ಅಜ್ಞಾತ ಮೂಲದಿಂದ ನಿಯಮಿತ ಕ್ಷಿಪ್ರ ರೇಡಿಯೊ ಸ್ಫೋಟ ಗುರುತಿಸಿದ ಖಗೋಳ ಶಾಸ್ತ್ರಜ್ಞರು
ಅಜ್ಞಾತ ಮೂಲದಿಂದ ನಿಯಮಿತವಾಗಿ ಕ್ಷಿಪ್ರ ರೇಡಿಯೋ ಸ್ಫೋಟಗಳನ್ನು ಖಗೋಳ ಶಾಸ್ತ್ರಜ್ಞರು ಗುರುತಿಸಿದ್ದಾರೆ.

ಅಜ್ಞಾತ ಮೂಲದಿಂದ ನಿಯಮಿತವಾಗಿ ಕ್ಷಿಪ್ರ ರೇಡಿಯೋ ಸ್ಫೋಟಗಳನ್ನು ಖಗೋಳ ಶಾಸ್ತ್ರಜ್ಞರು ಗುರುತಿಸಿದ್ದಾರೆ.
ಸಂಶೋಧಕರು ವಿಚಿತ್ರವಾದ ನಿರಂತರವಾಗಿ ಕೇಳುವ ಫಾಸ್ಟ್ ರೇಡಿಯೋ ಬರ್ಸ್ಟ್ಸ್ (ಎಫ್ಆರ್ ಬಿ) ಗಳು ನಮ್ಮ ಗ್ಯಾಲೆಕ್ಸಿಯಿಂದ ಹೊರಗೆ 500 ಮಿಲಿಯನ್ ಬೆಳಕಿನ ವರ್ಷದಷ್ಟು ದೂರದಲ್ಲಿ ಇದು ಕಂಡುಬಂದಿದೆ. ಕೆಲವು ಮಿಲಿಸೆಕೆಂಡುಗಳ ಕಾಲವಷ್ಟೇ ಉಳಿಯುವ ಇವುಗಳು ಮತ್ತು ಆ ಸಮಯದಲ್ಲಿ ಶಕ್ತಿಯು ಬಿಡುಗಡೆಯಾಗಿ ಗ್ಯಾಲೆಕ್ಸಿಯಲ್ಲೇ ಅತ್ಯಂತ ಪ್ರಕಾಶಮಾನವಾಗಿರುತ್ತವೆ. ಇದು ಖಗೋಳ ವಿಜ್ಞಾನಿಗಳಿಗೆ ಅತ್ಯಂತ ಕುತೂಹಲ ಮೂಡಿಸುತ್ತಿದೆ.
2007 ರಲ್ಲಿ ಎಫ್ಆರ್ ಬಿ ಮೊದಲ ಬಾರಿಗೆ ಪತ್ತೆಯಾಗಿತ್ತು. ಈ ವರೆಗೂ ಇಂತಹ 100 ಎಫ್ ಆರ್ ಬಿಯನ್ನು ಪತ್ತೆ ಮಾಡಲಾಗಿದೆ.
ಈಗ ಪತ್ತೆಯಾಗಿರುವ ಕ್ಷಿಪ್ರ ರೇಡಿಯೊ ಸ್ಫೋಟಗಳು ಬೇರೆಯದ್ದಕ್ಕಿಂತ ಭಿನ್ನವಾಗಿದ್ದು, ಈ ಕ್ಷಿಪ್ರ ರೇಡಿಯೋ ಸ್ಫೋಟಗಳಿಗೆ ಕಾರಣವಾಗಿರುವ ಅಂಶವನ್ನು ತಿಳಿದುಕೊಳ್ಳಲು ಸಹಕಾರಿ ಎನ್ನುತ್ತಿದ್ದಾರೆ ಖಗೋಳ ಶಾಸ್ತ್ರಜ್ಞರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


