ಅಪರೂಪದ ಘಟನೆ: ಅಕ್ಟೋಬರ್ 31 ರಂದು 'ಬ್ಲೂ ಮೂನ್' ದರ್ಶನ
ಚಂದ್ರನ ಕಂಡರೆ ಅದೇನೋ ಎಲ್ಲರಿಗೂ ತೀರದ ಕುತೂಹಲ, ಅರಿತಷ್ಟೂ ಇನ್ನಷ್ಟು ಅರಿಯಬೇಕು ಎಂಬ ಆಸೆ ವಿಜ್ಞಾನಿಗಳದ್ದು.

ಚಂದ್ರನ ಕಂಡರೆ ಅದೇನೋ ಎಲ್ಲರಿಗೂ ತೀರದ ಕುತೂಹಲ, ಅರಿತಷ್ಟೂ ಇನ್ನಷ್ಟು ಅರಿಯಬೇಕು ಎಂಬ ಆಸೆ ವಿಜ್ಞಾನಿಗಳದ್ದು..
ಇಂತಹ ಅಪರೂಪದ ಚಂದ್ರನ ದರ್ಶನ (ಬ್ಲೂ ಮೂನ್) ಅ.31 ರಂದು ಆಗಲಿದೆ. ಬ್ಲೂ ಮೂನ್ ಅಂದಾಕ್ಷಣ ಚಂದ್ರ ನೀಲಿ ಬಣ್ಣದಲ್ಲಿ ಕಾಣಿಸುತ್ತಾನೆ ಎಂದು ಅರ್ಥವಲ್ಲ. ಸಾಮಾನ್ಯವಾಗಿ ತಿಂಗಳಿಗೆ ಒಮ್ಮೆ ಕಾಣಿಸಿಕೊಳ್ಳುವ ಹುಣ್ಣಿಮೆ ಚಂದ್ರ ಎರಡನೇ ಹುಣ್ಣಿಮೆಯಂದು ಕಾಣಿಸುವುದಕ್ಕೆ ಬ್ಲೂ ಮೂನ್ ಎನ್ನುತ್ತಾರೆ. ಇದು ಬರುವುದು ತುಂಬಾ ವಿರಳ. ಅ.1 ರಂದು ಕಾಣಿಸಿದ್ದ ಹುಣ್ಣಿಮೆ ಚಂದ್ರ ಈಗ ಅ.31 ರಂದು ಕಾಣಿಸಿಕೊಳ್ಳುತ್ತಿದೆ.
2007 ರ ಜೂನ್ ತಿಂಗಳಲ್ಲಿ ಈ ರೀತಿಯ ಬ್ಲೂ ಮೂನ್ ಕಾಣಿಸಿಕೊಂಡಿತ್ತು, ಮುಂದಿನ ಬ್ಲೂಮೂನ್ 2050 ರ ಸೆ.30 ರಂದು ಕಾಣಸಿಗುತ್ತದೆ. 2018 ರಲ್ಲಿ ಎರಡು ಬ್ಲೂ ಮೂನ್ ಗಳು ಕಾಣಿಸಿಕೊಂಡಿತ್ತು, ಜ.31 ರಂದು ಹಾಗೂ ಮಾ.31 ರಂದು ಬ್ಲೂ ಮೂನ್ ಕಾಣಿಸಿಕೊಂಡಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


