ಇಸ್ರೋ ಸೋಲಾರ್ ಮಿಶನ್: ಜನವರಿ 6ಕ್ಕೆ ಗಮ್ಯ ಸ್ಥಾನ ತಲುಪಲಿದೆ ಆದಿತ್ಯ ಎಲ್1
ಭಾರತದ ಚೊಚ್ಚಲ ಸೌರ ಮಿಷನ್ ಆದಿತ್ಯ-ಎಲ್ 1 ತನ್ನ ಗಮ್ಯಸ್ಥಾನವನ್ನು, ಭೂಮಿಯಿಂದ 1.5 ಮಿಲಿಯನ್ ಕಿಮೀ ದೂರದಲ್ಲಿರುವ ಲಗ್ರಾಂಜಿಯನ್ ಪಾಯಿಂಟ್ (ಎಲ್ 1) ಅನ್ನು ಜನವರಿ 6 ರಂದು ತಲುಪಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಧ್ಯಕ್ಷ ಎಸ್ ಸೋಮನಾಥ್ ಅವರು ಶನಿವಾರ ಹೇಳಿದ್ದಾರೆ.

ಅಹಮದಾಬಾದ್: ಭಾರತದ ಚೊಚ್ಚಲ ಸೌರ ಮಿಷನ್ ಆದಿತ್ಯ-ಎಲ್ 1 ತನ್ನ ಗಮ್ಯಸ್ಥಾನವನ್ನು, ಭೂಮಿಯಿಂದ 1.5 ಮಿಲಿಯನ್ ಕಿಮೀ ದೂರದಲ್ಲಿರುವ ಲಗ್ರಾಂಜಿಯನ್ ಪಾಯಿಂಟ್ (ಎಲ್ 1) ಅನ್ನು ಜನವರಿ 6 ರಂದು ತಲುಪಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಧ್ಯಕ್ಷ ಎಸ್ ಸೋಮನಾಥ್ ಅವರು ಶನಿವಾರ ಹೇಳಿದ್ದಾರೆ.
ವಿಜ್ಞಾನ ಭಾರತಿ ಎಂಬ ಸ್ವಯಂ ಸೇವಾ ಸಂಸ್ಥೆ ಆಯೋಜಿಸಿದ್ದ ಭಾರತೀಯ ವಿಜ್ಞಾನ ಸಮ್ಮೇಳದಲ್ಲಿ ಈ ಕುರಿತು ಅವರು ಸೋಮನಾಥ್ ಮಾಹಿತಿ ನೀಡಿದರು.
ಸೂರ್ಯನ ಸಮಗ್ರ ಅಧ್ಯಯನಕ್ಕೆ ಇಸ್ರೋ ಆದಿತ್ಯ ಎಲ್1 ನೌಕೆಯನ್ನು ಸೆಪ್ಟೆಂಬರ್ 2ರಂದು ಶ್ರೀಹರಿಕೋಟದಿಂದ ಉಡಾವಣೆ ಮಾಡಿತ್ತು. ಆದಿತ್ಯ-ಎಲ್1 ಜನವರಿ 6ರಂದು ಎಲ್1 ಪಾಯಿಂಟ್ ಪ್ರವೇಶಿಸಲಿದೆ. ಅದರ ಕುರಿತಂತೆ ನಿಖರ ಸಮಯವನ್ನು ಪ್ರಕಟಿಸಲಾಗುವುದು ಎಂದು ಹೇಳಿದರು.
ನೌಕೆ ಎಲ್1 ಬಿಂದು ತಲುಪುತ್ತಿದ್ದಂತೆ ನಾವು ಮತ್ತೊಮ್ಮೆ ಇಂಜಿನ್ ಅನ್ನು ಹೊತ್ತಿಸುತ್ತೇವೆ. ಮತ್ತೆ ಅದು ಎಲ್ಲಿಗೂ ಹೋಗಬಾರದೆಂದು ಹೀಗೆ ಮಾಡಲಾಗುತ್ತದೆ. ಇದು ಬಿಂದುವಿನ ಸ್ಥಾನಕ್ಕೆ ಹೋಗಲಿದ್ದು, ಒಮ್ಮೆ ಇದು ನಿರ್ದಿಷ್ಟ ಬಿಂದುವಿನ ಸ್ಥಳಕ್ಕೆ ತಲುಪಿದರೆ, ಅದರ ಸುತ್ತ ನೌಕೆಯು ಸುತ್ತಲಿದೆ ಎಂದು ತಿಳಿಸಿದರು.
ಆದಿತ್ಯ ಎಲ್1 ತನ್ನ ನಿಗದಿತ ಸ್ಥಾನವನ್ನು ಒಮ್ಮೆ ತಲುಪಿದರೆ, ಮುಂದಿನ ಐದು ವರ್ಷ ಸೂರ್ಯನಲ್ಲಿ ಏನೆಲ್ಲಾ ಘಟನೆಗಳು ನಡೆಯಲಿದೆ ಎಂದು ಮಾಪನ ಮಾಡಲು ಸಹಾಯವಾಗಲಿದೆ. ನಿಗದಿತ ಸ್ಥಳಕ್ಕೆ ತಲುಪಿದರೆ, ಮುಂದಿನ ಐದು ವರ್ಷ ಅಲ್ಲಿಯೇ ಸ್ಥಿರವಾಗಿ ಇರಲಿದೆ. ಕೇವಲ ಭಾರತಕ್ಕೆ ಮಾತ್ರವಲ್ಲದೇ, ಜಗತ್ತಿಗೆ ಬೇಕಾದ ಎಲ್ಲಾ ದತ್ತಾಂಶಗಳನ್ನು ಸಂಗ್ರಹಿಸಲಿದೆ. ಈ ದತ್ತಾಂಶವೂ ಸೂರ್ಯನ ಡೈನಾಮಿಕ್ಸ್ ಮತ್ತು ಅದು ನಮ್ಮ ಜೀವನದ ಮೇಲೆ ಬೀರುವ ಪರಿಣಾಮ ಅರಿಯಲು ಸಹಕಾರಿಯಾಗಲಿದೆ. ಈ ಮೂಲಕ ಭಾರತವು ಹೇಗೆ ತಾಂತ್ರಿಕವಾಗಿ ಶಕ್ತಿಶಾಲಿಯಾಗುತ್ತಿದೆ ಎಂಬುದು ತಿಳಿಯಲಿದೆ ಎಂದು ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಸೂಚನೆಯಂತೆ ಅಮೃತ ಕಾಲದ ಸಮಯದಲ್ಲಿ 'ಭಾರತೀಯ ಬಾಹ್ಯಾಕಾಶ ನಿಲ್ದಾಣ' ನಿರ್ಮಿಸಲು ಇಸ್ರೋ ಯೋಜನೆ ರೂಪಿಸಿದೆ. ಭಾರತವು ಎಲ್ಲದರಲ್ಲೂ ನಾಯಕನಾಗಲು ಸಾಧ್ಯವಿಲ್ಲ. ಆದರೆ, ಸಾಧ್ಯವಿರುವ ಕ್ಷೇತ್ರಗಳ ಮೇಲೆ ನಾವು ಗಮನಹರಿಸಬೇಕು ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


