ವಿಜ್ಞಾನ-ತಂತ್ರಜ್ಞಾನ

ಕೊರೋನಾ ಕುರಿತು ವದಂತಿ ಹರಡುವ ಭಯ-ಫಾರ್ವರ್ಡ್ ಸಂದೇಶ ರವಾನೆಗೆ ಹೊಸ ನಿಯಮ ರೂಪಿಸಿದ ವಾಟ್ಸ್‌ಆ್ಯಪ್!

ಕೊರೋನಾವೈರಸ್ ಹಾವಳಿಯ ನಡುವೆ ತನ್ನ ಪ್ಲಾಟ್‌ಫಾರ್ಮ್ ಮೂಲಕ ತಪ್ಪು ಮಾಹಿತಿ ಮತ್ತು ನಕಲಿ ಸುದ್ದಿಗಳ ಹರಡುವಿಕೆಯನ್ನು ತಡೆಯುವ ಉದ್ದೇಶದಿಂದ ವಾಟ್ಸ್‌ಆ್ಯಪ್ ವಿನೂತನ ನಿಯಮವನ್ನು ಜಾರಿಗೆ ತಂದಿದೆ. ಇದರಂತೆ ಒಮ್ಮೆಗೆ ಫಾರ್ವರ್ಡ್ ಸಂದೇಶವನ್ನು ಕೇವಲ ಒಂದು ಚಾಟ್‌ಗೆ ಮಾತ್ರ ಹಂಚಿಕೊಳ್ಳಲು ಅನುವು ಮಾಡಿಕೊಡಲಿದೆ.

ಕೊರೋನಾ ಕುರಿತು ವದಂತಿ ಹರಡುವ ಭಯ-ಫಾರ್ವರ್ಡ್ ಸಂದೇಶ ರವಾನೆಗೆ ಹೊಸ ನಿಯಮ ರೂಪಿಸಿದ ವಾಟ್ಸ್‌ಆ್ಯಪ್!
ವಾಟ್ಸ್‌ಆ್ಯಪ್!
Published On :

ನವದೆಹಲಿ: ಕೊರೋನಾವೈರಸ್ ಹಾವಳಿಯ ನಡುವೆ ತನ್ನ ಪ್ಲಾಟ್‌ಫಾರ್ಮ್ ಮೂಲಕ ತಪ್ಪು ಮಾಹಿತಿ ಮತ್ತು ನಕಲಿ ಸುದ್ದಿಗಳ ಹರಡುವಿಕೆಯನ್ನು ತಡೆಯುವ ಉದ್ದೇಶದಿಂದ ವಾಟ್ಸ್‌ಆ್ಯಪ್ ವಿನೂತನ ನಿಯಮವನ್ನು ಜಾರಿಗೆ ತಂದಿದೆ. ಇದರಂತೆ ಒಮ್ಮೆಗೆ ಫಾರ್ವರ್ಡ್ ಸಂದೇಶವನ್ನು  ಕೇವಲ ಒಂದು ಚಾಟ್‌ಗೆ ಮಾತ್ರ ಹಂಚಿಕೊಳ್ಳಲು ಅನುವು ಮಾಡಿಕೊಡಲಿದೆ.

ಫೇಸ್‌ಬುಕ್ ಒಡೆತನದ ವಾಟ್ಸ್‌ಆ್ಯಪ್ ತನ್ನ ಪ್ಲಾಟ್‌ಫಾರ್ಮ್ ಮೂಲಕ ನಕಲಿ ಸುದ್ದಿಗಳ ಹರಡುವಿಕೆ ತಡೆಯಲು ಹೊಸ ವೈಶಿಷ್ಟ್ಯವನ್ನು ಪರಿಚಯಿಸಿದೆ. ದೇಶಾದ್ಯಂತ ಲಾಕ್‌ಡೌನ್‌ಗಳ ನಡುವೆ ಸಂಪರ್ಕದಲ್ಲಿರಲು ಜನರು ಸಕ್ರಿಯವಾಗಿ ವಾಟ್ಸಾಪ್ ಅನ್ನು ಬಳಸುತ್ತಿರುವ ಸಮಯದಲ್ಲಿ ಈ ಬದಲಾವಣೆ ಆಗಿದೆ.

ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ವದಂತಿಗಳು ಮತ್ತು ನಕಲಿ ಸುದ್ದಿಗಳ ಹರಡುವಿಕೆಯನ್ನು ನಿಯಂತ್ರಿಸಲು ಜಾಗತಿಕ ರಾಷ್ಟ್ರಗಳು  ಹೊಸ ಕ್ರಮಗಳನ್ನು ಪ್ರಾರಂಭಿಸುತ್ತಿರುವ ಸಮಯದಲ್ಲಿ ವಾಟ್ಸಾಪ್‌ ಈ ಹೊಸ ನಿಯಮಾವಳಿ ರೂಪಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.