಧ್ಯತೆ, ದೇಶದ ಡಿಜಿಟಲ್ ಅಡಿಪಾಯಗಳ ವಿಕಾಸ (TIDE) ಮೊದಲಾದವು ನಿರ್ಧರಿಸುತ್ತವೆ.
ಇನ್ನು ಜೀವನೋಪಾಯ ನಿರ್ವಹಣೆಯಲ್ಲಿ ಬೆಂಗಳೂರು ಬೇರೆ ನಗರಗಳಿಗೆ ಹೋಲಿಸಿದರೆ ಸ್ವಲ್ಪ ಅಗ್ಗವಾಗಿದೆ. ಜೀವನೋಪಾಯ ಖರ್ಚುವೆಚ್ಚಗಳಿಗೆ, ವೈವಿಧ್ಯಮಯ ಪ್ರತಿಭೆಗಳಿಗೆ ಈ ನಗರ ಉತ್ತಮವಾಗಿದೆ. ಶ್ರೇಯಾಂಕ ಪಟ್ಟಿಯಲ್ಲಿ ಹೈದರಾಬಾದ್, ಜಕಾರ್ತ, ಲಾಗೊಸ್, ನೈರೊಬಿ, ಮೆಕ್ಸಿಕೊ ನಗರ, ಬ್ಯೂನಸ್ ಐರಿಸ್ ಮತ್ತು ಸಾõ ಪಾವೊಲೊ ನಗರಗಳು ಕೂಡ ಇವೆ.
ಜಾಗತಿಕ ಶ್ರೇಯಾಂಕದಲ್ಲಿರುವ ಭಾರತದ ನಗರಗಳಲ್ಲಿ ದೆಹಲಿ (18 ನೇ ಸ್ಥಾನ), ಹೈದರಾಬಾದ್ (19 ನೇ ಸ್ಥಾನ)ದಲ್ಲಿವೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಪ್ರತಿಭೆಗಳ ವೈವಿಧ್ಯತೆಯ ವಿಷಯದಲ್ಲಿ ಮುಂಬೈ 27 ನೇ ಸ್ಥಾನದಲ್ಲಿದೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ನಲ್ಲಿ ಬೆಂಗಳೂರು ವಿಶ್ವದಲ್ಲಿ ಅಗ್ರ 5 ನಗರಗಳ ಪೈಕಿ ಸ್ಥಾನ ಪಡೆದಿರುವುದು ಸಂತಸದ ವಿಚಾರ, ಹಲವು ಪ್ರತಿಭೆಗಳಿಗೆ ಇದು ಆಗರವಾಗಿದೆ ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ನಿರ್ದೇಶಕಿ ಹಾಗೂ ಕೈಗಾರಿಕಾಭಿವೃದ್ಧಿ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣ ಹೇಳಿದ್ದಾರೆ.
AI ಕ್ಷೇತ್ರ ಕ್ರಿಯಾತ್ಮಕವಾಗಿದೆ, ವಿಶೇಷವಾಗಿ ಅಭಿವೃದ್ಧಿಶೀಲ ಜಗತ್ತಿನಲ್ಲಿ. ನಾವೀನ್ಯತೆ ಮತ್ತು ತಂತ್ರಜ್ಞಾನದಲ್ಲಿ ನಾವು ಭವಿಷ್ಯದಲ್ಲಿ ಮುನ್ನಡೆಯಲಿದ್ದೇವೆ. AI ತಾಂತ್ರಿಕ ಸ್ಪರ್ಧಾತ್ಮಕತೆಯಲ್ಲಿ ನಿರ್ಣಾಯಕ ಯಶಸ್ಸಿನ ಅಂಶವಾಗಿ ನಾವೀನ್ಯತೆಯ ಗುಣಮಟ್ಟವನ್ನು ಒತ್ತಿಹೇಳುವ ಪ್ರಮುಖ ತಂತ್ರಜ್ಞಾನವಾಗಿದೆ ಎಂದು ಅವರು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


