ಇದೇ ತಿಂಗಳ 22 ರಂದು ರಿ ಸ್ಯಾಟ್ 2 ಬಿ ಭೂ ಪರಿ ವೀಕ್ಷಣೆ ಉಪಗ್ರಹದ ಉಡಾವಣೆಗೆ ಇಸ್ರೋ ಸಿದ್ಧತೆ
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ- ಇಸ್ರೋ ಇದೇ ತಿಂಗಳ 22 ರಂದು ರಿ ಸ್ಯಾಟ್ 2 ಬಿ ಎನ್ನುವ ರಾಡಾರ್ ಇಮೇಜಿಂಗ್ ಭೂ ಪರಿವೀಕ್ಷಣೆ ಉಪಗ್ರಹಣ ಉಡಾವಣೆಗೆ ಸಿದ್ಧತೆ ನಡೆಸಿದೆ.

ಚೆನ್ನೈ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ- ಇಸ್ರೋ ಇದೇ ತಿಂಗಳ 22 ರಂದು ರಿ ಸ್ಯಾಟ್ 2 ಬಿ ಎನ್ನುವ ರಾಡಾರ್ ಇಮೇಜಿಂಗ್ ಭೂ ಪರಿವೀಕ್ಷಣೆ ಉಪಗ್ರಹಣ ಉಡಾವಣೆಗೆ ಸಿದ್ಧತೆ ನಡೆಸಿದೆ. ಪಿಎಸ್ ಎಲ್ ವಿ - ಸಿ 46 ಉಡಾವಣಾ ವಾಹಕದ ಮೂಲಕ ಉಪಗ್ರಹವನ್ನು ಬಾಹ್ಯಾಕಾಶಕ್ಕೆ ಕೊಂಡೊಯ್ಯಲಾಗುತ್ತದೆ.
ಶ್ರೀಹರಿಕೋಟಾದ ಸತೀಶ್ ಧವನ್ ಉಡಾವಣಾ ಕೇಂದ್ರದಿಂದ ಮೇ 22 ರಂದು ಬೆಳಗ್ಗೆ 5. 27ಕ್ಕೆ ಉಡಾವಣೆ ನಡೆಸಲು ತಾತ್ಕಾಲಿಕವಾಗಿ ಸಮಯವನ್ನು ನಿಗದಿಪಡಿಸಲಾಗಿದೆ. ಹವಾಮಾನ ವೈಪರೀತ್ಯದ ಸಂದರ್ಭ ಎದುರಾದಲ್ಲಿ ಮಾತ್ರ ಈ ವೇಳಾಪಟ್ಟಿ ಬದಲಾಗಲಿದೆ ಎಂದು ಇಸ್ರೋ ಮೂಲಗಳು ತಿಳಿಸಿದೆ.
ಪಿಎಸ್ ಎಲ್ ವಿ- ಸಿ46, ಪಿಎಸ್ ಎಲ್ ವಿ ಯೋಜನೆಯ 48ನೆಯ ರಾಕೆಟ್ ಆಗಿದ್ದು, ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಯಾಗುತ್ತಿರುವ 72ನೇಯ ಉಪಗ್ರಹ ವಾಹಕವಾಗಿದೆ. ರಿ ಸ್ಯಾಟ್ 2 ಬಿ ಉಪಗ್ರಹವನ್ನು ಭೂಮಿಯಿಂದ 555 ಕಿಲೋಮೀಟರ್ ಎತ್ತರದಲ್ಲಿ ಕಕ್ಷೆಯಲ್ಲಿ ಇರಿಸಲಾಗುತ್ತದೆ ಎಂದು ಇಸ್ರೋ ಪ್ರಕಟಣೆಯಲ್ಲಿ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


