ವಿಜ್ಞಾನ-ತಂತ್ರಜ್ಞಾನ

ಫೇಸ್ ಬುಕ್, ಇನ್ ಸ್ಟಾಗ್ರಾಮ್ ಏಕಾಏಕಿ ಲಾಗೌಟ್; ಸೇವೆಯಲ್ಲಿ ವ್ಯತ್ಯಯ, ಮೆಟಾ ಸ್ಪಷ್ಟನೆ

ಖ್ಯಾತ ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್, ಇನ್ಸ್ಟಾಗ್ರಾಮ್ ಸೇರಿದಂತೆ ಮೆಟಾ ಸಂಸ್ಥೆಯ ಸರ್ವರ್ ಡೌನ್ ಆಗಿದ್ದು, ಜಗತಿನಾದ್ಯಂತ ಏಕಾಏಕಿ ಖಾತೆಗಳು ಲಾಗೌಟ್ ಆಗಿವೆ. ಇದರಿಂದ ಬಳಕೆದಾರರ ಕಂಗಲಾಗಿದ್ದು, ತಮ್ಮ ಖಾತೆ ಹ್ಯಾಕ್ ಆಗಿದೆಯೇ ಎಂದು ಪರಿಶೀಲಿಸುತ್ತಿದ್ದಾರೆ.

ಫೇಸ್ ಬುಕ್, ಇನ್ ಸ್ಟಾಗ್ರಾಮ್ ಏಕಾಏಕಿ ಲಾಗೌಟ್; ಸೇವೆಯಲ್ಲಿ ವ್ಯತ್ಯಯ, ಮೆಟಾ ಸ್ಪಷ್ಟನೆ
ಮೆಟಾ ಸರ್ವರ್ ಡೌನ್
Published On :

ಬೆಂಗಳೂರು: ಖ್ಯಾತ ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್, ಇನ್ಸ್ಟಾಗ್ರಾಮ್ ಸೇರಿದಂತೆ ಮೆಟಾ ಸಂಸ್ಥೆಯ ಸರ್ವರ್ ಡೌನ್ ಆಗಿದ್ದು, ಜಗತಿನಾದ್ಯಂತ ಏಕಾಏಕಿ ಖಾತೆಗಳು ಲಾಗೌಟ್ ಆಗಿವೆ. ಇದರಿಂದ ಬಳಕೆದಾರರ ಕಂಗಲಾಗಿದ್ದು, ತಮ್ಮ ಖಾತೆ ಹ್ಯಾಕ್ ಆಗಿದೆಯೇ ಎಂದು ಪರಿಶೀಲಿಸುತ್ತಿದ್ದಾರೆ.

ಹೌದು.. ಇಂದು ರಾತ್ರಿ 9 ಗಂಟೆ ಸುಮಾರಿನಲ್ಲಿ ಮೆಟಾ ಸಂಸ್ಥೆಯ ಜಾಲತಾಣಗಳಾದ ಫೇಸ್ಬುಕ್, ಇನ್ಸ್ಟಾಗ್ರಾಮ್ ಖಾತೆಗಳು ಏಕಾಏಕಿ ಲಾಗೌಟ್ ಆಗಿದ್ದು, ಖಾತೆದಾರರು ಮತ್ತೆ ಲಾಗಿನ್ ಆಗಲು ಪ್ರಯತ್ನಿಸಿದರೂ ಸಾಧ್ಯವಾಗುತ್ತಿಲ್ಲ. ಪಾಸ್ ವರ್ಡ್ ಬದಲಾವಣೆ ಮತ್ತು ತಪ್ಪು ಪಾಸ್ವರ್ಡ್ ನ ಸಂದೇಶಗಳು ಕಾಣಿಸುತ್ತಿದ್ದು, ಇದು ಗ್ರಾಹಕರು ತಮ್ಮ ಖಾತೆ ಹ್ಯಾಕ್ ಆಗಿದೆಯೇ ಎಂದು ಆತಂಕಗೊಂಡು ಪದೇ ಪದೇ ಪರಿಶೀಲಿಸುವಂತೆ ಮಾಡಿದೆ.

ಮತ್ತೊಂದೆಡೆ ರಾತ್ರಿ 9ರ ಸುಮಾರಿಗೆ ಏಕಾಏಕಿ ಫೇಸ್​ಬುಕ್​ ಹಾಗೂ ಇನ್ಸ್ಟಾಗ್ರಾಮ್ ಏಕಾಏಕಿ ತನ್ನಷ್ಟಕ್ಕೆ ತಾನೇ ಲಾಗೌಟ್ ಆಗಿದ್ದು, ಫೇಸ್ಬುಕ್​ ಪಾಸ್​ವರ್ಡ್​ ಮರೆತವರು ಪುನಃ ಲಾಗಿನ್ ಆಗುವುದಕ್ಕೆ ಪರದಾಡುವಂತಾಗಿದೆ. ಆದರೆ ಈ ಘಟನೆ ಕುರಿತು ಈ ವರೆಗೂ ಫೇಸ್ ಬುಕ್ ಸಂಸ್ಥೆ ಯಾವುದೇ ರೀತಿಯ ಸ್ಪಷ್ಟನೆ ನೀಡಿಲ್ಲ.

ಫೇಸ್ ಬುಕ್ ಡೌನ್ ಬೆನ್ನಲ್ಲೇ ಖಾತೆದಾರರು ಟ್ವಿಟರ್ ಗೆ ದೌಡಾಯಿಸುತ್ತಿದ್ದು, ಈ ಸಮಸ್ಯೆ ತಮಗೆ ಮಾತ್ರವೇ ಇಲ್ಲ ಎಲ್ಲ ಖಾತೆದಾರಿಗೂ ಆಗುತ್ತಿದೆಯೇ ಎಂದು ಪರಿಶೀಲಿಸುತ್ತಿದ್ದಾರೆ.

ಮೆಟಾ ಸ್ಪಷ್ಟನೆ

ಇನ್ನು ತಾಂತ್ರಿಕ ವ್ಯತ್ಯಯ ಕುರಿತು ಮೆಟಾ ಸಂಸ್ಥೆಯ ವಕ್ತಾರ ಆಂಡಿ ಸ್ಟೋನ್ ಸ್ಪಷ್ಟನೆ ನೀಡಿದ್ದು, ಈ ಕುರಿತು ಟ್ವೀಟ್ ಮಾಡಿರುವ ಅವರು, "ಇಂದು, ತಾಂತ್ರಿಕ ಸಮಸ್ಯೆಯಿಂದಾಗಿ ಜನರು ನಮ್ಮ ಕೆಲವು ಸೇವೆಗಳನ್ನು ಪ್ರವೇಶಿಸಲು ತೊಂದರೆ ಅನುಭವಿಸಿದರು. ನಾವು ಸಾಧ್ಯವಾದಷ್ಟು ಬೇಗ ಸಮಸ್ಯೆಯನ್ನು ಪರಿಹರಿಸಿದ್ದೇವೆ ಮತ್ತು ಯಾವುದೇ ಅನಾನುಕೂಲತೆಗಾಗಿ ನಾವು ಕ್ಷಮೆಯಾಚಿಸುತ್ತೇವೆ ಎಂದು ಟ್ವೀಟ್ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.