ವಿಶೇಷ

ಸುಂದರ ಸೆಲ್ಫಿ ಹಿಂದೆ ರೋಚಕ ಭಯಾನಕತೆ?: ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್

ಇತ್ತೀಚೆಗೆ ಜೋಡಿಯೊಂದು ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಿದ್ದ ಸೆಲ್ಫಿಯೊಂದು ಇದೀಗ ವ್ಯಾಪಕ ವೈರಲ್ ಆಗಿದ್ದು, ಸುಂದರ ಸೆಲ್ಪಿ ಹಿಂದಿನ ರೋಚಕ ಭಯಾನಕತೆಯಿಂದಾಗಿ ಈ ಫೋಟೋ ವೈರಲ್ ಆಗುತ್ತಿದೆ.

ಸುಂದರ ಸೆಲ್ಫಿ ಹಿಂದೆ ರೋಚಕ ಭಯಾನಕತೆ?: ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್
ಟ್ವಿಟರ್ ಚಿತ್ರ
Published On :

ನವದೆಹಲಿ: ಇತ್ತೀಚೆಗೆ ಜೋಡಿಯೊಂದು ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಿದ್ದ ಸೆಲ್ಫಿಯೊಂದು ಇದೀಗ ವ್ಯಾಪಕ ವೈರಲ್ ಆಗಿದ್ದು, ಸುಂದರ ಸೆಲ್ಪಿ ಹಿಂದಿನ ರೋಚಕ ಭಯಾನಕತೆಯಿಂದಾಗಿ ಈ ಫೋಟೋ ವೈರಲ್ ಆಗುತ್ತಿದೆ.

ಆ್ಯಂಡಿ ಎಂಬ ಟ್ವಿಟರ್ ಖಾತೆದಾರ ಈ ಫೋಟೋವನ್ನು ಆಪ್ಲೋಡ್ ಮಾಡಿದ್ದು, ಐ ಲವ್ ಮೈ ಗರ್ಲ್ ಫ್ರೆಂಡ್ ಈವನ್ ಶೀ ಇಸ್ ಜೆಮಿನಿ ("I love my girlfriend even if she's a Gemini") ಎಂದು ಟ್ವೀಟ್ ಮಾಡಿದ್ದ.  ಆದರೆ ಮೇಲ್ನೋಟಕ್ಕೆ ಈ ಫೋಟೋ ಜೋಡಿಯ ಪ್ರೀತಿಯನ್ನು ತೋರಿಸುತ್ತದೆಯಾದರೂ, ಇದೇ ಫೋಟವನ್ನು ಕೊಂಚ ಕೂಲಂಕುಷವಾಗಿ ಪರಿಶೀಲಿಸಿದರೆ ಫೋಟೋ ಹಿಂದಿನ ಭಯಾನಕತೆ ಬಯಲಾಗುತ್ತದೆ.

ಈ ಟ್ವೀಟ್ ನೋಡಿದ ಲಕ್ಷಾಂತರ ಟ್ವೀಟಿಗರು ಇದಕ್ಕೆ ರೀ-ಟ್ವೀಟ್ ಮಾಡಿದ್ದು, ಇದು ಹೇಗೆ ಸಾಧ್ಯ...ಇನ್ನು ಕೆಲವರು 'ಈಕೆ ಅತ್ಯಂತ ಭಯಾನಕವಾಗಿದ್ದಾಳೆ' ಎಂದಿದ್ದಾರೆ. ಮತ್ತೆ ಕೆಲವರು ಆಕೆ ಮನುಷ್ಯಳೋ ಅಥವಾ ಭೂತವೋ ಎಂಬ  ಉದ್ಗಾರಗಳೊಂದಿಗೆ ಪ್ರಶ್ನೆಗಳ ಸುರಿಮಳೆ ಗೈದಿದ್ದಾರೆ. ಮತ್ತೆ ಕೆಲವರು ಇದನ್ನು ವ್ಯಂಗ್ಯ ಮಾಡಿದ್ದು, ಇದು ಫೋಟೋಶಾಪ್ ಪವಾಡ ಎಂದು ಟೀಕಿಸಿದ್ದಾರೆ.

ಇಷ್ಟಕ್ಕೂ ಈ ಫೋಟೋ ಹಿಂದಿರುವ ಕಥೆಯೇನು?
ಇಷ್ಟಕ್ಕೆಲ್ಲಾ ಕಾರಣವಾಗಿದ್ದು, ನೋಡುಗರು ಆ ಫೋಟೋದಲ್ಲಿ ಕಂಡ ನಂಬಲಸಾಧ್ಯವಾದ ಸತ್ಯ!. ಈ ಸೆಲ್ಫೀಯನ್ನು ಮೇಲ್ನೋಟಕ್ಕೆ ನೋಡಿದರೆ ಇಬ್ಬರ ನಡುವಿನ ಪ್ರೀತಿ ಎದ್ದು ಕಾಣುತ್ತದೆ. ಆದರೆ ಸೂಕ್ಷ್ಮವಾಗಿ ಗಮನಿಸಿದಾಗಲೇ ಈ  ಸುಂದರ ಜೋಡಿಯ ಹಿಂದಿನ ಭಯಾನಕ ರೂಪ ಕಾಣುತ್ತದೆ. ಯಾಕೆಂದರೆ ಫೋಟೋಗೆ ಫೋಸ್ ಕೊಡುವ ಯುವತಿ ಏಕಕಾಲದಲ್ಲಿ ಎರಡೆರಡು ದಿಕ್ಕಿಗೆ ಮುಖ ತೋರಿಸಿದ್ದಾಳೆ. ಸೆಲ್ಫಿ ವೇಳೆ ಯುವತಿ ಯಾವುದಾದರೂ ಒಂದೇ ದಿಕ್ಕಿಗೆ  ನೋಡಬೇಕಿತ್ತು. ಆದರೆ ಇವರ ಹಿಂದಿದ್ದ ಕನ್ನಡಿಯಲ್ಲಿ ಯುವತಿ ಅದೇ ಕ್ಷಣದಲ್ಲಿ ಹಿಂಬದಿಗೆ ನೋಡುವುದೂ ಕಾಣುತ್ತದೆ. ಓರ್ವ ವ್ಯಕ್ತಿಗೆ ಎರಡು ಮುಖಗಳಿರಲು ಸಾಧ್ಯವಿಲ್ಲ. ಇನ್ನು ಫೋಟೋ ನೋಡಿದರೆ ಆಕೆ ಸೆಲ್ಫೀಗೆ ಫೋಸ್  ನೀಡಿರುವುದು ಸ್ಪಷ್ಟವಾಗುತ್ತದೆ. ಆದರೆ ಆದೇ ಸಂದರ್ಭದಲ್ಲಿ ಆ ಕನ್ನಡಿಯಲ್ಲಿ ಕಾಣುತ್ತಿರುವುದೇನು ಎಂಬ ಪ್ರಶ್ನೆಯೂ ಮೂಡುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.