ಸುಳ್ಳು ಸುದ್ದಿಗೆ ಬ್ರೇಕ್; ಫಾರ್ವರ್ಡ್ ಮಸೇಜ್ ಗಳ ಕಡಿತಗೊಳಿಸಿದ ವಾಟ್ಸಪ್
ಖ್ಯಾತ ಮೆಸೆಜಿಂಗ್ ಜಾಲತಾಣ ವಾಟ್ಸಪ್ ಸುಳ್ಳು ಸುದ್ದಿಗಳು ಮತ್ತು ಗಾಸಿಪ್ ಗಳನ್ನು ನಿಯಂತ್ರಿಸಲು ಪ್ರಮುಖ ನಿರ್ಣಯವೊಂದನ್ನು ಕೈಗೊಂಡಿದ್ದು, ಫಾರ್ವರ್ಡ್ ಮಸೇಜ್ ಗಳ ಸಂಖ್ಯೆಯನ್ನು ಕಡಿತಗೊಳಿಸಿದೆ.

Published On :
ನವದೆಹಲಿ: ಖ್ಯಾತ ಮೆಸೆಜಿಂಗ್ ಜಾಲತಾಣ ವಾಟ್ಸಪ್ ಸುಳ್ಳು ಸುದ್ದಿಗಳು ಮತ್ತು ಗಾಸಿಪ್ ಗಳನ್ನು ನಿಯಂತ್ರಿಸಲು ಪ್ರಮುಖ ನಿರ್ಣಯವೊಂದನ್ನು ಕೈಗೊಂಡಿದ್ದು, ಫಾರ್ವರ್ಡ್ ಮಸೇಜ್ ಗಳ ಸಂಖ್ಯೆಯನ್ನು ಕಡಿತಗೊಳಿಸಿದೆ.
ವಾಟ್ಸಪ್ ಹೊಸ ಅಪ್ ಡೇಟ್ ನಲ್ಲಿ ಈ ಬದಲಾವಣೆ ಮಾಡಲಾಗಿದ್ದು, ಮೆಸೆಜ್ ಗಳ ಫಾರ್ವರ್ಡ್ ಗರಿಷ್ಠ ಮಿತಿಯನ್ನು ಕಡಿಮೆಗೊಳಿಸಲಾಗಿದೆ. ಈ ಹಿಂದೆ ಒಂದು ಮೆಸೇಜ್ ಅನ್ನು ಗರಿಷ್ಚ 20 ಮಂದಿಗೆ ಪಾರ್ವರ್ಡ್ ಮಾಡಬಹುದಾಗಿತ್ತು. ಇದೀಗ ಸಂಖ್ಯೆಯನ್ನು ಕೇವಲ 5 ಮಂದಿಗೆ ಇಳಿಸಲಾಗಿದೆ.
ತನ್ನ ನೂತನ ಬದಲಾವಣೆ ಕುರಿತು ವಾಟಸ್ಪ್ ಸಂಸ್ಥೆ ಗ್ರಾಹಕರಲ್ಲಿ ಜಾಹಿರಾತುಗಳ ಮೂಲಕ ಜಾಗೃತಿ ಮೂಡಿಸುತ್ತಿದ್ದು, ಅಲ್ಲದೆ ಸುದ್ದಿ ಪತ್ರಿಕೆಗಳಲ್ಲಿ ಈ ಬಗ್ಗೆ ಜಾಹಿರಾತು ನೀಡಲೂ ಮುಂದಾಗಿದೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಂಸ್ಛೆ ಕಳೆದ ಆರು ತಿಂಗಳಿನಿಂದ ನಾವು ಬಳಕೆದಾರರಿಂದ ಮತ್ತು ತಜ್ಞರಿಂದ ಈ ಬಗ್ಗೆ ಪ್ರತಿಕ್ರಿಯೆ ಪಡೆದಿದ್ದು, ಇದೀಗ ಈ ನೂತನ ಬದಲಾವಣೆಗೆ ಮುಂದಾಗಿದ್ದೇವೆ. ನೂತನ ಬದಲಾವಣೆ ಇಂದಿನಿಂದಲೇ ಜಾರಿಗೆ ಬರಲಿದೆ. ಬಳಕೆದಾರರು ಆ್ಯಪ್ ಅಪ್ ಡೇಟ್ ಮಾಡಿದ ಬಳಿಕ ಈ ನೂತನ ಬದಲಾವಣೆಯನ್ನು ಗಮನಿಸಬಹುದು ಎಂದು ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


